ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಹೇಳಿದ ಪೊಲೀಸರಿಗೆ ವಿಡಿಯೋ ತೋರಿಸಿದ ಹೈಕೋರ್ಟ್

|
Google Oneindia Kannada News

ನವದೆಹಲಿ, ಫೆಬ್ರವರಿ 26: ನ್ಯಾಯಾಲಯದಲ್ಲಿ ಸುಳ್ಳು ಹೇಳಿ ನುಣುಚಿಕೊಳ್ಳಲು ಯತ್ನಿಸಿದ ಪೊಲೀಸರಿಗೆ ಹೈಕೋರ್ಟ್ ವಿಡಿಯೋ ತೋರಿಸಿ ಛೀಮಾರಿ ಹಾಕಿದ ಘಟನೆ ಮಂಗಳವಾರ ನಡೆದಿದೆ.

ದೆಹಲಿ ಹೈಕೋರ್ಟ್‌ನಲ್ಲಿ ದೆಹಲಿ ಹಿಂಸಾಚಾರದ ಕುರಿತ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಚೋದಾನಕಾರಿ ಹೇಳಿಕೆಗಳನ್ನು ನೀಡಿದ ಬಿಜೆಪಿ ನಾಯಕರ ಮೇಲೆ ಕ್ರಮ ಜರುಗಿಸಿಲ್ಲವೇಕೆ ಎಂದು ಪೊಲೀಸರನ್ನು ಪ್ರಶ್ನೆ ಮಾಡಿತು.

ಈ ವೇಳೆ ನಾವು ಪ್ರಚೋದನಕಾರಿ ಭಾಷಣ ಮಾಡಿದ ಕಪಿಲ್ ಮಿಶ್ರಾ ವಿಡಿಯೋ ನೋಡಿಲ್ಲವೆಂದು ಹೇಳಿ ನುಣುಚಿಕೊಳ್ಳಲು ದೆಹಲಿ ಪೊಲೀಸರು ಯತ್ನಿಸಿದಾಗ, ಇಲ್ಲಿಯೇ ನಿಮಗೆ ವಿಡಿಯೋ ತೋರಿಸುತ್ತೇವೆ ಎಂದು ಹೇಳಿ ಹೈಕೋರ್ಟ್ ನ್ಯಾಯಾಧೀಶರು ಬಿಜೆಪಿ ನಾಯಕರ ಪ್ರಚೋದನಕಾರಿ ವಿಡಿಯೋಗಳನ್ನು ತೋರಿಸಿದ್ದಾರೆ.

ಒಟ್ಟು ನಾಲ್ಕು ವಿಡಿಯೋಗಳನ್ನು ಹೈಕೋರ್ಟ್ ನಲ್ಲಿ ಪ್ರದರ್ಶಿಸಲಾಗಿದೆ. ನಾಲ್ಕು ವಿಡಿಯೋಗಳು ಸಹ ಬಿಜೆಪಿ ನಾಯಕರು ಮಾಡಿದ ದ್ವೇಷ ಭಾಷಣ ಕುರಿತಾದದ್ದೇ ಆಗಿದೆ.

ಪೊಲೀಸರ ಮಾತನ್ನೂ ಕೇಳುವುದಿಲ್ಲ: ಕಪಿಲ್ ಮಿಶ್ರಾ

ಪೊಲೀಸರ ಮಾತನ್ನೂ ಕೇಳುವುದಿಲ್ಲ: ಕಪಿಲ್ ಮಿಶ್ರಾ

ಬಿಜೆಪಿಯ ಕಪಿಲ್ ಮಿಶ್ರಾ ಎರಡು ದಿನ ಹಿಂದೆಯಷ್ಟೇ ನೀಡಿದ್ದ ಪ್ರಚೋದನಕಾರಿ ಹೇಳಿಕೆಯ ವಿಡಿಯೋವನ್ನು ಮೊದಲಿಗೆ ನ್ಯಾಯಾಲಯದಲ್ಲಿ ಪ್ರದರ್ಶಿಸಲಾಗಿದೆ. ವಿಡಿಯೋದಲ್ಲಿ ಕಪಿಲ್ ಮಿಶ್ರಾ, 'ಡೊನಾಲ್ಡ್ ಟ್ರಂಪ್ ಭಾರತದಿಂದ ಹೋಗುವವರೆಗೆ ಮಾತ್ರವೇ ಸುಮ್ಮನಿರುತ್ತೇವೆ, ಆ ನಂತರ ನಾವು ಪೊಲೀಸರ ಮಾತನ್ನೂ ಕೇಳುವುದಿಲ್ಲ' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

'ಶಾಹೀನ್ ಬಾಗ್ ಪ್ರತಿಭಟನಾಕಾರರು ಅತ್ಯಾಚಾರಿಗಳು'

'ಶಾಹೀನ್ ಬಾಗ್ ಪ್ರತಿಭಟನಾಕಾರರು ಅತ್ಯಾಚಾರಿಗಳು'

ಎರಡನೇಯ ವಿಡಿಯೋ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರದ್ದಾಗಿತ್ತು. 'ಶಾಹೀನ್ ಬಾಗ್ ಪ್ರತಿಭಟನಾಕಾರರು ಅತ್ಯಾಚಾರಿಗಳು, ಕೊಲೆಗಡುಕರು' ಎಂದು ಪರ್ವೀಶ್ ವರ್ಮಾ ಹೇಳಿಕೆ ನೀಡಿದ್ದರು. 'ದೆಹಲಿಯ ಜನತೆಯ ಮನೆಗಳಿಗೆ ಅವರು ನುಗ್ಗುತ್ತಾರೆ ನಿಮ್ಮ ಹೆಂಡತಿ, ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ' ಎಂದು ಅವರು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು, ಅವರ ಮೇಲೆ ಯಾವ ಕ್ರಮವನ್ನೂ ಜರುಗಿಸಿರಲಿಲ್ಲ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿಡಿಯೋ ಪ್ರದರ್ಶನ

ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿಡಿಯೋ ಪ್ರದರ್ಶನ

ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿಡಿಯೋವನ್ನು ಸಹ ಹೈಕೋರ್ಟ್‌ನಲ್ಲಿ ಪ್ರದರ್ಶಿಸಲಾಗಿದ್ದು, ದೆಹಲಿ ಚುನಾವಣೆ ಸಮಯದಲ್ಲಿ 'ಗೋಲಿ ಮಾರೋ ಸಾಲೋಂಕೊ..' ಎಂದು ವೇದಿಕೆ ಮೇಲಿಂದ ಘೋಷಣೆ ಕೂಗಿದ್ದ ವಿಡಿಯೋ ತೋರಿಸಲಾಗಿದೆ.

ಬಹಿರಂಗ ಬೆದರಿಕೆ ಹಾಕಿರುವ ಶಾಸಕ ಅಭಯ್ ವರ್ಮಾ

ಬಹಿರಂಗ ಬೆದರಿಕೆ ಹಾಕಿರುವ ಶಾಸಕ ಅಭಯ್ ವರ್ಮಾ

ಹೊಸ ಬಿಜೆಪಿ ಶಾಸಕ ಅಭಯ್ ವರ್ಮಾ ನಿನ್ನೆಯಷ್ಟೆ ಬೆಂಬಲಿಗರೊಂದಿಗೆ ದೆಹಲಿಯ ಬೀದಿಗಳಲ್ಲಿ 'ಗೋಲಿ ಮಾರೋ ಸಾಲೋಂಕೊ' ಎಂದು ಹೇಳುತ್ತಾ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದ ವಿಡಿಯೋವನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು.

ದೆಹಲಿ ಪೊಲೀಸರ ಮೇಲೆ ಹೈಕೋರ್ಟ್ ಗರಂ

ದೆಹಲಿ ಪೊಲೀಸರ ಮೇಲೆ ಹೈಕೋರ್ಟ್ ಗರಂ

ದೆಹಲಿ ಪೊಲೀಸರ ಮೇಲೆ ಹರಿಹಾಯ್ದ ದೆಹಲಿ ಹೈಕೋರ್ಟ್ ದ್ವೇಷ ಭಾಷಣ ಮಾಡಿರುವ ಈ ನಾಯಕರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದೆ. ಅಲ್ಲದೆ ಇವರುಗಳ ಮೇಲೆ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

English summary
Delhi high court showed BJP leaders hate speech videos to police and ordered to take action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X