ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಾ ಮಹಿಳಾ ಬೆಟಾಲಿಯನ್ ಶಕ್ತಿ ಕಡೆಗಣಿಸುವಷ್ಟು ಮೂರ್ಖನಲ್ಲ: ಆನಂದ್ ಮಹೀಂದ್ರಾ

|
Google Oneindia Kannada News

ನವದೆಹಲಿ, ಆಗಸ್ಟ್ 30: ನಾಗಾಲ್ಯಾಂಡ್ ಮಹಿಳಾ ಬೆಟಾಲಿಯನ್ ಶಕ್ತಿಯನ್ನು ಕಡೆಗಣಿಸುವಷ್ಟು ಮೂರ್ಖನಲ್ಲ ಎಂದು ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಹೇಳಿದ್ದಾರೆ.

ನಾಗಾಲ್ಯಾಂಡ್‌ನ ಮಹಿಳಾ ಬೆಟಾಲಿಯನ್ ರಸ್ತೆ ಬದಿಯ ಕಂದಕದಲ್ಲಿ ಸಿಲುಕಿದ್ದ ಬೊಲೆರೊವನ್ನು ಮೇಲಕ್ಕೆತ್ತಿ ರಸ್ತೆಗೆ ತಂದಿದ್ದು ಬಹಳ ಸುದ್ದಿಯಾಗಿತ್ತು.

ಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಛೀಮಾರಿಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಛೀಮಾರಿ

ಈ ಕುರಿತು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ಬೊಲೆರೋ ವಾಹನ ಚರಂಡಿಯಲ್ಲಿ ಹೇಗೆ ಸಿಲುಕಿಕೊಂಡಿತು ಎಂಬುದು ನನಗೆ ತಿಳಿದಿಲ್ಲ. ಆದರೆ ಅದನ್ನು ರಕ್ಷಿಸಲು ಕೆಲವು ಶಕ್ತಿಶಾಲಿ ಮಹಿಳೆಯರು ಮುಂದೆ ಬಂದಿದ್ದು ನನಗೆ ಖುಷಿಯಾಗಿದೆ.

I Certainly Am Glad A Few Able-Bodied Women Were Around To Rescue Bolero

ಹೌದು, ನಾನು ಎಂದಿಗೂ ನಾಗಾ ಮಹಿಳಾ ಬೆಟಾಲಿಯನ್ ಶಕ್ತಿಯನ್ನು ಕಡೆಗಣಿಸುವಷ್ಟು ಮೂರ್ಖನಾಗುವುದಿಲ್ಲ ಎಂದು ಹೇಳಿ, ಮಹಿಳೆಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಸ್ತೆ ಬದಿಯ ಚರಂಡಿಯಲ್ಲಿ ಸಿಲುಕಿದ್ದ ಬೊಲೆರೊ ಎಂಯುವಿ(ಮಲ್ಟಿ ಯುಟಿಲಿಟಿ ವೆಹಿಕಲ್) ಕಾರನ್ನು ನಾಗಾಲ್ಯಾಂಡ್ ಮಹಿಳಾ ಬೆಟಾಲಿಯನ್ ತಂಡ ಕಾರನ್ನು ಮತ್ತೆ ರಸ್ತೆಗೆ ತಂದ ವಿಡಿಯೋ ಎಲ್ಲೆಡೆ ಸದ್ದು ಮಾಡಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಣ್ಯರು ಮಹಿಳೆಯರ ತೋಳ್ಬಲಕ್ಕೆ ಭೇಷ್ ಎಂದಿದ್ದಾರೆ.

ಈ ವಿಡಿಯೋದಲ್ಲಿ ನಾಗಾಲ್ಯಾಂಡ್ ಮಹಿಳಾ ಬೆಟಾಲಿಯನ್ ತಂಡ ಚರಂಡಿಯಲ್ಲಿ ಸಿಲುಕಿದ್ದ ಬುಲೆರೋ ಕಾರನ್ನು ತಳ್ಳಿದ ದೃಶ್ಯಗಳು ಸೆರೆಯಾಗಿದೆ. ಈ ವಿಡಿಯೋವನ್ನು ನಾಗಾಲ್ಯಾಂಡ್ ಶಾಸಕರೊಬ್ಬರು ಟ್ವಿಟ್ಟರ್ ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

'ಮತ್ತೆ ನಿಮ್ಮನ್ನು ನೋಡುವ ಯೋಗ ನಮಗಿಲ್ಲ', ಬಿಕ್ಕಿದ ಆನಂದ್ ಮಹೀಂದ್ರಾ'ಮತ್ತೆ ನಿಮ್ಮನ್ನು ನೋಡುವ ಯೋಗ ನಮಗಿಲ್ಲ', ಬಿಕ್ಕಿದ ಆನಂದ್ ಮಹೀಂದ್ರಾ

ಅಲ್ಲದೆ ಈ ಪೋಸ್ಟ್ ಗೆ ಉದ್ಯಮಿ ಆನಂದ್ ಮಹೀಂದ್ರಾ, ಕ್ರೀಡಾ ಸಚಿವ ಕಿರಣ್ ರಿಜಿಜು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕಿ ಸ್ಮೃತಿ ಇರಾನಿಯನ್ನು ಟ್ಯಾಗ್ ಮಾಡಿದ್ದಾರೆ.

ಹಾಗೆಯೇ ಈ ಬಗ್ಗೆ ಕಿರಣ್ ರಿಜಿಜು ಹಾಗೂ ಇತರೇ ಗಣ್ಯರು ಕೂಡ ಟ್ವೀಟ್ ಮಾಡಿ ಭೇಷ್ ಎಂದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

English summary
Mahindra Group Chairman Anand Mahindra Says Now I don’t know why the Bolero was in the ditch but I certainly am glad a few able-bodied women were around to rescue it Bolero.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X