ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಎಲ್ಲಾ ಎಫ್‌-16 ವಿಮಾನ ಸುರಕ್ಷಿತವಾಗಿದೆ: ಭಾರತೀಯ ವಾಯುಪಡೆ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಏ.6: ಪಾಕಿಸ್ತಾನದ ಎಲ್ಲಾ ಎಫ್‌-16 ವಿಮಾನಗಳು ಸುರಕ್ಷಿತವಾಗಿವೆ ಎಂದು ಅಮೆರಿಕ ನಿಯಮಕಾಲಿಕೆಯೊಂದು ಪ್ರಕಟಿಸಿದ್ದ ವರದಿಯನ್ನು ಭಾರತೀಯ ವಾಯುಪಡೆ ಅಲ್ಲಗಳೆದಿದೆ.

ಪಾಕಿಸ್ತಾನದ ಎಫ್‌ -16 ವಿಮಾನವನ್ನು ಭಾರತ ಹೊಡೆದುರುಳಿಸಿದೆ ಎನ್ನುವ ಘಟನೆ ಬೆಳಕಿಗೆ ಬಂದ ಬಳಿಕ ಅಮೆರಿಕ ಪಾಕಿಸ್ತಾನಕ್ಕೆ ತೆರಳಿ ಎಲ್ಲಾ ವಿಮಾನಗಳ ಎಣಿಕೆ ಕೈಗೊಂಡಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೆಲದಿನಗಳ ಹಿಂದೆ ಪಾಕಿಸ್ತಾನದ ಬಾಲಕೋಟ್​ಗೆ ನುಗ್ಗಿದ ಭಾರತೀಯ ವಾಯುಪಡೆ ಯೋಧರು ಅಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಬಂದಿದ್ದರು.

ಪಾಕ್‌ನ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ: ಅಮೆರಿಕದ ನಿಯತಕಾಲಿಕೆ ವರದಿ ಪಾಕ್‌ನ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ: ಅಮೆರಿಕದ ನಿಯತಕಾಲಿಕೆ ವರದಿ

ಮಿಗ್​-21 ಬೈಸನ್​ ಯುದ್ಧವಿಮಾನ ಬಳಸಿ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಈ ಸಾಹಸ ಮೆರೆದಿದ್ದರು. ಈ ಘಟನೆಯಲ್ಲಿ ಅವರ ವಿಮಾನ ಕೂಡ ಹಾನಿಗೊಂಡಿದ್ದರಿಂದ, ಅವರು ಹೊರಜಿಗಿದು ಪಾಕ್​ ಸೇನಾಪಡೆಗೆ ಸೆರೆಸಿಕ್ಕಿದ್ದರು.

IAF refutes US media report, reiterates it shot down Pak F-16 jet in aerial combat

ಭಾರತೀಯ ವಾಯುಪಡೆ ಭಾರತೀಯ ಅವಾಕ್ಸ್​ ಮತ್ತು ಭೂ ರಾಡಾರ್​ ಕೇಂದ್ರಗಳಲ್ಲಿ ದಾಖಲಾಗಿದ್ದ ತಾನು ಹೊಡೆದುರುಳಿಸಿದ್ದ ಎಫ್​-16 ಯುದ್ಧವಿಮಾನದ ವಿದ್ಯುನ್ಮಾನ ಮಾಹಿತಿಯನ್ನು (ಎಲೆಕ್ಟ್ರಾನಿಕ್​ ಸಿಗ್ನೇಚರ್​) ಮತ್ತು ಪಾಕ್​ ಆಕ್ರಮಿತ ಕಾಶ್ಮೀರದ ಸಾಬ್ಜ್​ ಕೋಟ್​ ಮತ್ತು ತಾಂದಾರ್​ ಪ್ರದೇಶಗಳಲ್ಲಿ ಈ ವಿಮಾನಗಳಿಂದ ಇಬ್ಬರು ಪೈಲಟ್​ಗಳು ಪ್ಯಾರಾಚೂಟ್​ ನೆರವಿನಿಂದ ಹೊರಜಿಗಿಯುತ್ತಿರುವ ದೃಶ್ಯಗಳನ್ನು ಸಾಕ್ಷ್ಯವಾಗಿ ಒದಗಿಸಿತ್ತು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇದರಲ್ಲಿ ಒಬ್ಬರು ಅಭಿನಂದನ್​ ವರ್ಧಮಾನ್​ ಆಗಿದ್ದರೆ ಮತ್ತೊಬ್ಬ ಪೈಲಟ್​ ಪಾಕ್​ ವಾಯುಪಡೆ ಯೋಧನಾಗಿದ್ದ ಎಂದು ವಿವರಿಸಲಾಗಿತ್ತು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ವಾಯು ದಾಳಿ ನಡೆಸಲು ಮುಂದಾಗಿತ್ತು. ಭಾರತ ಈ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದಲ್ಲದೆ, ಜಮ್ಮು ಮತ್ತು ಕಾಶ್ಮೀರದ ನೌಷೇರಾ ವಲಯದಲ್ಲಿ ಪಾಕ್​ನ ಎಫ್​-16 ಯುದ್ಧವಿಮಾವನ್ನು ಹೊಡೆದುರುಳಿಸಿತ್ತು.

English summary
The Indian Air Force (IAF) Friday refuted claims by a US media report made earlier today that stated Pakistan did not lose any F-16 jet in the aerial combat on February 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X