ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರತೆ ಕುರಿತು ತುರ್ತು ಸಭೆ ನಡೆಸಿದ ರಾಜನಾಥ್ ಸಿಂಗ್

|
Google Oneindia Kannada News

ನವದೆಹಲಿ, ಫೆಬ್ರವರಿ 27: ದೇಶದ ಭದ್ರತೆಗೆ ಸಂಬಂಧಿಸಿದಂತೆ ಗೃಹಸಚಿವ ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆ ನಡೆಸಿದ್ದು, ದೇಶದ ಸುರಕ್ಷತೆಯ ಅವಲೋಕನ ಮಾಡಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಳ್ ಅವರೂ ಭಾಗಿಯಾಗಿದ್ದು, ದೇಶದ ಭದ್ರತೆಯ ಕುರಿತು ಮಾಹಿತಿ ನೀಡಿದ್ದಾರೆ. ಗಡಿ ಭದ್ರತಾ ಪಡೆ ಪೂರ್ಣ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಕೆಲವು ದಿನಗಳ ವರೆಗೆ ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸುವ ಮಾತುಕತೆ ನಡೆದಿದೆ.

ಉಗ್ರನೆಲೆ ಧ್ವಂಸ LIVE: ಯುವ ಉತ್ಸವವನ್ನು ಅರ್ಧದಲ್ಲೇ ಬಿಟ್ಟು ಹೊರಟ ಮೋದಿಉಗ್ರನೆಲೆ ಧ್ವಂಸ LIVE: ಯುವ ಉತ್ಸವವನ್ನು ಅರ್ಧದಲ್ಲೇ ಬಿಟ್ಟು ಹೊರಟ ಮೋದಿ

HM Rajnath Singh holds meeting on security situation

ಸಭೆಯಲ್ಲಿ ಕೇಂದ್ರ ಗೃಹ ಸಚಿವರ ಕಾರ್ಯದರ್ಶಿ ರಾಜೀವ್ ಗೌಬಾ, ಗುಪ್ತಚರ ದಳದ ನಿರ್ದೇಶಕ ರಾಜೀವ್ ಜೈನ್ ಭಾಗವಹಿಸಿದ್ದರು.

ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯ ನಂತರ ಉಗ್ರರ ದಮನಕ್ಕೆ ನಿಂತ ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಷ್ ಇ ಮೊಹಮ್ಮದ್ ಉಗ್ರ ನೆಲೆಯ ಮೇಲೆ ವಾಯುದಾಳಿ ನಡೆಸಿ ಉಗ್ರ ನೆಲೆಯನ್ನು ಧ್ವಂಸಗೊಳಿಸಿದೆ. ಈ ಬೆಳವಣಿಗೆಯ ಂತರ ಭಾರತ ಮತ್ತು ಪಾಕಿಸ್ತಾನದ ನಡುವಲ್ಲಿ ಯುದ್ಧದ ಸನ್ನಿವೇಶ ಏರ್ಪಾಡಾಗಿದ್ದು, ಈ ಕುರಿತು ಉನ್ನತ ಮಟ್ಟದ ಸಭೆಯನ್ನು ಗೃಹ ಸಚಿವರು ನಡೆಸಿದ್ದಾರೆ.

English summary
Home minister Rajnath Singh holds a meeting and reviewed security situation in the country and steps taken to ensure peace in all sensitive places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X