• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್‌ಎಎಲ್‌ ಯುದ್ಧವಿಮಾನ ಪತನ: ಸದನದಲ್ಲಿ ರಾಜೀವ್ ಚಂದ್ರಶೇಖರ್ ಪ್ರಶ್ನೆ

|

ನವದೆಹಲಿ, ಫೆಬ್ರವರಿ 06: ಎಚ್‌ಎಎಲ್‌ನಲ್ಲಿ ಫೆಬ್ರವರಿ 1 ರಂದು ಮಿರಾಜ್ ಯುದ್ಧವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರು ಸಂಸತ್‌ನ ಗಮನಸೆಳೆಯುವ ಯತ್ನ ಮಾಡಿದರು ಆದರೆ ಇತರ ಸಂಸದರ ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ.

ಸಿಬಿಐ ವರ್ಸಸ್‌ ಮಮತಾ ಬ್ಯಾನರ್ಜಿ ಗಲಾಟೆಯೇ ಇಂದು ಉಭಯ ಸದನದ ಕಾಲಾವಕಾಶವನ್ನು ವ್ಯಯ ಮಾಡಿದ ಕಾರಣ ಟಿಎಂಸಿ ಸಂಸದರ ಗಲಾಟೆ ನಡುವೆ ರಾಜೀವ್ ಚಂದ್ರಶೇಖರ್ ಅವರು ತಮ್ಮ ಪ್ರಶ್ನೆಯನ್ನು ಕೇಳಲಾಗಲಿಲ್ಲ.

ಶೂನ್ಯವೇಳೆಯಲ್ಲಿಯೇ ಎಚ್‌ಎಎಲ್‌ ದುರ್ಘಟನೆ ಬಗ್ಗೆ ಚರ್ಚೆ ಮಾಡಲು ರಾಜೀವ್ ಚಂದ್ರಶೇಖರ್ ಅವರು ಅವಕಾಶ ಪಡೆದಿದ್ದರು ಆದರೆ ಟಿಎಂಸಿ ಸಂಸದರ ಗಲಾಟೆಯಿಂದಾಗಿ ಘಟನೆ ಬಗ್ಗೆ ಸದನದ ಗಮನ ಸೆಳೆಯಲು ಸಾಧ್ಯವಾಗಿಲ್ಲ.

ಮಿರಾಜ್ ಯುದ್ಧ ವಿಮಾನ ಅವಘಡ ಹೊಸದೇನಲ್ಲ

ಆದರೆ ಫೆಬ್ರವರಿ 06ರಂದು ಶೂನ್ಯವೇಳೆಯಲ್ಲಿಯೇ ಇದೇ ವಿಷಯವನ್ನು ರಾಜೀವ್ ಚಂದ್ರಶೇಖರ್ ಅವರು ಚರ್ಚಿಸಲಿದ್ದು, ಮಿರಾಜ್ ಯುದ್ಧ ವಿಮಾನದ ಪತನದ ಬಗ್ಗೆ ವಿಸ್ತೃತ ತನಿಖೆಗೆ ಅವರು ಒತ್ತಾಯಿಸಲಿದ್ದಾರೆ.

ಎಚ್ಎಎಲ್‌ಗೆ ನಾವು ವಿನಾಯಿತಿ ನೀಡಬಹುದು; ಆದರೆ ವೈರಿಗಳು ನಮಗೆ ನೀಡುತ್ತಾರಾ?

ವಿಮಾನದಲ್ಲಿ ಪತನಗೊಂಡು ಅಸುನೀಗಿದ ಪೈಲೆಟ್‌ಗಳು ಸಾಮಾನ್ಯರಾಗಿರಲಿಲ್ಲ, ಅವರು ತರಬೇತಿ ಹೊಂದಿದ ಅನುಭವಿ ಪೈಲೆಟ್‌ಗಳಾಗಿದ್ದರು, ಹಾಗಾಗಿ ಈ ಪ್ರಕರಣದ ವಿಸ್ತೃತ ತನಿಖೆ ಅತ್ಯಂತ ಅವಶ್ಯಕ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಪರೀಕ್ಷಾರ್ಥ ಉಡಾವಣೆ ವೇಳೆ ವಿಮಾನಗಳು ಅಪಘಾತಕ್ಕೆ ಈಡಾಗುತ್ತಿರುವುದು ಮೊದಲಲ್ಲ, ಹಾಗಾಗಿ ಎಚ್‌ಎಎಲ್‌ ಮತ್ತು ಇತರೆ ಸಂಸ್ಥೆಗಳು ತಾಂತ್ರಿಕವಾಗಿ ಇನ್ನಷ್ಟು ಆಧುನಿಕ ಆಗುವ ಹಾಗೂ ಪರೀಕ್ಷಾರ್ಥ ಉಡಾವಣೆ ವೇಳೆ ಅಸುನೀಗಿದ ಪೈಲೆಟ್‌ಗಳ ಕುಟುಂಬಕ್ಕೆ ಶಕ್ತಿ ನೀಡುವ ಯೋಜನೆಯನ್ನು ಮಾಡಲು ಸಹ ಆಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajeev Chandrashekhar try to rise the question in parliament about IAF aircraft miraje Crash in HAL, but due to TMC members disruption, questioning did not happen, He will speak about it On February 06.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more