• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ

|
Google Oneindia Kannada News

ನವದೆಹಲಿ, ನವೆಂಬರ್ 22: ಭಾರತೀಯ ವಾಯುಪಡೆಯ ಏರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ವೀರ ಚಕ್ರವನ್ನು ಪ್ರದಾನ ಮಾಡಿದರು.

ಫೆಬ್ರವರಿ 27, 2019ರಂದು ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ (ಗ್ರೂಪ್ ಕ್ಯಾಪ್ಟನ್) ಅಭಿನಂದನ್ ವರ್ಧಮಾನ್ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುಲ್ವಾಮಾ ದಾಳಿಯ ನಂತರ ಭಾರತ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತ್ತು. ಅದರ ಒಂದು ದಿನದ ನಂತರ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವಿನ ವೈಮಾನಿಕ ಚಕಮಕಿಯಲ್ಲಿ ವರ್ಧಮಾನ್ ಪಾಕಿಸ್ತಾನದ ಯುದ್ಧವಿಮಾನದೊಂದಿಗೆ ಯುದ್ಧದಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಅಭಿನಂದನ್ ವರ್ಧಮಾನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ MiG-21 ಯುದ್ಧ ವಿಮಾನ ಬಿದ್ದಿತು. ನಂತರ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ತೆಗೆದುಕೊಂಡಿತು.

ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಹಸ್ತಕ್ಷೇಪದ ಜೊತೆಗೆ ಭಾರತದ ಕಡೆಯಿಂದ ಹೇರಿದ ವ್ಯಾಪಕ ಒತ್ತಡದಿಂದಾಗಿ ಪಾಕಿಸ್ತಾನದ ಸೇನೆಯು ಅವರನ್ನು ಬಿಡುಗಡೆ ಮಾಡಿತು.

ಫೆಬ್ರವರಿ 26 ರಂದು ಜೈಶ್-ಎ-ಮೊಹಮ್ಮದ್ (ಜೆಇಎಂ) ನಡೆಸುತ್ತಿರುವ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರದ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತ್ತು.

IAF Group Captain Abhinandan Vardhaman Awarded Vir Chakra For Shooting Down Pakistani F-16

ಇತ್ತೀಚಿನ ದಿನಗಳಲ್ಲಿ ಐಎಎಫ್‌ನ ಅತ್ಯಂತ ಪ್ರಸಿದ್ಧ ಅಧಿಕಾರಿಗಳಲ್ಲಿ ಒಬ್ಬರಾಗಿ ಉಳಿದಿರುವ ವರ್ಧಮಾನ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಕ್ಕಾಗಿ ಸಪ್ಪರ್ ಪ್ರಕಾಶ್ ಜಾಧವ್‌ಗೆ ಎರಡನೇ ಅತ್ಯುನ್ನತ ಶಾಂತಿ ಕಾಲದ ಶೌರ್ಯ ಪ್ರಶಸ್ತಿ ಕೀರ್ತಿ ಚಕ್ರ (ಮರಣೋತ್ತರ) ನೀಡಲಾಗುತ್ತದೆ.

ಐವರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಕಾರ್ಯಾಚರಣೆಯಲ್ಲಿನ ಪಾತ್ರಕ್ಕಾಗಿ ಮೇಜರ್ ವಿಭೂತಿ ಶಂಕರ್ ಧೌಂಡ್ಯಾಲ್‌ರಿಗೆ ಶೌರ್ಯ ಚಕ್ರ (ಮರಣೋತ್ತರ) ನೀಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ A++ ವರ್ಗದ ಭಯೋತ್ಪಾದಕನನ್ನು ಕೊಂದಿದ್ದಕ್ಕಾಗಿ ನೈಬ್ ಸುಬೇದಾರ್ ಸೋಂಬಿರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗಿದೆ.

English summary
President Ramnath Kovind conferred the Vir Chakra Award to Indian Air Force's Air Pilot Group Captain Abhinandan Vardhaman on Monday for shooting down Pakistani F-16 Aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X