ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲನಾಗಿದ್ದೆ, ಮತ್ತೆ ನಕ್ಸಲನ್ನಾಗಿ ಮಾಡಬೇಡಿ: ನಿತಿನ್ ಗಡ್ಕರಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 03: ಕೇಂದ್ರದ ಪ್ರಭಾವಿ ಸಚಿವರೊಬ್ಬರು ತಾವು ಹಿಂದೆ ನಕ್ಸಲರಾಗಿದ್ದುದಾಗಿ ಹೇಳಿದ್ದಾರೆ.

'ಮೊದಲು ನಕ್ಸಲನಾಗಿದ್ದ ನಂತರ ಆರ್‌ಎಸ್‌ಎಸ್‌ ಸೇರಿದೆ, ಈಗ ಮತ್ತೆ ನಕ್ಸಲನನ್ನಾಗಿ ಮಾಡಬೇಡಿ' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಅಧಿಕಾರಿಗಳಿಗೆ ಹೇಳಿರುವುದಾಗಿ ವರದಿ ಆಗಿದೆ.

"ಮಟನ್, ಮೀನು ತ್ಯಾಜ್ಯದಿಂದ ತಯಾರಿಸಿದ ಅನಿಲದಿಂದ ಬಸ್ ಓಡಾಟ!"

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇತ್ತೀಚೆಗೆ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿರ್ಲಕ್ಷ್ಯದ ಬಗ್ಗೆ ಹೇಳಿದ್ದಾರೆ.

I Was Once Nexalite, Do Not Force Me To Be Nexal Again: Nitin Gadkari

ಇದರಿಂದ ಕುಪಿತಗೊಂಡ ನಿತಿನ್ ಗಡ್ಕರಿ ವಿಜಯನ್ ಅವರ ಎದುರೇ ತಮ್ಮ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, 'ಮೊದಲು ನಕ್ಸಲ್ ಆಗಿದ್ದೆ, ನಂತರ ಆರ್‌ಎಸ್‌ಎಸ್ ಸೇರಿದೆ, ನಿಮ್ಮನ್ನು ಸರಿದಾರಿಗೆ ತರಲು ನನ್ನನ್ನು ಮತ್ತೆ ನಕ್ಸಲ್ ಆಗುವಂತೆ ಮಾಡಬೇಡಿ' ಎಂದು ಎಚ್ಚರಿಸಿದ್ದಾರೆ.

'ಯಾರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ, ಇಲ್ಲಿ ನಾನೇ ಬಾಸ್, ಇದು ಐದನೇ ಬಾರಿ ಒಂದೇ ವಿಷಯವಾಗಿ ಕೇರಳ ಸಿಎಂ ನನ್ನನ್ನು ಭೇಟಿ ಆಗುತ್ತಿದ್ದಾರೆ, ನನಗೇ ನಾಚಿಕೆ ಆಗುತ್ತಿದೆ' ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ದುಬಾರಿ ದಂಡ: ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆಯಲು ಕೇಂದ್ರ ನಿರ್ಧಾರದುಬಾರಿ ದಂಡ: ಎಲ್ಲಾ ರಾಜ್ಯಗಳ ಸಿಎಂ ಸಭೆ ಕರೆಯಲು ಕೇಂದ್ರ ನಿರ್ಧಾರ

ಕೆಲವೇ ಗಂಟೆಗಳ ಒಳಗಾಗಿ ಕೇರಳ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಡತಗಳು ಇತ್ಯರ್ಥಗೊಳ್ಳಬೇಕು ಎಂದು ನಿತಿನ್ ಗಡ್ಕರಿ ಅವರು ಖಡಕ್ ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಕೇರಳ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು ಇದರ ಬಗ್ಗೆ ಕೆಲವು ದಿನಗಳ ಹಿಂದಷ್ಟೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಆರ್‌ಎಸ್‌ಎಸ್‌ ಅನ್ನು ದೂಷಿಸಿದ್ದರು.

English summary
Central minister Nitin Gadkari said his officers that, 'i was once nexalite then join RSS, now do not force me to become nexalite again'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X