ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರ್ಯಾದಾ ಹತ್ಯೆ ತಡೆಗೆ ಸುಪ್ರೀಂ ಮಹತ್ವದ ಆದೇಶ

|
Google Oneindia Kannada News

ನವದೆಹಲಿ, ಮಾರ್ಚ್ 28: ಇತ್ತೀಚೆಗೆ ತಾನೇ ಅನ್ಯಜಾತಿಯ ಯುವಕನ್ನು ಮದುವೆಯಾಗಲು ಹೊರಟ ಮಗಳನ್ನು ಸ್ವಂತ ತಂದೆಯೇ ಇರಿದು ಸಾಯಿಸಿದ ಘಟನೆ ವರದಿಯಾಗಿತ್ತು. ಈ ಮರ್ಯಾದಾ ಹತ್ಯೆ ಎಂಬ ಸಾಮಾಜಿಕ ಅನಿಷ್ಟದ ಬಗ್ಗೆ ಅಸಹ್ಯ ಹುಟ್ಟಿತ್ತು. ಇಂಥ ಪದ್ಧತಿಯನ್ನು ನಿಯಂತ್ರಣಕ್ಕೆ ತರುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.

ಇಬ್ಬರು ವಯಸ್ಕರು, ತಮ್ಮ ಬದುಕಿನ ಕುರಿತು ನಿರ್ಧಾರ ತೆಗೆದುಕೊಳ್ಳಲು ಶಕ್ಯರಾಗಿರುವವರು ಪರಸ್ಪರ ಇಷ್ಟಪಟ್ಟು ಮದುವೆಯಾದರೆ ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ನಮ್ಮ ಕಾನೂನು ಎಂದೋ ಹೇಳಿದೆ.

Honour killing guillotines individual liberty says Supreme Court

ಕೇರಳ: ಮದುವೆ ಮುನ್ನಾದಿನ ವಧುವನ್ನು ಇರಿದು ಕೊಂದ ಪಾಪಿ ತಂದೆಕೇರಳ: ಮದುವೆ ಮುನ್ನಾದಿನ ವಧುವನ್ನು ಇರಿದು ಕೊಂದ ಪಾಪಿ ತಂದೆ

ಆದರೆ 'ಮರ್ಯಾದಾ ಹತ್ಯೆ ಎಂಬ ಪರಿಕಲ್ಪನೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕಗ್ಗೊಲೆ ಮಾಡುತ್ತಿದೆ' ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ವಯಸ್ಕ ಯುವಕ-ಯುವತಿ ಪ್ರೀತಿಸಿ ಮದುವೆಯಾದರೆ ಆ ಪ್ರಕರಣದಲ್ಲಿ ತಲೆಹಾಕುವುದಕಕೆ ಯಾರಿಗೂ ಅಧಿಕಾರವಿಲ್ಲ ಎಂದಿದೆ. ಮಾತ್ರವಲ್ಲ, ಈ ಸಂಬಂಧ ನ್ಯಾಯ ಪಂಚಾಯತಿಗಳೂ ತಲೆತೂರಿಸುವುದು ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಇಷ್ಟು ದಿನ ಮರ್ಯಾದಾ ಹತ್ಯೆಯಂಥ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದಿದ್ದೇ ನ್ಯಾಯ ಪಂಚಾಯತಿಯ ಅಕ್ರಮ ತೀರ್ಮಾನಗಳಿಂದ. ಆದರೆ ಸುಪ್ರೀಂ ಕೋರ್ಟಿನ ಈ ಆದೇಶದಿಂದ ಮರ್ಯಾದಾ ಹತ್ಯೆಯ ಪ್ರಕರಣಗಳು ನಿಯಂತ್ರಣಕ್ಕೆ ಬರುವ ಸಂಭವಗಳು ಗೋಚರಿಸಿವೆ.

English summary
Honour killing guillotines individual liberty, freedom of choice and one's own perception of choice. It has to be sublimely borne in mind that when two adults consensually choose each other as life partners, it is a manifestation of their choice which is recognized under Articles 19 and 21 of the Constitution, the Supreme Court said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X