ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂರಾವ್ ಆಸ್ಪತ್ರೆ ವೈದ್ಯರಿಗೆ ಥಳಿತ, ಎರಡನೇ ದಿನಕ್ಕೆ ಕಾಲಿಟ್ಟ ವೈದ್ಯರ ಮುಷ್ಕರ

|
Google Oneindia Kannada News

ನವದೆಹಲಿ, ಜು.1: ವೈದ್ಯರಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ಉತ್ತರ ದೆಹಲಿಯಲ್ಲಿರುವ ಹಿಂದೂರಾವ್ ಆಸ್ಪತ್ರೆ ವೈದ್ಯರು ಭಾನುವಾರದಿಂದ ಮುಷ್ಕರ ಆರಂಭಿಸಿದ್ದು ಅದು ಸೋಮವಾರವೂ ಮುಂದುವರೆದಿದೆ.

ಪೊಲೀಸರು ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ ಹಲ್ಲೆ ಮಾಡಿದ್ದು ಯಾರು ಅವರ ಹಿನ್ನೆಲೆ, ಹೆಸರು ಏನು ಎಂದು ವೈದ್ಯರಿಗೆ ತಿಳಿದಿಲ್ಲ ಆದರೆ ಆತ ಯಾವುದೇ ರೋಗಿಯ ಕಡೆಯವರು ಎಂದು ಮಾತ್ರ ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು? ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಏಕೆ? ಹಿನ್ನೆಲೆಯೇನು?

ಬೆಳಗ್ಗೆ 11.30ರ ಸುಮಾರಿಗೆ ಸ್ಟೇಜ್ ವಿ ಕ್ರಾನಿಕ್ ರೆನಲ್ ಫೇಲ್ಯೂರ್‌ನಿಂದಾಗಿ ತುರ್ತು ಚಿಕಿತ್ಸಾ ಘಟಕಕ್ಕೆ ಬಂದಿದ್ದರು. ರೋಗಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಆಕೆಗೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸುವಂತೆ ಹೇಳಲಾಗಿತ್ತು ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಳು.

 Hindurao hospital doctors strike at Delhi

ವೈದ್ಯರು ಮರಣ ಪ್ರಮಾಣಪತ್ರಕ್ಕೆ ಸಹಿಹಾಕಿ ಎಂದು ಆಕೆಯ ಕಡೆಯವರಿಗೆ ಹೇಳಿದಾಗ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಯಲ್ಲಿ ಗಂಭೀರ ಗಾಯಗಳಾಗಿವೆ ವೈದ್ಯರಿಗೆ ಆಸ್ಪತ್ರೆಯಲ್ಲಿ ರಕ್ಷಣೆಯಿಲ್ಲ ಹಾಗೂ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಪಿಯುಷ್ ಸಿಂಗ್ ತಿಳಿಸಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಯುವ ವೈದ್ಯ ಡಾ. ಪರಿಬಾಹ ಮುಖರ್ಜಿ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ವೈದ್ಯರು ಮುಷ್ಕರ ನಡೆಸಿದ್ದರು.

English summary
Hindurao hospital doctors strike at Delhi, alleging that attendants of a patient assaulted them Saturday.FIR against unknown persons as doctors did not know the names of the patient’s attendants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X