ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಕಾಮ ಒಂದು ಪ್ರವೃತ್ತಿ, ಅದು ಶಾಶ್ವತವಲ್ಲ: ರವಿಶಂಕರ್ ಗುರೂಜಿ

|
Google Oneindia Kannada News

ನವದೆಹಲಿ, ನವೆಂಬರ್ 14: "ಸಲಿಂಗಕಾಮ ಎಂಬುದು ಒಂದು ಪ್ರವೃತ್ತಿ. ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಅದು ಬದಲಾಗಬಹುದು" ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹೇಳಿದರು.

ನ.14 ರಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ವಾರ್ಷಿಕವಾಗಿ ನಡೆಯುವ ನೆಹರು ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ

'ಸಲಿಂಗಕಾಮ ಒಂದು ಪ್ರವೃತ್ತಿ. ಅದನ್ನು ಒಪ್ಪಿಕೊಳ್ಳಿ, ಆದರೆ ಒಂದು ವಿಷಯವನ್ನು ಮರೆಯಬೇಡಿ, ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಈ ಮನಸ್ಥಿತಿ ಬದಲಾಗಬಹುದು. ನಾನು ಎಷ್ಟೋ ಪುರುಷ ಸಲಿಂಗಕಾಮಿಗಳನ್ನು ನೋಡಿದ್ದೇನೆ. ಆದರೆ ಅವರೆಲ್ಲ ಕ್ರಮೇಣ ಬದಲಾಗಿದ್ದಾರೆ. ಸಾಮಾನ್ಯ ಜನರಂತೇ ಮನಃಪರಿವರ್ತನೆಗೊಂಡಿದ್ದಾರೆ" ಎಂದರು.

ಸಲಿಂಗ ಕಾಮ ಅಸಹಜ, ಬಿಜೆಪಿ ಬೆಂಬಲಿಸಲ್ಲ ಸಲಿಂಗ ಕಾಮ ಅಸಹಜ, ಬಿಜೆಪಿ ಬೆಂಬಲಿಸಲ್ಲ

ಇದಕ್ಕೂ ಮೊದಲು ಸಹ ಅವರು ಸಲಿಂಗ ಕಾಮದ ಬಗ್ಗೆ ಮಾತನಾಡಿದ್ದರು. ಹಿಂದು ಸಂಸ್ಕೃತಿಯಲ್ಲಿ ಸಲಿಂಗ ಕಾಮವನ್ನು ಅಪರಾಧ ಎಂದು ಎಲ್ಲಿಯೂ ಹೇಳಲಾಗಿಲ್ಲ ಎಂದಿದ್ದರು.

ಸಲಿಂಗಕಾಮː ಅಮೀರ್ ಖಾನ್ ಗೆ ಲೀಗಲ್ ನೋಟಿಸ್ಸಲಿಂಗಕಾಮː ಅಮೀರ್ ಖಾನ್ ಗೆ ಲೀಗಲ್ ನೋಟಿಸ್

ಹಿಂದು ಸಂಸ್ಕೃತಿಯಲ್ಲಿ ಸಲಿಂಗಕಾಮ ತಪ್ಪಲ್ಲ!

2013, ಡಿಸೆಂಬರ್ 11 ರಂದು ಸಲಿಂಗಕಾಮದ ಕುರಿತು ಟ್ವೀಟ್ ಮಾಡಿದ್ದ ಶ್ರೀ ರವಿಶಂಕರ್ ಗುರೂಜಿ, "ಸಲಿಂಗ ಕಾಮವನ್ನು ಹಿಂದು ಸಂಸ್ಕೃತಿಯಲ್ಲೆಲ್ಲೂ ಅಪರಾಧವೆಂಬಂತೆ ಉಲ್ಲೇಖಿಸಿಲ್ಲ. ಅಷ್ಟಕ್ಕೂ ಅಯ್ಯಪ್ಪ ಸ್ವಾಮಿ ಹುಟ್ಟಿದ್ದು ಹರಿ-ಹರ(ವಿಷ್ಣು-ಶಿವ)ರಿಗೇ ತಾನೆ?" ಎಂದಿದ್ದರು.

ಅದೊಂದು ಪ್ರವೃತ್ತಿ ಅಷ್ಟೆ!

ಯಾವ ಸ್ಮೃತಿಯಲ್ಲೂ ಸಲಿಂಗಕಾಮ ತಪ್ಪು ಎಂದಿಲ್ಲ. ಪ್ರತಿಯೊಬ್ಬರಲ್ಲೂ ಪುರುಷ, ಸ್ತ್ರೀ ಅಂಶಗಳಿದ್ದೇ ಇರುತ್ತವೆ. ಅವರವರ ಆದ್ಯತೆ, ಪ್ರವೃತ್ತಿಗೆ ತಕ್ಕಂತೆ ಅವರ ಆಸಕ್ತಿಗಳಿರುತ್ತವೆ, ಮತ್ತು ಈ ಸ್ಥಿತಿ ಬದಲಾಗಬಹುದು ಎಂದೂ ಟ್ವೀಟ್ ಮಾಡಿದ್ದರು.

ಲೈಂಗಿಕ ಆಸಕ್ತಿಯ ಮೇಲೆ ತಾರತಮ್ಯ ಎದುರಿಸಬಾರದು!

ಯಾರೂ ಸಹ ತಮ್ಮ ತಮ್ಮ ಲೈಂಗಿಕ ಆಸಕ್ತಿಯ ಮೇಲೆ, ಆದ್ಯತೆಯ ಮೇಲೆ ತಾರತಮ್ಯ ಎದುರಿಸಬಾರದು. ಈ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂಬುದು ನಿಜಕ್ಕೂ ಅಸಂಬದ್ಧ ನಡೆ ಎನ್ನುವ ಮೂಲಕ ಸಲಿಂಗಕಾಮಿಗಳಿಗೆ ಬೆಂಬಲ ನೀಡಿದ್ದರು.

ಇಂದೂ ಪುನರುಚ್ಛಾರ

ಇಂದು(ನ.14) ಸಹ ತಮ್ಮ ಅದೇ ಮಾತನ್ನು ಸಮರ್ಥಿಸಿಕೊಂಡ ಶ್ರೀ ರವಿಶಂಕರ್ ಗುರೂಜಿ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತ, "ಸಲಿಂಗಕಾಮದ ಪ್ರವೃತ್ತಿ ಶಾಶ್ವತವಲ್ಲ, ಅದು ಬದಲಾಗಬಹುದು. ಅದು ತಪ್ಪಲ್ಲ" ಎಂದರು.

English summary
"Homosexuality is a tendency, this tendency is not permanent, it may change later" founder of Art Of Living, Sri Ravi Shankar Guruji told in Jawaharlala Nehru University(JNU) in New Delhi. The spiritual leader was addressing the annual Nehru memorial lecture there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X