ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮೇಲೆ ಕೆಲವು ವಿಐಪಿಗಳಿಗೆ CRPF ಭದ್ರತೆ ಇಲ್ಲ: ಗ್ರಹ ಸಚಿವಾಲಯ

|
Google Oneindia Kannada News

ನವದೆಹಲಿ, ಜುಲೈ 23: ಕೆಲವು ವಿಐಪಿಗಳಿಗೆ ನೀಡುತ್ತಿದ್ದ ಭದ್ರತೆಯ ಪಟ್ಟಿಯನ್ನು ಮರುಪರಿಶೀಲಿಸಲಾಗಿದ್ದು, ಅವರಲ್ಲಿ ಕೆಲವರಿಗೆ ನೀಡುತ್ತಿದ್ದ ಸಿಆರ್ ಪಿಎಫ್ ಭದ್ರತೆಯನ್ನು ಮೊಟಕುಗೊಳಿಸಲಾಗಿದೆ.

ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಬಿಜೆಪಿ ಮುಖಂಡ , ಸಂಸದ ರಾಜೀವ್ ಪ್ರತಾಪ್ ರೂಡಿ, ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ನೀಡುತ್ತಿದ್ದ ಸಿಆರ್ ಪಿಎಫ್ ಭದ್ರತೆಯನ್ನು ಕೇಂದ್ರ ಗ್ರಹ ಸಚಿವಾಲಯ ವಾಪಸ್ ಪಡೆದಿದೆ.

ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ನೀಡಲಾಗಿದ್ದ Z+ ಭದ್ರತೆಯನ್ನು ವಾಪಸ್ ಪಡೆಯಲಾಗುತ್ತದೆ ಎಮದು ನ್ಯೂಸ್ ಏಜೆನ್ಸಿಯೊಂದು ಸುದ್ದಿ ಮಾಡಿದ್ದ ಒಂದು ಗಂಟೆಯ ನಂತರ ಈ ಬೆಳವಣಿಗೆ ನಡೆದಿದೆ.

Home ministry told, No more CRPF cover for several VIPs

ಅಖಿಲೇಶ್ ಯಾದವ್ ಅವರಿಗೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಅಂದರೆ 2012 ರಲ್ಲಿ ವಿಐಪಿ ಭದ್ರತೆ ಒದಗಿಸಲಾಗಿತ್ತು. 22 ಎನ್ ಎಸ್ ಜಿ ಕಮಾಂಡೋಗಳು, ಅತ್ಯಾಧುನಿಕ ಶಸ್ತಾಸ್ತ್ರಗಳನ್ನು ಹೊಂದಿದ್ದ ಭದ್ರತಾ ಸಿಬ್ಬಂದಿಯನ್ನು ಅವರ ಭದ್ರತೆಗೆಂದು ನಿಯೋಜಿಸಲಾಗಿತ್ತು.

ಗ್ರಹ ಸಚಿವಾಲಯವು ಆಯಾ ವ್ಯಕ್ತಿಗಿರುವ ಬೆದರಿಕೆ ಕರೆ ಮತ್ತು ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ವಿಐಪಿ ಭದ್ರತೆಯನ್ನು ನಿರ್ಧರಿಸುತ್ತದೆ. ಅಗತ್ಯವಿಲ್ಲದಿದ್ದರೂ ವಿಐಪಿ ಭದ್ರತೆ ನೀಡುವುದರಿಂದ ರಾಷ್ಟ್ರದ ಭೊಕ್ಕಸಕ್ಕೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.

ವಿಐಪಿ ಭದ್ರತೆ ನಿರ್ಧರಿಸುವವರು ಯಾರು?
ಗುಪ್ತಚರ ದಳ, ಗ್ರಹ ಇಲಾಖೆ ಕಾರ್ಯದರ್ಶಿ ಮತ್ತು ಗ್ರಹ ಸಚಿವರನ್ನೊಳಗೊಂದ ಸಮಿತಿ ಈ ಭದ್ರತೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.

English summary
The ministery of Home affairs issued an order revision of security of several VIPs, including RJD leader Lalu Prasad Yadav, LJP leader Chirag Paswan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X