ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮುಸ್ಲಿಂ, ಪತ್ನಿ ಹಿಂದೂ ಮತ್ತು ನಮ್ಮ ಮಕ್ಕಳು ಭಾರತೀಯರು: ಶಾರುಖ್ ಖಾನ್

|
Google Oneindia Kannada News

Recommended Video

ಇಂದು ಮತದಾನ ಮಾಡಿದ ಇಡೀ ಬಾಲಿವುಡ್..! | Oneindia Kannada

ನವದೆಹಲಿ, ಜನವರಿ 26: ತಮ್ಮ ಮನೆಯಲ್ಲಿ ಎಂದಿಗೂ ಧರ್ಮದ ಕುರಿತು ಚರ್ಚಿಸುವುದಿಲ್ಲ ಎಂದು ಪುನರುಚ್ಚರಿಸಿರುವ ಬಾಲಿವುಡ್ ನಟ ಶಾರುಖ್ ಖಾನ್, ಅರ್ಜಿಗಳಲ್ಲಿ ತಮ್ಮ ಧರ್ಮ ಯಾವುದೆಂದು ಉಲ್ಲೇಖಿಸಬೇಕಾದ ಸಂದರ್ಭಗಳಲ್ಲಿ ತಮ್ಮ ಮಕ್ಕಳು 'ಭಾರತೀಯ' ಎಂಬುದಾಗಿ ನಮೂದಿಸುತ್ತಾರೆ ಎಂದು ಹೇಳಿದ್ದಾರೆ.

ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ ಶಾರುಖ್, ತಾವು ಮತ್ತು ಪತ್ನಿ ಗೌರಿ ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರೂ ಸಂಸಾರದ ವಿಚಾರದಲ್ಲಿ ಧರ್ಮ ಎಂದಿಗೂ ಸಮಸ್ಯೆಯಾಗಿ ಕಂಡಿಲ್ಲ. ತಾವು ಯಾವ ಧರ್ಮಕ್ಕೆ ಸೇರಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕಿಂತಲೂ ಮನೆಯಲ್ಲಿ ಭಾರತೀಯರಾಗಿರುವುದು ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ.

ಮೊದಲ ಬಾರಿಗೆ ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜಾರೋಹಣಮೊದಲ ಬಾರಿಗೆ ಕೇರಳದ ಎಲ್ಲಾ ಮಸೀದಿಗಳಲ್ಲಿ ತ್ರಿವರ್ಣ ಧ್ವಜಾರೋಹಣ

ತಮ್ಮ ನಿಲುವುಗಳಿಂದ ಹಲವು ಬಾರಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಶಾರುಖ್ ಖಾನ್, ತಾವು ಮುಸ್ಲಿಮರಾಗಿದ್ದರೂ ಧರ್ಮದ ಆಧಾರದಲ್ಲಿ ಮನೆಯಲ್ಲಿ ಕೂಡ ತಾರತಮ್ಯ ಮಾಡುವುದಿಲ್ಲ ಎಂದು ಹಲವು ಬಾರಿ ಪ್ರತಿಪಾದಿಸಿದ್ದರು.

ನಾವು ಭಾರತೀಯರು, ನಮಗೆ ಧರ್ಮವಿಲ್ಲ

'ನಾವು ಎಂದಿಗೂ ಮನೆಯಲ್ಲಿ ಹಿಂದೂ ಅಥವಾ ಮುಸ್ಲಿಂ ಎಂದು ಚರ್ಚೆ ಮಾಡಿಲ್ಲ. ನನ್ನ ಹೆಂಡತಿ ಹಿಂದೂ. ನಾನು ಮುಸಲ್ಮಾನ. ನಮ್ಮ ಮಕ್ಕಳು ಹಿಂದೂಸ್ಥಾನಿಗಳು. ಅವರು ಶಾಲೆಗೆ ಸೇರಿದಾಗ ಅಲ್ಲಿ ಅವರು ತಮ್ಮ ಧರ್ಮ ಯಾವುದೆಂದು ಬರೆಯಬೇಕಿತ್ತು. ನನ್ನ ಮಗಳು ನನ್ನ ಬಳಿ ಬಂದು ಒಮ್ಮೆ ಕೇಳಿದ್ದಳು, ಪಪ್ಪಾ ನಮ್ಮದು ಯಾವ ಧರ್ಮ? ಎಂದು. ಆಕೆಯ ಅರ್ಜಿಯಲ್ಲಿ ನಾನು ನಾವು ಭಾರತೀಯರು, ನಮಗೆ ಧರ್ಮವಿಲ್ಲ ಎಂದು ಬರೆದೆ' ಎಂದು ಹೇಳಿದ್ದಾರೆ.

ಎಲ್ಲಾ ಹಬ್ಬ ಆಚರಿಸುತ್ತೇವೆ

ಎಲ್ಲಾ ಹಬ್ಬ ಆಚರಿಸುತ್ತೇವೆ

ತಮ್ಮ ಮನೆಯಲ್ಲಿ ಯಾವುದೇ ಧರ್ಮದ ಆಚರಣೆಗೆ ಒತ್ತಡವಿಲ್ಲ. ಪತ್ನಿ ಗೌರಿ ಮತ್ತು ನಾವೆಲ್ಲರೂ ಮನೆಯಲ್ಲಿ ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ತಾವಿಬ್ಬರೂ ಎಂದಿಗೂ ಧರ್ಮದ ಕುರಿತು ಮಾತನಾಡಿಯೇ ಇಲ್ಲ ಎಂದು ಶಾರುಖ್ ಖಾನ್ ಹಲವು ಬಾರಿ ಹೇಳಿದ್ದರು.

ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ಹೊರಹಾಕಬೇಕು: ಶಿವಸೇನಾ ಹೇಳಿಕೆಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ಹೊರಹಾಕಬೇಕು: ಶಿವಸೇನಾ ಹೇಳಿಕೆ

ಮಕ್ಕಳು ಹೆಸರು ಕೂಡ ಧರ್ಮಾತೀತ

ಮಕ್ಕಳು ಹೆಸರು ಕೂಡ ಧರ್ಮಾತೀತ

'ನನ್ನ ಮಗ ಮತ್ತು ಮಗಳಿಗೆ ಭಾರತಾದ್ಯಂತ ಮತ್ತು ಎಲ್ಲ ಧರ್ಮಗಳಿಗೂ ಅನ್ವಯವಾಗುವಂತಹ ಆರ್ಯನ್ ಮತ್ತು ಸುಹಾನ ಎಂಬ ಹೆಸರಿಟ್ಟಿದ್ದೇನೆ. 'ಖಾನ್' ಎನ್ನುವುದು ನನ್ನ ಹೆಸರಿನಿಂದ ಬರುತ್ತದೆ. ಅದರಿಂದ ಅವರು ಹೊರತಾಗಲು ಸಾಧ್ಯವಿಲ್ಲ' ಎಂದು ತಿಳಿಸಿದ್ದರು.

ನಾನು ಧಾರ್ಮಿಕನಲ್ಲ

ನಾನು ಧಾರ್ಮಿಕನಲ್ಲ

'ನಾನು ಐದು ಬಾರಿ ನಮಾಜ್ ಓದುವ ವಿಚಾರದಲ್ಲಿ ತೀರಾ ಧಾರ್ಮಿಕನಲ್ಲ. ಆದರೆ ನಾನು ಇಸ್ಲಾಮಿಕ್. ಇಸ್ಲಾಂನ ತತ್ವಗಳನ್ನು ನಾನು ನಂಬುತ್ತೇನೆ ಮತ್ತು ಅದು ಉತ್ತಮ ಧರ್ಮ ಹಾಗೂ ಶಿಸ್ತು ಎಂದು ನಂಬಿದ್ದೇನೆ' ಎಂದು ಹೇಳಿದ್ದರು.

ಪ್ರಾಣಿಗಳಂತೆ ಮಕ್ಕಳನ್ನು ಹುಟ್ಟಿಸುವುದು ದೇಶಕ್ಕೆ ಅಪಾಯಕಾರಿ:ಮುಸ್ಲಿಂ ಮುಖಂಡಪ್ರಾಣಿಗಳಂತೆ ಮಕ್ಕಳನ್ನು ಹುಟ್ಟಿಸುವುದು ದೇಶಕ್ಕೆ ಅಪಾಯಕಾರಿ:ಮುಸ್ಲಿಂ ಮುಖಂಡ

English summary
Bollywood actor Shah Rukh Khan said, i am a Muslim, my wife is a Hindu and our kids are Hindustan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X