ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ಗಂಟೆಯಲ್ಲಿ ದೆಹಲಿ ಅತ್ಯಾಚಾರಿ ಸಿಕ್ಕಿದ್ದು ಹೇಗೆ?

By Kiran B Hegde
|
Google Oneindia Kannada News

ನವದೆಹಲಿ, ಡಿ. 8: ದೆಹಲಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಉಬೇರ್ ಟ್ಯಾಕ್ಸಿ ಸಂಸ್ಥೆ ಚಾಲಕನನ್ನು ಕೆಲವೇ ಗಂಟೆಗಳೊಳಗೆ ಪೊಲೀಸರು ಬಂಧಿಸಿರುವುದು ಶ್ಲಾಘನೆಗೊಳಲಾಗಿದೆ. ಪೊಲೀಸರು ಹೀಗೆ ಮಿಂಚಿನ ಕಾರ್ಯಾಚರಣೆ ನಡೆಸಲು ಅನುಸರಿಸಿದ ತಂತ್ರ ಏನು ಗೊತ್ತೇ?

ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರು ನೀಡಿದಾಗ ಪೊಲೀಸರಿಗೆ ಉಬೇರ್ ಎಂಬ ಸಂಸ್ಥೆ ಯಾವುದು ಮತ್ತು ಎಲ್ಲಿದೆ ಎಂಬುದೇ ತಿಳಿದಿರಲಿಲ್ಲ ಎಂದು ಹೇಳುತ್ತಾರೆ ದೆಹಲಿ ಉತ್ತರದ ಪೊಲೀಸ್ ಉಪ ಆಯುಕ್ತ ಮಧುರ್ ವರ್ಮಾ. [ಟ್ಯಾಕ್ಸಿ ಚಾಲಕನ ಬಂಧನ]

rape

ಹಾಗಿದ್ದರೆ ಹುಡುಕಿದ್ದು ಹೇಗೆ? ಮಧುರ್ ವರ್ಮಾ ಮಾತಿನಲ್ಲೇ ಕೇಳಿ...

ಆ ಕ್ಷಣದಲ್ಲಿ ನಮ್ಮ ಹತ್ತಿರ ಒಂದೂ ಸುಳಿವಿರಲಿಲ್ಲ. ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಮೊಬೈಲಿನಿಂದ ತೆಗೆದ ಕಾರಿನ ನಂಬರ್ ಪ್ಲೇಟ್ ಫೋಟೊ ಮಾತ್ರ ತನಿಖೆಗೆ ದಿಕ್ಕಾಗಿತ್ತು.

ಅಮೆರಿಕ ಮೂಲದ ಉಬೇರ್ ಕಂಪನಿ ಸ್ಯಾನ್‌ ಫ್ರಾನ್ಸಿಸ್ಕೋ ನಗರದಲ್ಲಿ ತನ್ನ ಮುಖ್ಯ ಕಚೇರಿ ಹೊಂದಿದೆ. ಆದರೆ, ದೆಹಲಿಯಲ್ಲಿ ಕಂಪನಿಯ ಕಚೇರಿ ಎಲ್ಲಿದೆ ಎಂಬುದು ತಿಳಿಯಲಿಲ್ಲ.

ಅಲ್ಲದೆ, ಪೊಲೀಸರಿಗೆ ದೂರು ನೀಡಿದಾಗ ಆಗಲೇ ರಾತ್ರಿ 1.30 ಗಂಟೆಯಾಗಿತ್ತು. ಅಲ್ಲದೆ, ಅತ್ಯಾಚಾರ ಸಂತ್ರಸ್ತೆಗೆ ಶೀಘ್ರ ವೈದ್ಯಕೀಯ ಚಿಕಿತ್ಸೆ ನೀಡಬೇಕಾಗಿತ್ತು.

ಆಗ ಅನಿವಾರ್ಯವಾಗಿ ಪೊಲೀಸರು ಇಂಟರ್‌ನೆಟ್‌ನಲ್ಲಿ ಉಬೇರ್ ಕಚೇರಿ ಹುಡುಕಾಟ ನಿಲ್ಲಿಸಿ, ತನಿಖೆಗಾಗಿ ರಸ್ತೆಗಿಳಿದೆವು. ಉಬೇರ್ ಟ್ಯಾಕ್ಸಿ ಕಂಪನಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, Paytm ಖಾತೆ ಸೃಷ್ಟಿಸಿಕೊಂಡೆವು. ಏಕೆಂದರೆ ಉಬೇರ್ ಸಂಸ್ಥೆಯು ಕೇವಲ Paytm ಮೂಲಕ ಮಾತ್ರ ಹಣ ಪಾವತಿ ಒಪ್ಪಿಕೊಳ್ಳುತ್ತಿತ್ತು. [ನಿರ್ಭಯಾಳ ಅತ್ಯಾಚಾರಕ್ಕೆ ಒಂದು ವರ್ಷ]

Paytm ಮೂಲಕ ಹಣ ಪಾವತಿಸಿದ ನಂತರ ಉಬೇರ್ ಟ್ಯಾಕ್ಸಿ ನಮ್ಮನ್ನು ಕರೆದೊಯ್ಯಲು ಬಂದಿತು. ನಂತರ ತಮ್ಮನ್ನು ಉಬೇರ್ ಕಂಪನಿಯ ಕಚೇರಿಗೆ ಕರೆದೊಯ್ಯುವಂತೆ ಚಾಲಕನಿಗೆ ತಿಳಿಸಿದೆವು. ಚಾಲಕ ನಮ್ಮನ್ನು ಕಂಪನಿಯು ಗುರ್‌ಗಾಂವ್‌ನಲ್ಲಿ ಹೊಂದಿರುವ ಕಚೇರಿಗೆ ಕರೆದೊಯ್ದ.

ನಂತರ ಕಂಪನಿಯ ಕೆಲಸಗಾರರನ್ನು ತನಿಖೆಗೊಳಪಡಿಸಿದಾಗ ಟ್ಯಾಕ್ಸಿ ಡ್ರೈವರ್ ಯಾರು ಎಂಬುದು ಗೊತ್ತಾಯಿತು. ಸ್ವಲ್ಪವೂ ತಡಮಾಡದೆ ಚಾಲಕನನ್ನು ಬಂಧಿಸಲಾಯಿತು.

English summary
How New Delhi police trapped the taxi driver of Uber company who raped a woman? It was really challenging to find the rapist for the police told DCP Madhur Verma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X