ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ

|
Google Oneindia Kannada News

ನವದೆಹಲಿ, ಫೆಬ್ರವರಿ 09: ಭಾರತೀಯ ವಾಯುಸೇನೆಗೆ ಸಂಬಂಧಿಸಿದ ಕೆಲವು ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಅರುಣ್ ಮೆರ್ವಾ ಅವರನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿದೆ.

ಪಾಕಿಸ್ತಾನದ ತನಿಖಾ ದಳ ಐಎಸ್ ಐ ಗೆ ಭಾರತೀಯ ವಾಯುಸೇನೆಯ ಗೌಪ್ಯ ಮಾಹಿತಿಗಳನ್ನು ಇವರು ರವಾನಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಫೆ.08 ರಂದು ಇವರನ್ನು ಬಂಧಿಸಲಾಗಿದೆ.

ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ

ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನನ್ವಯ 51 ವರ್ಷ ವಯಸ್ಸಿನ ಅರುಣ್ ಮೆರ್ವಾ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'Honey-trapped' IAF officer arrested in New Delhi

ತಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಯುಸೇನೆಯ ಗುಪ್ತ ಮಾಹಿತಿಗಳ ಫೋಟೋ ತೆಗೆದು ವಾಟ್ಸ್ ಆಪ್ ಮೂಲಕ ಐಎಸ್ ಐ ಏಜೆಂಟ್ ಒಬ್ಬರಿಗೆ ರವಾನಿಸುತ್ತಿದ್ದರು.

ಮಾಹಿತಿಯ ಪ್ರಕಾರ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ತಾವು ಈಗಾಗಲೇ ಐಎಸ್ ಐ ಏಜೆಂಟ್ ಜೊತೆ ಹಲವು ಪ್ರಮುಖಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.

English summary
Delhi Police Special Cell on Feb 8th arrested Group Captain Arun Marwah for allegedly leaking classified Indian Air Force (IAF) information to Pakistan's intelligence agency, Inter-Services Intelligence (ISI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X