ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ದುರಂತದ ಬಗ್ಗೆ ನನ್ನ ಬಾಯಿ ಮುಚ್ಚಿಸಲಾಗಿತ್ತು: ಹರ್ಜಿತ್

|
Google Oneindia Kannada News

ವದೆಹಲಿ, ಮಾರ್ಚ್ 22: "ಇರಾಕ್ ನಲ್ಲಿ 39 ಭಾರತೀಯರನ್ನು ಹತ್ಯೆ ಮಾಡಲಾದ ಸುದ್ದಿಯನ್ನು ಯಾರಿಗೂ ಹೇಳದಂತೆ ನನ್ನನ್ನು ತಡೆಯಲಾಗಿತ್ತು" ಎಂದು ಹರ್ಜಿತ್ ಮಾಸಿಹ್ ಎಂಬುವವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇರಾಕ್ ನಲ್ಲಿ 2014 ರಲ್ಲಿ ಅಪಹರಣಕ್ಕೊಳಗಾದ 40 ಭಾರತೀಯರಲ್ಲಿ ಹರ್ಜಿತ್ ಸಹ ಒಬ್ಬರು. ಅದೃಷ್ಟವಶಾತ್ ಅವರು ಬಾಂಗ್ಲಾದೇಶಿ ಕಾರ್ಮಿಕರೊಂದಿಗೆ ತಪ್ಪಿಸಿಕೊಂಡು ಬಂದಿದ್ದರು. ತಮ್ಮನ್ನು ಅಲಿ ಎಂದು ಪರಿಚಯಿಸಿಕೊಂಡು ಆ ಕೂಪದಿಂದ ಹೊರಬಂದಿದ್ದರು.

ಇರಾಕ್‌ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವ ಇರಾಕ್‌ನ ಆ ದಿಬ್ಬದ ಅಡಿಯಲ್ಲಿತ್ತು 39 ಭಾರತೀಯರ ಶವ

ಆದರೆ ಭಾರತದ 39 ಜನ ಅಪಹರಣಕ್ಕೊಳಗಾಗಿ, ಹ್ತಯೆಗೊಳಗಾದ ಘಟನೆ ನನಗೆ ಗೊತ್ತಿದ್ದರೂ, ಅದನ್ನು ಎಲ್ಲಿಯೂ ಬಾಯಿ ಬಿಡದಂತೆ ನನಗೆ ಅಧಿಕಾರಿಯೊಬ್ಬರು ಹೇಳಿದ್ದರು. ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳುವಂತೆ ನನ್ನ ಬಳಿ ಮನವಿ ಮಾಡಿದ್ದರು. ನನಗೆ ಕೆಲಸ ಕೊಡಿಸುತ್ತೇನೆಂದೂ ಹೇಳಿದ್ದರು. ಆದರೆ ಆ ಅಧಿಕಾರಿಯ ಹೆಸರು ನನಗೆ ನೆನಪಿಲ್ಲ ಎಂದು ಹರ್ಜಿತ್ ಹೇಳಿದ್ದಾರೆ.

I Was Told To Say They Had Not Died: Only survior in Iraq tragedy told

ಆತನ ಹೇಳಿಕೆ ಇದೀಗ ಮತ್ತೊಮ್ಮೆ ತಲ್ಲಣ ಎಬ್ಬಿಸಿದೆ. ಕಳೆದ ನಾಲ್ಕು ವರ್ಷದ ಹಿಂದೆ ಇರಾಕ್ ನ ಮೊಸುಲ್ ಎಂಬಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವಿಗೀಡಾಗಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಹೊರಹಾಕಿದ್ದರು. ಈ ಕುರಿತು ರಾಜ್ಯ ಸಭೆಯಲ್ಲಿ ಸಾಕಷ್ಟು ವಾದ ವಿವಾದಗಳು ನಡೆದಿದ್ದವು.

ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವು: ಸುಷ್ಮಾ ಇರಾಕ್ ನಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಸಾವು: ಸುಷ್ಮಾ

2014 ರಲ್ಲೇ ಅಪಹರಣಕ್ಕೊಳಗಾಗಿದ್ದ 40 ಬಾರತೀಯರನ್ನು ಹುಡುಕಲು ಭಾರತೀಯ ಸರ್ಕಾರ ವಿಫಲವಾಗಿದೆ ಎಂದು ಹಲವು ಬಾರಿ ದೂರಲಾಗುತ್ತು. ಕಳೆದ ವರ್ಷ ಜುಲೈನಲ್ಲಿ 39 ಭಾರತೀಯರು ಮೃತರಾಗಿದ್ದಾರೆಂಬ ಗಾಳಿ ಸುದ್ದಿ ಬಂದರೂ, ಸಾಕ್ಷ್ಯಾಧಾರವಿಲ್ಲದೆ ಹಾಗೆ ಸತ್ತಿದ್ದಾರೆಂದು ಘೋಷಿಸುವುದಕ್ಕಾಗುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.

English summary
"I Was Told To Say They Had Not Died" Harjit Masih the only survivor among the 40 Indians kidnapped by terror group ISIS in Mosul, Iraq said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X