ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಎಲ್ಲರನ್ನೂ ಒಳಗೊಂಡ ಭಾರತ"ದ ಪ್ರತಿನಿಧಿ' ಎಂದ ಸಂಸದೆ ನುಸ್ರತ್ ಜಹಾನ್

|
Google Oneindia Kannada News

ಕೊಲ್ಕತ್ತಾ, ಜೂ 30: ತೃಣಮೂಲ ಕಾಂಗ್ರೆಸ್ಸಿನ ಸಂಸದೆ ನುಸ್ರತ್ ಜಹಾನ್ ಅವರು ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿ, ಫತ್ವಾ ಹೊರಡಿಸಿದ್ದರು. ಧರ್ಮ ಕಟ್ಟಳೆ ಹೇರಿಕೆ ವಿರುದ್ಧ ತಿರುಗಿ ಬಿದ್ದಿರುವ ನುಸ್ರತ್, ಸಿಂಧೂರ ಮತ್ತು ಬಳೆ ಧರಿಸಿ ಸಂಸತ್ ಅಧಿವೇಶನದಲ್ಲಿ ಕಾಣಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾಹಣೆಗೆ ಸಿಂಧೂರ ಇಟ್ಟಿದ್ದಕ್ಕೆ ಸಂಸದೆ ನುಸ್ರತ್ ಜಹಾನ್ ವಿರುದ್ಧ ಫತ್ವಾ

"ಎಲ್ಲರನ್ನೂ ಒಳಗೊಂಡ ಭಾರತ"ದ ಪ್ರತಿನಿಧಿ ಎಂದು ಪ್ರತಿಕ್ರಿಯಿಸಿ, "ಜಾತಿ, ವರ್ಣ, ಧರ್ಮದ ತಡೆಗಳನ್ನು ಮೀರಿ ಎಲ್ಲರನ್ನೂ ಒಳಗೊಂಡ ಭಾರತವನ್ನು ಪ್ರತಿನಿಧಿಸುತ್ತೇನೆ" ಎಂಬ ಹೇಳಿಕೆಯನ್ನು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ನುಸ್ರತ್ ಟ್ವೀಟ್ ಮಾಡಿದ್ದಾರೆ. 'ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ; ಆದರೆ ಮುಸ್ಲಿಂ ಆಗಿಯೇ ಉಳಿಯುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ.

I Represent Inclusive India: TMC MP Nusrat Jahan

'ನನ್ನ ಉಡುಪಿನ ಬಗ್ಗೆ ಯಾರೂ ಟೀಕಿಸಬಾರದು. ನಂಬಿಕೆ ಎನ್ನುವುದು ಉಡುಗೆಯನ್ನು ಮೀರಿದ್ದು ಹಾಗೂ ಇದು ಎಲ್ಲ ಧರ್ಮಗಳ ಅಮೂಲ್ಯ ಸಿದ್ಧಾಂತಗಳ ಬಗೆಗಿನ ನಂಬಿಕೆ ಮತ್ತು ಆಚರಣೆಗೆ ಸಂಬಂಧಿಸಿದ್ದು" ಎಂದು ಹೇಳಿದ್ದಾರೆ. ನುಸ್ರತ್ ಟ್ವೀಟ್ ಗೆ ಗೆಳತಿ, ಸಂಸದೆ ಮಿಮಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನುಸ್ರತ್ ಅವರ ಮದುವೆ ಟರ್ಕಿಯಲ್ಲಿ ನಡೆದಿತ್ತು. ಹೀಗಾಗಿ ಜೂನ್ 17 ಮತ್ತು 18ರಂದು ನಡೆದಿದ್ದ ಸಂಸತ್ ಕಲಾಪ, ಪ್ರಮಾಣ ವಚನ ಸ್ವೀಕಾರಕ್ಕೆ ನುಸ್ರತ್ ಮತ್ತು ಮಿಮಿ ಇಬ್ಬರೂ ಗೈರಾಗಿದ್ದರು. ಈ ಕಾರಣದಿಂದ ಇಬ್ಬರೂ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಟರ್ಕಿಯ ಬೋಡ್ರಮ್ ಪಟ್ಟಣದಲ್ಲಿ ಮದುವೆ ನಡೆದಿತ್ತು. ಕುಟುಂಬ ವರ್ಗ ಮತ್ತು ಅವರ ಆಪ್ತ ಸ್ನೇಹಿತರು ಹಾಗೂ ಬಂಧುಗಳು ಭಾಗವಹಿಸಿದ್ದರು.

English summary
Newly-elected Trinamool Congress MP Nusrat Jahan on Saturday said she would not pay heed to “comments made by hardliners of any religion” after an Uttar Pradesh-based cleric criticised her for marrying a Jain and wearing sindoor, calling the practices “un-Islamic”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X