ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎನ್ 32 ವಿಮಾನಾಪಘಾತ ಸ್ಥಳದಿಂದ ಯೋಧರ ಶವ ಹೊರಕ್ಕೆ

|
Google Oneindia Kannada News

ನವದೆಹಲಿ, ಜೂನ್ 20: ಜೂನ್ ಮೊದಲ ವಾರದಲ್ಲಿ ಅಪಘಾತಕ್ಕೀಡಾಗಿದ್ದ ವಾಯುಪಡೆಯ ಎಎನ್ 32 ವಿಮಾನದಲ್ಲಿದ್ದ 13 ಮಂದಿಯ ಮೃತದೇಹವನ್ನು ಘಟನಾ ಸ್ಥಳದಿಂದ ಹೊರತೆಗೆಯಲಾಗಿದೆ.

ಜೂನ್ 3ರಂದು ಮಧ್ಯಾಹ್ನ 12.35ರ ಸುಮಾರಿಗೆ ಅಸ್ಸಾಂನ ಜೊಹ್ರಾತ್ ನ ವಾಯುನೆಲೆಯಿಂದ ಚೀನಾ ಗಡಿಯಿಂದ ಅರುಣಾಚಲ ಪ್ರದೇಶದ ಮೆಂಚುಕಾ ವಾಯುನೆಲೆಗೆ ಆಂಟೊನೊವ್ ಎಎನ್-32 ಸೇನಾ ಸಾರಿಗೆ ಯುದ್ಧ ವಿಮಾನ ಪ್ರಯಾಣ ಬೆಳೆಸಿತ್ತು. ಇದರಲ್ಲಿ 8 ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಟೇಕಾಫ್ ಆದ ಕೆಲವೇ ಸಮಯದಲ್ಲಿ ಕಣ್ಮರೆಯಾಗಿದ್ದ ಈ ವಿಮಾನದ ಅವಶೇಷಗಳು, ನಂತರ ಜೂನ್ 11 ರಂದು ಪತ್ತೆಯಾಗಿತ್ತು.

ವಾಯುಪಡೆ ವಿಮಾನ ಅಪಘಾತ: ಎಲ್ಲ 13 ಶವಗಳು ಪತ್ತೆವಾಯುಪಡೆ ವಿಮಾನ ಅಪಘಾತ: ಎಲ್ಲ 13 ಶವಗಳು ಪತ್ತೆ

ವಿಮಾನಲ್ಲಿದ್ದ 13 ಜನರೂ ಸಾವಿಗೀಡಾಗಿದ್ದರಾದರೂ, ಅವರ ದೇಹವನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಶವಗಳನ್ನೂ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

IAF AN-32 recovery operation: 13 mortal remains have been recovered

ವಾಯುಪಡೆಯ ಎಎನ್-32 ಯುದ್ಧ ವಿಮಾನ ಅವಶೇಷ 8 ದಿನಗಳ ಬಳಿಕ ಪತ್ತೆವಾಯುಪಡೆಯ ಎಎನ್-32 ಯುದ್ಧ ವಿಮಾನ ಅವಶೇಷ 8 ದಿನಗಳ ಬಳಿಕ ಪತ್ತೆ

ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಎಸ್‌/ಎಲ್ ಎಚ್ ವಿನೋದ್, ಎಫ್‌/ಎಲ್ ಆರ್ ಥಾಪಾ, ಎಫ್‌/ಎಲ್ ಎ ತನ್ವಾರ್, ಎಫ್‌/ಎಲ್ ಎಸ್ ಮೊಹಾಂತಿ, ಎಫ್‌/ಎಲ್ ಎಂಕೆ ಗರ್ಗ್, ಡಬ್ಲ್ಯೂಒ ಕೆಕೆ ಮಿಶ್ರಾ, ಎಸ್‌ಜಿಟಿ ಅನೂಪ್ ಕುಮಾರ್, ಸಿಪಿಎಲ್ ಶೆರಿನ್, ಎಲ್‌ಎಸಿ ಎಸ್‌ಕೆ ಸಿಂಗ್, ಎಲ್‌ಎಸಿ ಪಂಕಜ್, ಎನ್‌ಸಿ (ಇ) ಪುಟಾಲಿ ಮತ್ತು ಎನ್‌ಸಿ (ಇ) ರಾಜೇಶ್ ಕುಮಾರ್ ಎಂಬುವವರೇ ಎನ್ನಲಾಗಿದೆ.

English summary
IAF AN-32 recovery operation: Six bodies and seven mortal remains have been recovered from the crash site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X