• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಳುಗುತ್ತಿರುವ ಕುಟುಂಬ ಉಳಿಸಿಕೊಳ್ಳಲು ಅದೆಷ್ಟು ಸುಳ್ಳು?: ಜೇಟ್ಲಿ

By Anil Achar
|

ನವದೆಹಲಿ, ಫೆಬ್ರವರಿ 12: ಮುಳುಗುತ್ತಿರುವ ಕುಟುಂಬವನ್ನು ಉಳಿಸಿಕೊಳ್ಳುವ ಸಲುವಾಗಿ ಅದೆಷ್ಟು ಸುಳ್ಳು ಹೇಳುವ ಅಗತ್ಯವಿದೆ? ಈ ಸುಳ್ಳು ಹೇಳುವ ಪರಿಣಾಮ ದೊಡ್ಡದಾಗುತ್ತಾ ಇದೆ. "ಮಹಾಜೂಟ್ ಬಂಧನ್"ನ ಇತರ ಸಹವರ್ತಿಗಳಿಗೂ ಹಬ್ಬುತ್ತಿದ್ದೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.

ಉದ್ಯಮಿ ಅನಿಲ್ ಅಂಬಾನಿಗೆ ಮಧ್ಯವರ್ತಿ ರೀತಿಯಲ್ಲಿ ಪ್ರಧಾನಿ ಕಾರ್ಯ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಜೇಟ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲಿ ರಫೇಲ್ ವ್ಯವಹಾರದಲ್ಲಿ ಸಾವಿರಾರು ಕೋಟಿ ರುಪಾಯಿಯ ಸಾರ್ವಜನಿಕ ಹಣ ಉಳಿತಾಯವಾಗಿದೆಯೋ ಅಂಥದ್ದರ ಬಗ್ಗೆ ದಿನವೂ ಸುಳ್ಳಿನ ಕಂತೆ ಹರಿಯಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!

ರಫೇಲ್ ಆಯ್ಕೆ ಮಾಡಿಕೊಂಡ ನಿರ್ಧಾರಕ್ಕೆ ಸಂಬಂಧಿಸಿದ ಹಾಗೆ ಸಿಎಜಿ ನೀಡಿದ ವರದಿಗೂ ಸುಳ್ಳು ಎನ್ನುತ್ತಿದ್ದಾರೆ. ಐದು ವರ್ಷದ ಹಿಂದೆ ಈಗಿನ ಸಿಎಜಿಯೇ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆಗಿದ್ದರು. ಹಿರಿಯರಾಗಿದ್ದರಿಂದ ಒಂದು ಹಂತದಲ್ಲಿ ಅವರನ್ನು ಆರ್ಥಿಕ ಕಾರ್ಯದರ್ಶಿ ಮಾಡಲಾಯಿತು. ಯಾವುದೇ ವಿವಾದದ ಭಯವಿಲ್ಲದೇ ಈ ಮಾತನ್ನು ಹೇಳುತ್ತಿದ್ದೇನೆ: ರಫೇಲ್ ವ್ಯವಹಾರದ ಯಾವ ಕಾಗದ ಪತ್ರವೂ ಅವರನ್ನು ತಲುಪಿಲ್ಲ ಎಂದಿದ್ದಾರೆ.

ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಯಾವುದೇ ಬಗೆಯಲ್ಲಿ ರಕ್ಷಣಾ ವ್ಯವಹಾರದ ನಿರ್ಧಾರದಲ್ಲಿ ಅವರಿಗೆ ಸಂಬಂಧವಿಲ್ಲ ಎಂದು ತಮ್ಮ ಫೇಸ್ ಬುಕ್ ನಲ್ಲಿ ಅರುಣ್ ಜೇಟ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Arun Jaitley questioned how many more lies will be peddled to save a "sinking dynasty". He further alleged that many of the senior leaders of the grand old party lack the courage and moral authority to advise the dynasts to "change course". He mentioned about Rafale deal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more