• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಸರ್ಕಾರದ ನಿರ್ಬಂಧ ವಿರೋಧಿಸಿ ರಾಜೀನಾಮೆ ಇತ್ತ ಐಎಎಸ್ ಅಧಿಕಾರಿ

|

ನವದೆಹಲಿ, ಆಗಸ್ಟ್ 25: ಆತನಿಗಿನ್ನು 33 ವರ್ಷ ವಯಸ್ಸು, ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯಲ್ಲಿ ರಕ್ಷಣೆ, ಪರಿಹಾರ ಕಾರ್ಯ ನಿಭಾಯಿಸಿದ ಸಮರ್ಥ ಆಡಳಿತಗಾರ. ಆದರೆ, ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸರ್ಕಾರ ವಿಧಿಸಿರುವ ನಿರ್ಬಂಧವನ್ನು ವಿರೋಧಿಸಿದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರೀತಿ ಮಹತ್ವದ ನಿರ್ಧಾರ ಕೈಗೊಂಡವರು. AGMUT ಕೆಡರ್ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್.

ಈ ಹಿಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ರೂಪವಾಗಿ ಐಎಎಸ್ ಹುದ್ದೆಯನ್ನು ಷಾ ಫಸಲ್ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು. ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿ ಫಸಲ್ ಅವರು ಇತ್ತೀಚೆಗೆ ಶ್ರೀನಗರಕ್ಕೆ ತೆರಳಲು ಯತ್ನಿಸುತ್ತಿದ್ದಂತೆ ಅವರನ್ನು ಬಂಧಿಸಿ, ಗೃಹಬಂಧನಕ್ಕೊಳಪಡಿಸಲಾಗಿತ್ತು.

ಪ್ರವಾಹ ಪರಿಹಾರ: ಕಾಳಜಿ ಕೇಂದ್ರದಲ್ಲಿ ಕಣ್ಮನ ಸೆಳೆದ ಮಹಿಳಾ ಅಧಿಕಾರಿ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ವಿಧಿಯನ್ನು ಮೋದಿ ಸರ್ಕಾರ ಹಿಂಪಡೆದ ಬಳಿಕ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ಕಣ್ಣನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಐಎಎಸ್ ಟಾಪರ್ ಫೈಸಲ್ 'ರೇಪಿಸ್ತಾನ್' ಟ್ವೀಟ್ ವಿರುದ್ಧ ಕ್ರಮ

ಗೋಪಿನಾಥನ್ ಸದ್ಯ ದಾದ್ರ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಪ್ರಮುಖ ಹುದ್ದೆಯಲ್ಲಿದ್ದಾರೆ. ಸರ್ಕಾರಿ ಸ್ವಾಮ್ಯದ ವಿದ್ಯುಚ್ಛಕ್ತಿ ಪ್ರಸರಣ ವಿಭಾಗವನ್ನು ಲಾಭದಾಯಕ ಸಂಸ್ಥೆಯಾಗುವಂತೆ ಮಾಡಿದ್ದಾರೆ.

2012ರ ಬ್ಯಾಚಿನ ಐಎಎಸ್ ಅಧಿಕಾರಿ ಕಣ್ಣನ್

2012ರ ಬ್ಯಾಚಿನ ಐಎಎಸ್ ಅಧಿಕಾರಿ ಕಣ್ಣನ್

2012ರ ಬ್ಯಾಚಿನ AGMUT ಕೆಡರ್ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಗೃಹ ಇಲಾಖೆಗೆ ತಮ್ಮ ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಮೂಲ ಹಕ್ಕುಗಳನ್ನು ಕಳೆದ 20 ದಿನಗಳಿಂದ ಹತ್ತಿಕ್ಕಲಾಗಿದೆ. ದೇಶದ ಬೇರೆ ಭಾಗದ ಜನರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, 2019ರಲ್ಲಿ ಈ ರೀತಿ ನಡೆದಿದೆ ಎಂಬುದು ನಂಬಲಾಗುತ್ತಿಲ್ಲ. ಕಲಂ 370ರದ್ದು ಪಡಿಸಿದ್ದು ದೊಡ್ಡ ವಿಷಯವಲ್ಲ, ವಿಶೇಷ ಅಧಿಕಾರ ಹಿಂಪಡೆದಿದ್ದರ ಪರ ಅಥವಾ ವಿರೋಧ ಚರ್ಚೆ, ವಿರೋಧ,, ಪ್ರತಿಭಟನೆ ನಿರೀಕ್ಷಿತ, ಇದು ಅವರ ಮೂಲ ಹಕ್ಕು, ಆದರೆ, ಸಂವಿಧಾನ ನೀಡಿರುವ ಮೂಲಹಕ್ಕನ್ನು ಕಸಿದುಕೊಳ್ಳುವ ಯತ್ನಕ್ಕೆ ಪ್ರತಿರೋಧ ರೂಪವಾಗಿ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಕಣ್ಣನ್ ಹೇಳಿದ್ದಾರೆ.

ಇಂಜಿನಿಯರ್ ಕೂಡಾ ಆಗಿರುವ ಕಣ್ಣನ್

ಇಂಜಿನಿಯರ್ ಕೂಡಾ ಆಗಿರುವ ಕಣ್ಣನ್

ಐಎಎಸ್ ಅಧಿಕಾರಿ ಜೊತೆಗೆ ಇಂಜಿನಿಯರ್ ಕೂಡಾ ಆಗಿರುವ ಕಣ್ಣನ್ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಜನಾನುರಾಗಿಯಾಗಲು ಇದು ಕೂಡಾ ಪ್ರಮುಖ ಅಸ್ತ್ರ ಎಂದು ನಂಬಿದ್ದಾರೆ. ಸರ್ಕಾರಿ ಹುದ್ದೆಯ ಮೂಲಕ ಸೇವೆ ಸಲ್ಲಿಸುವುದಲ್ಲದೆ, ಬಿಡುವು ಸಿಕ್ಕಾಗೆಲ್ಲ ಸರ್ಕಾರೇತರ ಸಂಸ್ಥೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ, ಸ್ಲಂಗಳಲ್ಲಿ ವಾಸಿಸುವವರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು. ಈ ಸಾಮಾಜಿಕ ಸೇವೆಗಳನ್ನು ಮಾಡುವ ವೇಳೆಯಲ್ಲೇ ತಮ್ಮ ಬಾಳಾ ಸಂಗತಿಯನ್ನು ಕಣ್ಣನ್ ಹುಡುಕಿಕೊಂಡಿದ್ದಾರೆ.

ಕಾಶ್ಮೀರ ನಿರ್ಧಾರ ವಿರೋಧಿಸಿ ಐಎಎಸ್ ಅಧಿಕಾರಿ ರಾಜೀನಾಮೆ

ಕಾಶ್ಮೀರ ನಿರ್ಧಾರ ವಿರೋಧಿಸಿ ಐಎಎಸ್ ಅಧಿಕಾರಿ ರಾಜೀನಾಮೆ

ಮಿಜೋರಾಂನಲ್ಲೂ ಕ್ರಾಂತಿ: ಮಿಜೋರಾಂನಲ್ಲಿ ಕಲೆಕ್ಟರ್ ಹುದ್ದೆಯಲ್ಲಿದ್ದಾಗ ಪುಲ್ಲೆಲ್ಲ ಗೋಪಿಚಂದ್ ಅವರನ್ನು ಆಹ್ವಾನಿಸಿ, 30 ತರಬೇತಿ ಕೇಂದ್ರ ನಿರ್ಮಿಸಿ, ಯುವ ಪ್ರತಿಭಾವಂತರಿಗೆ ಅವಕಾಸ ನೀಡಲು ವ್ಯವಸ್ಥೆ ಕಲ್ಪಿಸಿದ್ದರು. ಪ್ರಧಾನಮಂತ್ರಿ ಸರ್ವೋಚ್ಛ ಪ್ರಶಸ್ತಿಗಾಗಿ ಅರ್ಜಿ ಹಾಕುವಂತೆ ಅನೇಕರು ಗೋಪಿನಾಥನ್ ಗೆ ಮೆಮೋ ಕಳಿಸಿದ್ದರು. 2018ರ ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿ ಸ್ವಯಂಪ್ರೇರಿತರಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು, ಆದರೆ, ತಮ್ಮ ಜೊತೆ ಸ್ವಯಂಸೇವಕರಾಗಿರುವುದು ಐಎಎಸ್ ಅಧಿಕಾರಿ ಎಂಬುದು ಎಷ್ಟೋ ಮಂದಿಗೆ ತಡವಾಗಿ ತಿಳಿದು ಬಂದಿದೆ.

ಕೇರಳ ಪ್ರವಾಹ: ಎಂಟು ದಿನ ಜತೆಗಿದ್ದರೂ ಇವರ ಗುರುತು ಯಾರಿಗೂ ಸಿಗಲಿಲ್ಲ!

ಲೋಕಸಭೆ ಚುನಾವಣೆ ಸಂದರ್ಭದಲ್ಲಿ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಇಂಧನ, ನಗರಾಭಿವೃದ್ಧಿ ಯೋಜನಾ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದರು. ಕೇಂದ್ರ ಗೃಹ ಕಾರ್ಯದರ್ಶಿಗೆ ಆಗಸ್ಟ್ 21ರಂದೇ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ನಡೆ ಬಗ್ಗೆ ಪ್ರತಿಕ್ರಿಯಿಸಿ, ತಕ್ಷಣಕ್ಕೆ ಮುಂದೇನು ಮಾಡಬೇಕು ಎಂಬುದನ್ನು ಯೋಚಿಸಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 33-year-old Indian Administrative Service Kannan Gopinathan from the AGMUT cadre, who came into the limelight for his anonymous participation in the flood relief efforts in Kerala last year, has resigned from the prestigious government post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more