• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

''ಸದ್ಯದ ಪರಿಸ್ಥಿತಿಯಲ್ಲಿ ನನಗೆ ಮುಂಬೈಗೆ ಹೋಗುವ ಧೈರ್ಯವಿಲ್ಲ'': ನಿತಿನ್ ಗಡ್ಕರಿ

|

ಇಡೀ ದೇಶದಲ್ಲಿ ಕೊರೊನಾದ ಮುಖ್ಯ ಸ್ಥಾನವಾಗಿ ಪರಿಣಮಿಸಿರುವ ವಾಣಿಜ್ಯ ನಗರಿ ಮುಂಬೈಗೆ ಹೋಗಲು ಸ್ವತಃ ಕೇಂದ್ರ ಸಚಿವರಿಗೆ ಧೈರ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕಂತೂ ಮುಂಬೈಗೆ ಹೋಗಲು ನನಗೆ ಧೈರ್ಯವಿಲ್ಲ ಎಂದು ರಸ್ತೆಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

   India to witness solar eclipse on June 21 | Solar Eclipse | Oneindia Kannada

   ರಾಷ್ಟ್ರದಲ್ಲಿ ಕೊರೊನಾವೈರಸ್‌ಗೆ ಅತಿ ಹೆಚ್ಚು ಹಾನಿಗೊಳಗಾಗಿರುವ ರಾಷ್ಟ್ರ ಮುಂಬೈ ಆಗಿದ್ದು, ಸೋಮವಾರ 2,786 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಆ ಮೂಲಕ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,10,744 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಮುಂಬೈ ಕಳೆದ 24 ಗಂಟೆಗಳಲ್ಲಿ 1,067 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ನಗರದ ಕೋವಿಡ್ -19 ಪಾಸಿಟಿವ್ ರೋಗಿಗಳ ಸಂಖ್ಯೆ 59,293 ಕ್ಕೆ ತಲುಪಿದೆ.

   ಮುಂಬೈನಲ್ಲಿ ಸಂಚಾರ ಆರಂಭಿಸಿದ ಲೋಕಲ್ ರೈಲುಗಳು

   ''ಈಗಿನ ಪರಿಸ್ಥಿತಿಯಲ್ಲಿ, ನನಗೆ ಮುಂಬೈಗೆ ಬರಲು ಯಾವುದೇ ಧೈರ್ಯವಿಲ್ಲ, ಸಮಯ ಖಂಡಿತವಾಗಿಯೂ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ, ಎಂದು ಎಂಎಸ್‌ಎಂಇ ಮತ್ತು ಮೂಲಸೌಕರ್ಯಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.

   ಕೊರೊನಾ ಪರೀಕ್ಷೆ ಬೆಲೆ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

   ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆಗಳನ್ನು ಹೊಂದಿರುವ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರದ ನಾಗ್ಪುರದ ಸಂಸತ್ ಸದಸ್ಯರಾಗಿದ್ದಾರೆ.

   English summary
   Don’t have “any daring” to go to Mumbai at present, admitted Union minister Nitin Gadkari on Tuesday as the coronavirus cases spiral in the metropolitan city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X