ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ರು. ಕೇಳಿದ್ದಕ್ಕೆ ಆಕೆಗೆ ಸಿಕ್ಕಿದ್ದು 'ಟ್ರಿಪಲ್ ತಲಾಖ್' ಶಿಕ್ಷೆ!

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಿಂದ ಟ್ರಿಪಲ್ ತಲಾಖ್ ಬಗ್ಗೆ ಆಕ್ಷೇಪಗಳು ಕೇಳಿಬಂದ ನಂತರ, ಈ ರೀತಿಯ ವಿಚ್ಛೇದನ ಕ್ರಮದ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.

|
Google Oneindia Kannada News

ನವದಹೆಲಿ, ಮೇ 15: ತನ್ನ ಮಕ್ಕಳಿಗಾಗಿ 20 ರು. ಕೇಳಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಫಿರೋಜಾಬಾದ್ ನ ರಸೂಲ್ ಪುರದ ಮುಸ್ಲಿಂ ಮಹಿಳೆಯಾದ ಶಾಜಿಯಾ ಎಂಬಾಕೆಯನ್ನು ಆಕೆಯ ಪತಿ 'ಟ್ರಿಪಲ್ ತಲಾಖ್' (ಇಸ್ಲಾ ಧರ್ಮದ ವಿಚ್ಛೇದನ ಮಾದರಿ) ಕೊಟ್ಟು ಮನೆಯಿಂದ ಆಚೆಗಟ್ಟಿದ್ದಾನೆ!

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಿಂದ ಟ್ರಿಪಲ್ ತಲಾಖ್ ಬಗ್ಗೆ ಆಕ್ಷೇಪಗಳು ಕೇಳಿಬಂದ ನಂತರ, ಈ ರೀತಿಯ ವಿಚ್ಛೇದನ ಕ್ರಮದ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.

Husband gives Triple Talaq to his wife for asking Rs. 20 for her children

ಈ ದೂರುಗಳ ಸರಮಾಲೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ದೂರು ಶಾಜಿಯಾ ಅವರದ್ದು. ತನ್ನ ಮಕ್ಕಳಿಗಾಗಿ ಆಕೆ 20 ರು. ಕೇಳಿದ್ದಕ್ಕೆ ಆಕೆಯ ಪತಿ ಸಿಟ್ಟಿಗೆದ್ದು, ಜಗಳವಾಡಿ, ಮೂರು ಬಾರಿ ತಲಾಖ್ ಎಂದು ಉಚ್ಛರಿಸಿ ಆಕೆಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಇದೀಗ, ಆಕೆ ನೆರೆಮನೆಯವರ ಆಶ್ರಯದಲ್ಲಿದ್ದಾರೆ.

ಶಾಜಿಯಾ ಹೇಳುವ ಪ್ರಕಾರ, ಗಂಡನ ಸಿಟ್ಟು ಕೇವಲ 20 ರು. ಕೇಳಿದ್ದಕ್ಕೆ ಬಂದ ಸಿಟ್ಟಲ್ಲ. ಅದಕ್ಕೆ ಸಾಕಷ್ಟು ಹಿನ್ನೆಲೆಯೂ ಇದೆ. ಐದು ವರ್ಷಗಳ ಹಿಂದೆ ಮದುವೆಯಾದ ಶಾಜಿಯಾಗೆ ಈಗ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗೆ, ಎರಡು ಹೆಣ್ಣು ಮಕ್ಕಳೇ ಹುಟ್ಟಿದ್ದು ಆತನಿಗೆ ಶಾಜಿಯಾ ಮೇಲೆ ಜಿಗುಪ್ಸೆ ಬರಲು ಕಾರಣ.

ಅಲ್ಲದೆ, ಆತನೂ ಅಕ್ರಮ ಸಂಬಂಧವೊಂದನ್ನು ಇಟ್ಟುಕೊಂಡಿದ್ದು, ಇದು ಗೊತ್ತಾಗಿ ಶಾಜಿಯಾ ಪ್ರಶ್ನೆ ಮಾಡಿದ್ದಳು. ಇದೂ ಸಹ ಆತನಿಗೆ ಶಾಜಿಯಾ ಮೇಲಿನ ಅಸಮಾಧಾನ ಹೆಚ್ಚಾಗಲು ಕಾರಣ. ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದ ಶಾಜಿಯಾ ಅದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸಿದ್ದಳಂತೆ. ಆಗ, ಪೊಲೀಸರು ಆಕೆಯನ್ನು ಬಚಾವ್ ಮಾಡಿ ತಂದು ಮನೆಗೆ ಬಿಟ್ಟು ಹೋಗಿದ್ದರಂತೆ. ಇದೆಲ್ಲವನ್ನೂ ಅವರು, ತನ್ನ ಪ್ರಾಂತ್ಯದ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಟ್ರಿಪಲ್ ತಲಾಖ್ ನ ವಿರುದ್ಧ ದಿನೇ ದಿನೇ ಕೂಗು ಹೆಚ್ಚಾಗುತ್ತಿರುವುದನ್ನು ಈ ದೂರು ಪುಷ್ಟೀಕರಿಸಿದೆ.

English summary
Cases relating to triple talaq are on the rise, but women coming out and speaking out against it too have increased. A lady in Uttar Pradesh who is a mother of two has alleged that she was thrown out of her home after her husband gave her triple talaq when she asked for Rs 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X