ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ದಾಳಿ: ದೆಹಲಿಯ ಚೀನಿಯರ ಬಳಿ 1000 ಕೋಟಿ ರು ವಶ

|
Google Oneindia Kannada News

ನವದೆಹಲಿ, ಆ.12: ದೆಹಲಿಯ ವಿವಿಧೆಡೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ನಗದು ವಶ ಪಡಿಸಿಕೊಂಡಿದ್ದಾರೆ. ಚೀನಿಯರು ಹಾಗೂ ಸ್ಥಳೀಯರು ಮನಿ ಲಾಂಡ್ರಿಂಗ್ ಮೂಲಕ ಸಂಗ್ರಹಿಸಿದ್ದ 1000 ಕೋಟಿ ರು ಮೌಲ್ಯದ ಆಸ್ತಿ ಈಗ ಐಟಿ ದಾಳಿಯಲ್ಲಿ ಪತ್ತೆಯಾಗಿದೆ.

ಬೇನಾಮಿ ಕಂಪನಿಗಳ ಹೆಸರಿನಲ್ಲಿ ಅಕ್ರಮವಾಗಿ ನಗದು ಚಲಾವಣೆ ದಂಧೆ ನಡೆಸುತ್ತಿದ್ದರು. ಚೀನಾ ಮೂಲದ ಸಬ್ಸಿಡಿ ಕಂಪನಿ ಎಂದು ಹೇಳಿ ಸುಮಾರು 100 ಕೋಟಿ ರು ಶೆಲ್ ಕಂಪನಿಗಳಿಂದ ಪಡೆದಿದ್ದರು. ಭಾರತದೆಲ್ಲೆಡೆ ರಿಟೈಲ್ ಶೋರೂಮ್ ಆರಂಭಿಸುವ ಯೋಜನೆಯಿತ್ತು ಎಂದು ತಿಳಿದು ಬಂದಿದೆ.

ತೆರಿಗೆ ಇಲಾಖೆಯ ನಿಯಮಾವಳಿ ರೂಪಿಸುವ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಯು ಚೀನಿಯರು ಮನಿಲಾಂಡ್ರಿಂಗ್, ಹವಾಲ ದಂಧೆಯಲ್ಲಿ ತೊಡಗಿರುವ ಬಗ್ಗೆ ಸೂಚನೆ ನೀಡಿತ್ತು. ಅದರಂತೆ ಕೆಲ ಕಾಲದಿಂದ ಈ ಬಗ್ಗೆ ಪೂರ್ವಭಾವಿ ತನಿಖೆ ನಡೆಸಲಾಗುತ್ತಿತ್ತು.

I-T department busts Chinese hawala racket worth Rs 1,000 crore in Delhi

ಬ್ಯಾಂಕ್ ಅಧಿಕಾರಿಗಳು, ಚೀನಿಯರು ಹೊಂದಿದ್ದ 40 ಬ್ಯಾಂಕ್ ಖಾತೆ ಮೂಲಕ ಬೇನಾಮಿ ಕಂಪನಿಗಳಿಗೆ ಹಣ ರವಾನೆಯಾಗಿರುವುದು ಪತ್ತೆಯಾಗಿತ್ತು. ಸರಿ ಸುಮಾರು 1000 ಕೋಟಿ ವ್ಯವಹಾರ ನಡೆದಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.

ಹವಾಲ ವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಮನಿ ಲಾಂಡ್ರಿಂಗ್ ನಲ್ಲಿ ಬ್ಯಾಂಕ್ ಸಿಬ್ಬಂದಿ, ಚಾರ್ಟೆರೆಡ್ ಅಕೌಂಟಂಟ್ಸ್ ಕೈವಾಡ ಇರುವುದು ದಾಳಿ ವೇಳೆ ಪತ್ತೆಯಾಗಿದೆ. ಹಾಂಕಾಂಗ್, ಯುಎಸ್ ಡಾಲರ್ ಗಳಲ್ಲಿ ಹವಾಲ ವ್ಯವಹಾರ ನಡೆದಿದೆ ಎಂದು ಸಿಬಿಡಿಟಿ ಹೇಳಿದೆ.

English summary
The Income Tax Department has conducted raids against some Chinese individuals and their local associates for allegedly indulging in a money laundering racket involving Rs 1,000 crore using shell or dubious firms, the CBDT said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X