ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಗೆ ದಾಳಿಯಿಟ್ಟ ಮಿಡತೆಗಳು: ರಾಷ್ಟ್ರ ರಾಜಧಾನಿ ಹೈ ಅಲರ್ಟ್

|
Google Oneindia Kannada News

ನವದೆಹಲಿ, ಜೂನ್ 27: ಕೊರೊನಾ ಸಾಂಕ್ರಾಮಿಕ ರೋಗದಿಂದಲೇ ಈಗಾಗಲೇ ಬಳಲಿ ಹೋಗಿರುವ ದೆಹಲಿ ಎನ್‌ಸಿಆರ್ ಜನರಿಗೆ ಮಿಡತೆ ರೂಪದಲ್ಲಿ ಹೊಸ ತೊಂದರೆಗಳು ಹುಟ್ಟಿಕೊಂಡಿವೆ. ಭಾರೀ ಮಿಡತೆಗಳು ದೇಶದ ರಾಜಧಾನಿ ದೆಹಲಿಗೆ ಎಂಟ್ರಿ ನೀಡಿದ್ದಾಗಿದೆ.

Recommended Video

ನ್ಯಾಯ ಕೊಡಿಸಬೇಕಾದ ಅವರೇ ಅನ್ಯಾಯ ಮಾಡುತ್ತಿದ್ದಾರೆ | Davangere | Lady pleads for Justice | Oneindia Kannada

ಗುರುಗ್ರಾಮ್ ಮೂಲಕ ಮರುಭೂಮಿಯ ಮಿಡತೆಗಳು ದೆಹಲಿಯನ್ನು ಪ್ರವೇಶಿಸಿದೆ. ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸಂಭವನೀಯ ಮಿಡತೆ ದಾಳಿಯನ್ನು ನಿಯಂತ್ರಿಸಲು ಸಲಹೆಗಳನ್ನು ನೀಡಿದೆ. ಇದರೊಂದಿಗೆ ದೆಹಲಿ ಸರ್ಕಾರವು ಮಿಡತೆಗಳನ್ನು ನಿರ್ನಾಮ ಮಾಡಲು ಇವು ಪರಿಣಾಮಕಾರಿ ಎಂದು ನಾಲ್ಕು ಕೀಟನಾಶಕಗಳ ಹೆಸರನ್ನು ಸಹ ಸೂಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಮತ್ತು ಹರಿಯಾಣ ಸರ್ಕಾರ ಅಲರ್ಟ್ ಘೋಷಿಸಿದೆ.

ಮಿಡತೆಗಳನ್ನು ತಿಂದ್ರೆ, ಕೊರೊನಾವೈರಸ್ ಹೋಗುತ್ತೆ ಎಂದ ಪಾಕಿಸ್ತಾನದ ಸಂಸದ..!ಮಿಡತೆಗಳನ್ನು ತಿಂದ್ರೆ, ಕೊರೊನಾವೈರಸ್ ಹೋಗುತ್ತೆ ಎಂದ ಪಾಕಿಸ್ತಾನದ ಸಂಸದ..!

ಮಿಡತೆ ನಿಯಂತ್ರಿಸುವ ತಂಡದ ದೃಷ್ಟಿಯಿಂದ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವಿಮಾನದ ಪೈಲಟ್‌ಗಳಿಗೆ ಹಾರಾಟ ಮತ್ತು ಇಳಿಯುವಾಗ ವಿಶೇಷ ಕಾಳಜಿ ವಹಿಸುವಂತೆ ಸೂಚನೆ ನೀಡಿದೆ. ಗುರುಗ್ರಾಮ್-ದ್ವಾರಕಾ ಎಕ್ಸ್‌ಪ್ರೆಸ್ ಹೆದ್ದಾರಿ ಬಳಿ ಹೆಚ್ಚಿನ ಸಂಖ್ಯೆಯ ಮಿಡತೆಗಳನ್ನು ಸಹ ಗಮನಿಸಲಾಗಿದೆ. ವಿಮಾನಗಳ ನಡುವೆ ಪಕ್ಷಿ ಅಥವಾ ಕೀಟಗಳ ಹಿಂಡುಗಳ ಆಗಮನವು ವಿಮಾನ ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮಿಡತೆ ಗುಂಪುಗಳು ಬಂದಿರುವಲ್ಲಿ ವಿಮಾನ ನಿಲ್ದಾಣವೂ ಇದೆ. ದೆಹಲಿಯನ್ನು ಪ್ರವೇಶಿಸಿರುವ ಮಿಡತೆ ಈಗ ನೋಯ್ಡಾ ಮತ್ತು ಗಾಜಿಯಾಬಾದ್ ಅನ್ನು ತಲುಪಬಹುದು.

Huge Desert Locusts Reach Delhi After Covering Gurgram Skies: Delhi High Alert


ಏತನ್ಮಧ್ಯೆ, ದೆಹಲಿಯ ಕಾರ್ಮಿಕ ಮತ್ತು ಅಭಿವೃದ್ಧಿ ಸಚಿವ ಗೋಪಾಲ್ ರೈ ಅವರು ರಾಷ್ಟ್ರ ರಾಜಧಾನಿಯಲ್ಲಿ ಮಿಡತೆ ದಾಳಿಯ ಬಗ್ಗೆ ತುರ್ತು ಸಭೆ ಕರೆದಿದ್ದಾರೆ. ಅಭಿವೃದ್ಧಿ ಕಾರ್ಯದರ್ಶಿ, ವಿಭಾಗೀಯ ಆಯುಕ್ತರು, ಕೃಷಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರ ಪ್ರಕಾರ, ದಕ್ಷಿಣ ದೆಹಲಿಯ ಅಸೋಲಾ ಭಟ್ಟಿ ಪ್ರದೇಶಕ್ಕೆ ಸಣ್ಣ ಮಿಡತೆ ಮಿಡತೆಗಳು ಕೂಡ ತಲುಪಿದೆ ಎಂದು ಸಚಿವರಿಗೆ ಮಾಹಿತಿ ನೀಡಲಾಯಿತು.

"CALM BEFORE STORM" ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ

ದೆಹಲಿಯಲ್ಲಿ ಸಂಭವನೀಯ ಮಿಡತೆ ದಾಳಿಯನ್ನು ಎದುರಿಸಲು ಎಲ್ಲಾ ಜಿಲ್ಲಾ ನ್ಯಾಯಾಧೀಶರು ಮತ್ತು ಉಪವಿಭಾಗ ನ್ಯಾಯಾಧೀಶರಿಗೆ ವಿವರವಾದ ಸಲಹೆಯನ್ನು ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಮಿಡತೆಗಳ ಹಿಂಡುಗಳನ್ನು ಹಿಮ್ಮೆಟ್ಟಿಸಲು ಡಿಜೆಗಳನ್ನು , ಡ್ರಮ್ಸ್ ಮತ್ತು ಡೋಲುಗಳನ್ನು ಬಾರಿಸಲು ಅರರಣ್ಯ ಇಲಾಖೆಯನ್ನು ಕೇಳಿದರು ಎಂದು ಅಧಿಕಾರಿ ಹೇಳಿದರು.

ಮಿಡತೆಗಳು ದಾಳಿ ಇಟ್ಟಿರುವ ಪ್ರದೇಶದಲ್ಲಿ ಜನರು ಈಗಾಗಲೇ ತಮ್ಮ ಮನೆಗಳಲ್ಲಿ ಅಡಗಿದ್ದಾರೆ. ಮಿಡತೆಗಳನ್ನು ಓಡಿಸಲು ಜನರು ಪಟಾಕಿ ಸಿಡಿಸುವುದರ ಜೊತೆಗೆ ಪಾತ್ರೆಗಳು ಮತ್ತು ಘಂಟೆಗಳನ್ನು ಬಾರಿಸುತ್ತಿದ್ದಾರೆ.

ಮತ್ತೊಂದೆಡೆ, ಮಿಡತೆಗಳ ದಾಳಿಯ ಬಗ್ಗೆ ಯಾವುದೇ ಎಚ್ಚರಿಕೆ ನೀಡದ ಕಾರಣ ಗುರುಗ್ರಾಮ್ ಜಿಲ್ಲಾಡಳಿತದ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Huge swarms of crop-destroying locusts areas of the national capital bordering Gurugram on Saturday afternoon as the invading insects attacked farms and houses
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X