ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯು ಗಡಿ ಉಲ್ಲಂಘಿಸಿ ಬಂದ ವಿಮಾನವನ್ನು ಇಳಿಸಿದ ಭಾರತ

|
Google Oneindia Kannada News

ನವದೆಹಲಿ, ಮೇ 10: ಪಾಕಿಸ್ತಾನದ ಕರಾಚಿಯಿಂದ ಹೊರಟಿದ್ದ ಸರಕು ಸಾಗಣೆ ವಿಮಾನವು ಭಾರತದ ವಾಯುಗಡಿ ಉಲ್ಲಂಘಿಸಿ ಒಳ ಪ್ರವೇಶಿಸಿದ್ದಕ್ಕೆ ಭಾರತೀಯ ವಾಯುಪಡೆ ಅದನ್ನು ಬಲವಂತವಾಗಿ ಇಳಿಸಿದೆ.

ಏರ್‌ಪೋರ್ಟ್‌ನಲ್ಲಿ ನಿಮ್ಮ ಮುಖವೇ ನಿಮಗೆ ಬೋರ್ಡಿಂಗ್ ಪಾಸ್, ಹೇಗಂತೀರಾ?ಏರ್‌ಪೋರ್ಟ್‌ನಲ್ಲಿ ನಿಮ್ಮ ಮುಖವೇ ನಿಮಗೆ ಬೋರ್ಡಿಂಗ್ ಪಾಸ್, ಹೇಗಂತೀರಾ?

ಜಾರ್ಜಿಯಾಕ್ಕೆ ಹೊರಟಿದ್ದ ಸರಕು ಸಾಗಣೆ ವಿಮಾನವು ಮಧ್ಯಾಹ್ನ 3.15ರ ಸುಮಾರಿಗೆ ಉತ್ತರ ಗುಜರಾತ್ ವಲಯದಲ್ಲಿ ಭಾರತೀಯ ವಾಯುನೆಲೆಯನ್ನು ಪ್ರವೇಶಿಸಿರುವುದನ್ನು ಭಾರತೀಯ ವಾಯುಪಡೆಯ ರೇಡಾರ್‌ಗಳು ಪತ್ತೆಹಚ್ಚಿದ್ದವು.

ದೆಹಲಿಯಲ್ಲಿ ಸಿಂಗಾಪುರ ವಿಮಾನ ತುರ್ತು ಲ್ಯಾಂಡಿಂಗ್ ದೆಹಲಿಯಲ್ಲಿ ಸಿಂಗಾಪುರ ವಿಮಾನ ತುರ್ತು ಲ್ಯಾಂಡಿಂಗ್

ಕೂಡಲೇ ಕಾರ್ಯಪ್ರವೃತ್ತಗೊಂಡ ವಾಯುಪಡೆ ಎರಡು ಸುಖೋಯ್ ಸು-30 ಯುದ್ಧವಿಮಾನಗಳನ್ನು ಕಳುಹಿಸಿ ವಿಮಾನವನ್ನು ಜೈಪುರದಲ್ಲಿ ಕೆಳಕ್ಕಿಳಿಸುವಂತೆ ಮಾಡಿತು.

IAF jets forced plane from karachi to land after deviating in indian space

ಭಾರತೀಯ ವಾಯುಪಡೆ ರವಾನಿಸಿದ ರೇಡಿಯೋ ಕರೆಗಳನ್ನು ವಿಮಾನದ ಸಿಬ್ಬಂದಿ ಸ್ವೀಕರಿಸಲಿಲ್ಲ. ಅಲ್ಲದೆ ಮಾರ್ಗ ಬದಲಾವಣೆಗೊಂಡು 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಕೊನೆಗೆ ವಾಯುಪಡೆ ಬಲವಂತವಾಗಿ ಕೆಳಕ್ಕಿಳಿಸಿತು.

ಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ ಖಾಸಗಿ ವಿಮಾನ ಪತನವಾಗಿ ಹದಿನಾಲ್ಕು ಮಂದಿ ಸಾವನ್ನಪ್ಪಿರುವ ಶಂಕೆ

ಈ ವಿಮಾನವು ಎಲ್ಲ ಅಗತ್ಯ ಅನುಮತಿಗಳನ್ನು ಹೊಂದಿತ್ತು. ಆದರೆ, ಮುಂಬೈ ಮತ್ತು ಅಹಮದಾಬಾದ್ ಎಟಿಸಿಗಳನ್ನು ಸಂಪರ್ಕಿಸಬೇಕಿತ್ತು. ಅದರ ಬದಲಾಗಿ ಭಾರತೀಯ ವಾಯುನೆಲೆಯೊಳಗೆ ಹಾರಾಟ ನಡೆಸಿತ್ತು.

English summary
IAF jets forces land a cargo plane took off from Karachi diverted from its plan and entered Indian air space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X