ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಕಾರ್ಗಿಲ್ ಯುದ್ಧಕ್ಕೆ ಸಿದ್ಧ ಎಂದ ವಾಯುಸೇನೆ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಜುಲೈ 16: "ಮತ್ತೊಂದು ಕಾರ್ಗಿಲ್ ಯುದ್ಧ ಮಾಡುವುದಕ್ಕೂ ನಾವು ಸಿದ್ಧರಾಗಿದ್ದೇವೆ. ಸೇನೆ ಕಾರ್ಗಿಲ್ ನಂಥ ಮತ್ತೊಂದು ಯುದ್ಧವನ್ನು ಎದುರಿಸಲೂ ಸನ್ನದ್ಧವಾಗಿದೆ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ, ಏರ್ ಚೀಫ್ ಮಾರ್ಶಲ್ ಬಿ ಎಸ್ ಧಾನೂವಾ ಹೇಳಿದ್ದಾರೆ.

ವಾಯು ಸೇನೆಗೆ ಸೇರಲು ಸನ್ನದ್ಧವಾಗುತ್ತಿರುವ ಮೃತ ಪೈಲಟ್ ಪತ್ನಿ ವಾಯು ಸೇನೆಗೆ ಸೇರಲು ಸನ್ನದ್ಧವಾಗುತ್ತಿರುವ ಮೃತ ಪೈಲಟ್ ಪತ್ನಿ

ಕಾರ್ಗಿಲ್ ವಿಜಯ ದಿವಸದ 20 ನೇ ವರ್ಷಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಈ ವಿಷಯ ತಿಳಿಸಿದರು.

ಸೇನೆಗೆ 1 ಕೋಟಿ ರೂ. ದೇಣಿಗೆ ನೀಡಿದ ನಿವೃತ್ತ ಯೋಧ ಸೇನೆಗೆ 1 ಕೋಟಿ ರೂ. ದೇಣಿಗೆ ನೀಡಿದ ನಿವೃತ್ತ ಯೋಧ

"ನಾವು ಮೋಡಗವಿರುವಾಗ, ಪ್ರತಿಕೂಲ ಹವಾಮಾನದಲ್ಲೂ ಬಾಂಬ್ ಎಸೆಯುವ ಶಕ್ತಿ ಪಡೆದಿದ್ದೇವೆ, ಅದು ಕರಾರುವಾಕ್ಕಾಗಿ ಗುರಿ ತಲುಪುವ ಸಾಮರ್ಥ್ಯ ಪಡೆದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಫೆಬ್ರವರಿ 26 ರದು ನಾವು ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ್ದೆವು. ಎಷ್ಟೋ ಮೇಲಿನಿಂದ ಕರಾರುವಾಕ್ಕಾಗಿ ಗುರಿಯಾಗಿಸಿ ಬಾಂಬ್ ಎಸೆಯಬಹುದು ಎಂಬುದಕ್ಕೆ ಇದೇ ಸಾಕ್ಷಿ" ಎಂದು ಅವರು ಹೇಳಿದರು.

IAF chief BS Dhanoa said, well prepared to fight another Kargil war

1999 ರ ಮೇ ತಿಂಗಳಿನಿಂದ ಜುಲೈ ವರೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ನಲ್ಲಿ ನಡೆದ ಯುದ್ಧಕ್ಕೆ ಇದೀಗ ಇಪ್ಪತ್ತು ವರ್ಷಗಳು ಸಂದಿದ್ದು, ಈ ಯುದ್ಧದಲ್ಲಿ ಗಡಿ ನಿಯಂತ್ರಣ ರೇಖೆ ಬಳಿಯ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದ ಪಾಕಿಸ್ತಾನವನ್ನು ಯಶಸ್ವಿಯಾಗಿ ಭಾರತ ಹಿಮ್ಮೆಟ್ಟಿಸಿತ್ತು. ಆದ್ದರಿಂದ ಭಾರತ ಕಾರ್ಗಲ್ ಯುದ್ಧ ಜಯವನ್ನು ಆಪರೇಶನ್ ವಿಜಯ ಎಂದೂ ಕರೆಯುತ್ತದೆ.

English summary
Indian Air Force Chief BS Dhanoa on Tuesday said that the forces are well prepared to fight another Kargil war if there is one. "Like all good Generals, we are prepared to fight the last war. If Kargil comes again, we are very well prepared," he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X