ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ: ಪ್ರಕಾಶ್ ಜಾವಡೇಕರ್ ಖಂಡನೆ

|
Google Oneindia Kannada News

ನವದೆಹಲಿ, ಏಪ್ರಿಲ್ 23: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಮೇಲೆ ನಡೆದಿರುವ ಹಲ್ಲೆಯನ್ನು ಕೇಂದ್ರದ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಪ್ರಕಾಶ್ ಜವಡೇಕರ್ ಅವರು ಗುರುವಾರ ತೀವ್ರವಾಗಿ ಖಂಡಿಸಿದ್ದಾರೆ.

Recommended Video

ಅರ್ನಬ್ ಮೇಲೆ ಅಟ್ಯಾಕ್ ಮಾಡಿದ್ದು ಕಾಂಗ್ರೆಸ್ ನವರೇ? | Arnab Goswamy | Congress

ಸಹನೆ ಬೇಧಿಸುವವರೇ ಅಸಹಿಷ್ಣುತೆ ಹಾದಿ ಹಿಡಿಯುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಕಾನೂನು ಪ್ರಕಾರ ಪೊಲೀಸರು ಖಂಡಿತವಾಗಿಯೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಇಂತಹ ದಾಳಿಗಳು ಪ್ರಜಾಪ್ರಭುತ್ವಕ್ಕ ವಿರುದ್ಧವಾದದ್ದು. ಹೆಸರಾಂತ ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ನಡೆದ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪಪತ್ರಕರ್ತ ಅರ್ನಬ್ ದಂಪತಿ ಮೇಲೆ ಹಲ್ಲೆ: ಸೋನಿಯಾ ಮೇಲೆ ಆರೋಪ

ಯಾವುದೇ ಪತ್ರಕರ್ತ ಮೇಲೆ ನಡೆಯುವ ದಾಳಿಯನ್ನೂ ನಾವು ಖಂಡಿಸುತ್ತೇವೆ. ಏಕೆಂದರೆ, ಇಂತಹ ದಾಳಿಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಟಿವಿ ಸ್ಟುಡಿಯೋದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅರ್ನಬ್ ಹಾಗೂ ಅವರ ಪತ್ನಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

I And B Minister Prakash Javadekar Condemns Attack On Arnab Goswami

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ಇಬ್ಬರ ವಿರುದ್ಧ ಭಾರತೀಯ ಸಂವಿಧಾನದ ಕಾಯ್ದೆ 341 ಮತ್ತು 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ದಾಳಿ ಸಂಬಂಧ ಗೋಸ್ವಾಮಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ವೊರ್ಲಿಯಲ್ಲಿರುವ ಟಿವಿ ಕಚೇರಿಯಿಂದ ಮನೆಗೆ ತೆರಳಿತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಹಾಗೂ ಪತ್ನಿ ಮೇಲೆ ದಾಳಿ ನಡೆಸಲಾಗಿದೆ. ಮಧ್ಯರಾತ್ರಿ 12.15ರ ಸುಮಾರಿಗೆ ಗಣಪತ್ರಾವ್ ಕದಮ್ ಮಾರ್ಗ್ ಪ್ರದೇಶದಲ್ಲಿ ತೆರಳುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ನಡೆಸಿದ್ದರು.

ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ಬೆಟ್ಟು ಮಾಡಿ ತೋರಿಸಿ ಕಾರಿನ ಮುಂದೆ ಬೈಕ್ ನಿಲ್ಲಿಸಿ ಅಡ್ಡಗಟ್ಟಿದ್ದರು. ಚಾಲಕನ ಸೀಟ್ ಬಳಿಯಿದ್ದ ಕಿಟಿಕಿಗೆ ಸಾಕಷ್ಟು ಬಾರಿ ಹೊಡೆದರು. ಬಳಿಕ ಕಿಟಕಿ ಗಾಜುಗಳನ್ನು ಒಡೆಯಲು ಸಾಧ್ಯವಾಗಲಿಲ್ಲ.

ನಂತರ ತಮ್ಮ ಬಳಿಯಿದ್ದ ಬಾಟಲಿ ತೆಗೆದು ಅದರಲ್ಲಿದ್ದ ದ್ರವದ ರೀತಿಯ ವಸ್ತುವನ್ನು ಕಾರಿನ ಮೇಲೆಲ್ಲಾ ಸುರಿದು, ಬಾಯಿಗೆ ಬಂದ ರೀತಿಯಲ್ಲಿ ನಿಂದಿಸುತ್ತಿದ್ದರು ಗೋಸ್ವಾಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.

English summary
Union Information and broadcasting minister Prakash Javdekar on Thursday condemned the attack on Republic Tv Editor in chief Arnab Goswami saying that this is against Democracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X