ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.18ಕ್ಕೆ ಯುದ್ಧ ವಿಮಾನ ಏರಲಿದ್ದಾರೆ 3 ಮಹಿಳಾ ಪೈಲಟ್

By Vanitha
|
Google Oneindia Kannada News

ನವದೆಹಲಿ,ಮಾರ್ಚ್, 07: 'ನಾರಿಶಕ್ತಿ ದೇಶದ ಶಕ್ತಿ' ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಯುದ್ಧ ವಿಮಾನಗಳಲ್ಲಿ ಜೂನ್ 18ಕ್ಕೆ ಮೂವರು ಮಹಿಳಾ ಪೈಲಟ್ ಗಳನ್ನು ನೇಮಿಸಲು ಭಾರತೀಯ ವಾಯುಪಡೆ ನಿರ್ಧರಿಸಿದ್ದು, ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಿದೆ.

ಭಾರತೀಯ ವಾಯುಪಡೆ ನೀಡುತ್ತಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಮೊದಲ ತಂಡದ ಭಾವನಾ ಕಾಂತ್, ಅವ್ನಿ ಚತುರ್ವೇದಿ, ಮೋಹನ ಸಿಂಗ್ ಎಂಬ ಮೂವರು ಮಹಿಳಾ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಯುದ್ಧ ವಿಮಾನಗಳನ್ನು ಚಲಾಯಿಸುವ ಧೈರ್ಯ ತೋರಿದ್ದಾರೆ ಎಂದು ಐಎಎಫ್ ಮುಖ್ಯಸ್ಥ ಅರುಪ್ ರಾಹಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.[ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧವಿಮಾನದ ಶಕ್ತಿ]

IAF to get First Women fighter pilots on June 18th

ಭಾವನಾ ಕಾಂತ್, ಅವ್ನಿ ಚತುರ್ವೇದಿ, ಮೋಹನ ಸಿಂಗ್ ಈ ಮೂವರು ಮಹಿಳಾ ಅಧಿಕಾರಿಗಳು ಮೊದಲ ಹಂತದ ತರಬೇತಿಯನ್ನು ಮುಗಿಸಿದ್ದು, ಎರಡನೇ ಹಂತದ ತರಬೇತಿ ಹೈದರಾಬಾದಿನಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಜೂನ್ 18ಕ್ಕೆ ಈ ಮೂವರು ಯುದ್ಧವಿಮಾನಗಳನ್ನು ಚಲಾಯಿಸಲಿದ್ದಾರೆ ಎಂದು ಹೇಳಿದರು.

ಭಾರತೀಯ ವಾಯುಪಡೆಯು 1991 ರಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಪೈಲಟ್ ಗಳನ್ನು ಪರಿಚಯಿಸಿತು. ಆದರೆ ಇವರು ಕೇವ ಸಾಗಣೆ ವಿಮಾನ ಮತ್ತು ಹೆಲಿಕಾಫ್ಟರ್ ಮಾತ್ರ ಚಾಲನೆ ಮಾಡುತ್ತಿದ್ದರು. ಇದೀಗ ಯುದ್ಧ ವಿಮಾನಗಳ ಏರಲು ತಯಾರಾಗಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

ಮಹಿಳೆಯರ ದೈಹಿಕ ಸಾಮರ್ಥ್ಯವನ್ನು ಕಡೆಗಣಿಸಿ ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್ ಗಳ ನೇಮಕವನ್ನು ಕೈಬಿಡಲಾಗಿತ್ತು. ಇದೀಗ ನಾರಿ ಶಕ್ತಿ ಅರಿತ ಐಎಎಫ್ ಸ್ವತಃ ಈ ಪ್ರಸ್ತಾಪವನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮುಂದೆ ಇರಿಸಿತ್ತು. ಈ ಉತ್ತಮ ಕಾರ್ಯಕ್ಕೆ ಸಚಿವರು ತಕ್ಷಣವೇ ಒಪ್ಪಿಗೆ ನೀಡಿದ್ದರು ಎಂದು ರಾಹಾ ಹಳೆಯ ಸಂದರ್ಭವನ್ನು ಮೆಲುಕು ಹಾಕಿದರು.

English summary
Indian Air Force chief Air Chief Marshal Arup Raha on Tuesday announced that the IAF will get its first woman fighter pilot on June 18, this year. Three IAF cadets, Bhawna Kant, Avni Chaturvedi and Mohana Singh completed first round training. This is big gift of International womens day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X