ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಹಾರ್ ಜೈಲಿನ ಕುರಿತು ದೂರುನೀಡಿದ ಭಯೋತ್ಪಾದಕ ಯಾಸಿನ್ ಭಟ್ಕಳ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 6: ಅಹ್ಮದಾಬಾದ್ ಸ್ಫೋಟ(2008), ಬೆಂಗಳೂರು ಸ್ಫೋಟ(2010), ಪುಣೆ ಸ್ಫೋಟ (2012) ದ ರೂವಾರಿ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಯಾಸಿನ್ ಭಟ್ಕಳ್ ಗೆ ಜೈಲಿನಲ್ಲಿ ಸರಿಯಾದ ಆಹಾರ ನೀಡುತ್ತಿಲ್ಲವಂತೆ!

ಇಲ್ಲಿ ಮಾನವ ಹಕ್ಕು ಉಲ್ಲಂಘನೆ ಮತ್ತು ತಗಾರತಮ್ಯದ ವರ್ತನೆ ನಡೆಯುತ್ತಿದೆ ಎಂದು ಸ್ವತಃ ಯಾಸಿನ್ ಭಟ್ಕಳ್ ದೆಹಲಿಯ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದಾನೆ. 2013ರಲ್ಲಿ ಭಾರತ-ನೇಪಾಳ ಗಡಿಯಲ್ಲಿ ಸೆರೆಸಿಕ್ಕ ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳ್ ಸದ್ಯಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.[ಕಾಶ್ಮೀರ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ಬಂಧನ, ಗಿಲಾನಿ ಮನೆ ಜಪ್ತಿ]

I am not getting enough food at Tihar Jail, Delhi: MI chief Yasin Bhatkal

ಜೈಲಿನಲ್ಲಿ ನನಗೆ ಸರಿಯಾದ ಆಹಾರ ಸಿಗುತ್ತಿಲ್ಲ. ರಂಜಾನ್ ಉಪವಾಸದಲ್ಲಿರುವ ನನಗೆ ಅಗತ್ಯ ವೈದ್ಯಕೀಯ ಸೇವೆಯನ್ನೂ ನೀಡಲಾಗುತ್ತಿಲ್ಲ. ಆಹಾರದ ಗುಣಮಟ್ಟ ಮತ್ತು ಪ್ರಮಾಣ ಎರಡೂ ಕಡಿಮೆ ಇರುತ್ತದೆ. ಸರಿಯಾಗಿ ಬೇಯಿಸದೆ ನೀಡುವ ಆಹಾರದಿಂದಾಗಿ ನನಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ ಎಂದು ದೂರ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ.

ಈ ಬಗ್ಗೆ ಜೂನ್ 8 ರೊಳಗೆ ಸ್ಪಷ್ಟ ಉತ್ತರ ನೀಡುವಂತೆ ತಿಹಾರ್ ಜೈಲು ಆಡಳಿತ ಮಂಡಳಿಗೆ ನ್ಯಾಯಾಲಯ ಹೇಳಿದೆ.

English summary
Yasin Bhatkal who was sentenced to death for killing scores of innocent people is hungry. He says that he is not getting enough food at the Tihar Jail in Delhi where he is currently lodged. A Delhi court has sought a response from the jail authorities on the plea filed by the boss of the Indian Mujahideen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X