ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನಿಗೂ ನನಗೂ ಸಂಪರ್ಕವೇ ಕಡಿಮೆ: ಬಲ್ಬೀರ್ ಸಿಂಗ್ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಮೇ 11: ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಪಡೆಯಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆರು ಕೋಟಿ ರೂಪಾಯಿ ನೀಡಿದ್ದಾಗಿ ಮಗ ಮಾಡಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಪಶ್ಚಿಮ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಬಲ್ಬೀರ್ ಸಿಂಗ್ ಜಾಖರ್ ಸ್ಪಷ್ಟೀಕರಣ ನೀಡಿದ್ದಾರೆ.

ಈ ಆರೋಪವನ್ನು ನಿರಾಕರಿಸಿರುವ ಬಲ್ಬೀರ್ ಸಿಂಗ್, ತಮ್ಮ ಮತ್ತು ಮಗನ ನಡುವೆ ಸರಿಯಾದ ಸಂಪರ್ಕವೇ ಇರಲಿಲ್ಲ ಎಂದು ಹೇಳಿದ್ದಾರೆ.

ಟಿಕೆಟ್ ಪಡೆಯಲು ಕೇಜ್ರಿವಾಲ್ ಗೆ 6 ಕೋಟಿ? ಅಪ್ಪನ ವಿರುದ್ಧವೇ ಮಗನ ಆರೋಪ ಟಿಕೆಟ್ ಪಡೆಯಲು ಕೇಜ್ರಿವಾಲ್ ಗೆ 6 ಕೋಟಿ? ಅಪ್ಪನ ವಿರುದ್ಧವೇ ಮಗನ ಆರೋಪ

'ನಾನು ಈ ಆರೋಪಗಳನ್ನು ಖಂಡಿಸುತ್ತೇನೆ. ನನ್ನ ಉಮೇದುವಾರಿಕೆ ಕುರಿತಂತೆ ನನ್ನ ಮಗನೊಂದಿಗೆ ಎಂದಿಗೂ ಚರ್ಚೆ ಮಾಡಿಲ್ಲ. ಆತನೊಂದಿಗೆ ನಾನು ಮಾತನಾಡಿದ್ದು ತೀರಾ ವಿರಳ' ಎಂದು ತಿಳಿಸಿದ್ದಾರೆ.

i have never discussed with my son anything about my candidature balbir singh jakhar uday jakhar

'ಆತ ಹುಟ್ಟುದಾಗಿನಿಂದಲೂ ತನ್ನ ಅಮ್ಮನ ಪೋಷಕರ ಮನೆಯಲ್ಲಿಯೇ ಬೆಳೆದಿರುವುದು. ನಾನು 2009ರಲ್ಲಿ ಪತ್ನಿಗೆ ವಿಚ್ಛೇದನ ನೀಡಿದ್ದೆ. ಆಕೆ ನನ್ನ ಜೊತೆ ಇದ್ದಿದ್ದು 6-7 ತಿಂಗಳು ಮಾತ್ರ. ವಿಚ್ಛೇದನದ ಬಳಿಕ ನನ್ನ ಪತ್ನಿಗೆ ಮಗನನ್ನು ತನ್ನೊಂದಿಗೆ ಇರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು' ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಕಾರಣ: ಕೇಜ್ರಿವಾಲ್ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಕಾರಣ: ಕೇಜ್ರಿವಾಲ್

ಮೂರು ತಿಂಗಳ ಹಿಂದೆ ನನ್ನ ತಂದೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು, ಆ ವೇಳೆ ಆರು ಕೋಟಿ ರೂಪಾಯಿಯನ್ನು ಕೇಜ್ರಿವಾಲ್ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ನನ್ನಲ್ಲಿ ಪುರಾವೆಗಳಿವೆ. ನನ್ನ ಈ ಹೇಳಿಕೆ ಪ್ರಸಾರವಾದ ನಂತರ, ನನ್ನನ್ನು ಮನೆಗೆ ವಾಪಸ್ ಸೇರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆರು ಕೋಟಿ ರೂಪಾಯಿ ಹಣವನ್ನು ನೇರವಾಗಿ ಕೇಜ್ರಿವಾಲ್ ಅವರಿಗೆ ನೀಡಲಾಗಿದೆ. ಈ ದೇಶದ ನಾಗರಿಕನಾಗಿ ಈ ವಿಷಯವನ್ನು ಜನರ ಮುಂದೆ ಇಡುವುದು ನನ್ನ ಕರ್ತವ್ಯ ಎಂದು ಬಲ್ಬೀರ್ ಅವರ ಮಗ ಉದಯ್ ಜಾಖರ್ ಹೇಳಿದ್ದರು.

English summary
West Delhi AAP candidate Balbir Singh Jakhar denied the allegations by his son Uday Jakhar as he had paid Rs 6 crore to Arvind Kejriwal to get ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X