ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀರಂನ ಮತ್ತೊಂದು ಲಸಿಕೆ 'ಕೋವಾವ್ಯಾಕ್ಸ್' ಅಕ್ಟೋಬರ್‌ನಲ್ಲಿ ಬಿಡುಗಡೆ

|
Google Oneindia Kannada News

ನವದೆಹಲಿ, ಆಗಸ್ಟ್ 06: ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮತ್ತೊಂದು ಕೊರೊನಾ ಲಸಿಕೆ 'ಕೋವಾವ್ಯಾಕ್ಸ್' ಅಕ್ಟೋಬರ್‌ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.

ಭಾರತದಲ್ಲಿ ತಮ್ಮ ಕಂಪನಿ ತಯಾರಿಸುತ್ತಿರುವ ಮತ್ತೊಂದು ಕೋವಿಡ್ -19 ಲಸಿಕೆ ಕೋವೊವ್ಯಾಕ್ಸ್ ಅನ್ನು ಅಕ್ಟೋಬರ್ ನಲ್ಲಿ ಮತ್ತು 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗಾಗಿ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಆರೋಗ್ಯ ಸಚಿವ ಮನ್ಸುಖ್ ಜತೆ ಅದಾರ್ ಪೂನಾವಾಲಾ ಮಹತ್ವದ ಚರ್ಚೆಆರೋಗ್ಯ ಸಚಿವ ಮನ್ಸುಖ್ ಜತೆ ಅದಾರ್ ಪೂನಾವಾಲಾ ಮಹತ್ವದ ಚರ್ಚೆ

ಪೂನಾವಾಲಾ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

Hopeful Of Launching Covovax For Adults In October This Year: Adar Poonawalla

"ಸರ್ಕಾರವು ನಮಗೆ ಸಹಾಯ ಮಾಡುತ್ತಿದೆ ಮತ್ತು ನಾವು ಯಾವುದೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿಲ್ಲ. ಎಲ್ಲಾ ಸಹಕಾರ ಮತ್ತು ಬೆಂಬಲಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞರಾಗಿರುತ್ತೇವೆ" ಎಂದು ಪೂನಾವಾಲಾ ಅವರು ಅಮಿತ್ ಶಾ ಭೇಟಿಯ ನಂತರ ಪಿಟಿಐಗೆ ತಿಳಿಸಿದ್ದಾರೆ.

ಮಕ್ಕಳಿಗಾಗಿ ಲಸಿಕೆ ಬಗ್ಗೆ ಕೇಳಿದಾಗ, "ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ ಜನವರಿ-ಫೆಬ್ರವರಿಯಲ್ಲಿ ಆರಂಭಿಸಲಾಗುವುದು" ಎಂದು ಹೇಳಿದರು.

ಇನ್ನೂ ಡಿಸಿಜಿಐ ಅನುಮೋದನೆಗಳನ್ನು ಅವಲಂಬಿಸಿ ವಯಸ್ಕರಿಗೆ ಕೋವೊವ್ಯಾಕ್ಸ್ ಅನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಪೂನಾವಾಲಾ ತಿಳಿಸಿದರು.

ಅಮೆರಿಕ ಮೂಲದ ನೋವಾವ್ಯಾಕ್ಸ್ ಕಂಪನಿ ಕೋವೊವ್ಯಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯ ಉತ್ಪಾದನೆಗೆ ಸೆರಂ ಸಂಸ್ಥೆ ಕಳೆದ ವರ್ಷ ಆಗಸ್ಟ್ ನಲ್ಲಿ ಪರವಾನಗಿ ಪಡೆದಿದೆ.
ಸೀರಂ ಇನ್‌ಸ್ಟಿಟ್ಯೂಟ್‌ಗೆ ಎಲ್ಲಾ ರೀತಿಯ ಬೆಂಬಲ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಪೂನಾವಾಲ ಅವರು, ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಯಾವಾಗಲೂ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅದಾರ್ ಪೂನಾವಾಲಾ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ದೇಶಾದ್ಯಂತ ಕೋಟ್ಯಂತರ ಡೋಸ್ ಲಸಿಕೆ ವಿತರಣೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಮಾಣದ ಲಸಿಕೆ ಸರಬರಾಜು ಕುರಿತಂತೆ ಅದಾರ್ ಪೂನಾವಾಲಾರೊಂದಿಗೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಅದಾರ್ ಪೂನಾವಾಲಾ ಅವರು, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ನಾವು ಚರ್ಚಿಸಿದ್ದೇವೆ. ಯುರೋಪಿನ 17 ಕ್ಕೂ ಹೆಚ್ಚು ದೇಶಗಳು ಈಗಾಗಲೇ ಕೋವಿ‌ಶೀಲ್ಡ್ ಲಸಿಕೆಯನ್ನು ಅನುಮೋದಿಸಿವೆ ಮತ್ತು ಇನ್ನೂ ಅನೇಕ ದೇಶಗಳು ಅನುಮೋದನೆ ನೀಡಲು ಸರದಿಯಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಲಸಿಕೆಗಳಲ್ಲಿ ಕೋವಿಶೀಲ್ಡ್‌ ಕೂಡ ಒಂದಾಗಿದ್ದು, ಈ ಲಸಿಕೆಯನ್ನು ಅದಾರ್ ಪೂನಾವಾಲ ಅವರ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತಯಾರಿಸುತ್ತಿದೆ.

ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಪಡೆದವರ ಮೇಲೆ ಅಧ್ಯಯನ ನಡೆಸಿದಾಗ ಈ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಿಗೆ 93% ಕಡಿಮೆ ಸೋಂಕು ಪತ್ತೆಯಾಗಿದೆ. 15.9 ಲಕ್ಷಕ್ಕೂ ಹೆಚ್ಚಿನ ಆರೋಗ್ಯ ಕಾರ್ಯಕರ್ತರು ಹಾಗೂ ಸರಕಾರದಿಂದ ನೇಮಕಗೊಂಡಿರುವ ಆರಕ್ಷಕ ದಳ, ಹೋಮ್‌ಗಾರ್ಡ್‌ಗಳಿಗೆ ಕೋವಿಶೀಲ್ಡ್‌ನ ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸಲಾಗಿದ್ದು ಇವರ ಮೇಲೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಸೋಂಕಿನ ಅಂಶ 93% ಇಳಿಕೆಯಾಗಿದೆ ಎಂಬುದು ತಿಳಿದು ಬಂದಿದೆ.

AFMCಯ ಈ ಅಧ್ಯಯನವು ವಿಶ್ವದಲ್ಲಿಯೇ ಇದುವರೆಗೆ ನಡೆಸಲಾದ ಅತಿದೊಡ್ಡ ಅಧ್ಯಯನ ಎಂಬುದಾಗಿ ಪರಿಗಣಿಸಲಾಗಿದೆ. ಸಂಶೋಧಕರ ಪ್ರಕಾರ ಇದುವರೆಗೆ ಮಾಡಿದ ಎಲ್ಲಾ ಅಧ್ಯಯನಗಳ ಮಾದರಿ ಗಾತ್ರವು 10 ಲಕ್ಷಕ್ಕಿಂತ ಕಡಿಮೆ ಎಂದು ತಿಳಿಸಿದ್ದು VIN-WIN cohort ಬಹುಶಃ ಲಸಿಕೆಯ ಪರಿಣಾಮಕಾರಿತ್ವದ ಕುರಿತು ವಿಶ್ವದಾದ್ಯಂತದ ನಡೆಸಿದ ಅತಿದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ ಎಂದು ನಾವು ನಂಬುತ್ತೇವೆ.

ಕೋವಿಶೀಲ್ಡ್ ಲಸಿಕೆಯು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ AZD-1222 ಫಾರ್ಮುಲೇಶನ್‌ನ ಭಾರತದಲ್ಲಿ ತಯಾರಾದ ವಾರಂಟಿ ಹೊಂದಿರುವ ಲಸಿಕೆಯಾಗಿದೆ. ಭಾರತದಲ್ಲಿ ಕೋವಿಡ್-19 ವಿರುದ್ಧ ಬಳಸುತ್ತಿರುವ ಲಸಿಕೆಗಳಲ್ಲಿ ಇದೂ ಒಂದಾಗಿದೆ.

ಈ ಅಧ್ಯಯನದಲ್ಲಿ ಪಾಲ್ಗೊಂಡ 15,95,630 ಸರಾಸರಿ ಜನರ ವಯಸ್ಸು 27 ವರ್ಷಗಳಾಗಿದ್ದು, 99% ಪುರುಷರಿದ್ದರು. 135 ದಿನಗಳ ಕಾಲ ನಡೆದ ಈ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ, ಮೇ 30ರ ವೇಳೆಗೆ, ಒಂದೇ ಡೋಸ್ ಪಡೆದ 95.4% ಜನರಿದ್ದರು ಮತ್ತು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ 82.2% ಜನರಿದ್ದರು. ಈ ಅಧ್ಯಯನದಲ್ಲಿ ಪಾಲ್ಗೊಂಡವರು ಲಸಿಕೆ ಹಾಕದವರಿಂದ ಭಾಗಶಃ ಲಸಿಕೆ ಹಾಕಿದ ಹಾಗೂ ಪೂರ್ಣ ಲಸಿಕೆ ಪಡೆದ ವಿಭಾಗಕ್ಕೆ ಬದಲಾಗುತ್ತಿದ್ದರು. ಈ ರೀತಿಯಾಗಿ ಪ್ರತಿ ವರ್ಗದ ಪಾಲ್ಗೊಳ್ಳುವವರ ಸಂಖ್ಯೆ ಬದಲಾಗುತ್ತಿತ್ತು.

English summary
Serum Institute of India CEO Adar Poonawalla on Friday said he is hopeful that Covovax, another COVID-19 vaccine being manufactured by his company in India, will be launched in October for adults and for children by the first quarter of 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X