ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಪದಾರ್ಥದ ಮೇಲೆ ಚುಕ್ಕಿ: ಸಸ್ಯಹಾರಕ್ಕೆ ಹಸಿರು, ಮಾಂಸಹಾರಕ್ಕೆ ಕಂದು!

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಆಹಾರ ವ್ಯಾಪಾರ ನಿರ್ವಾಹಕರು ಯಾವುದೇ ಆಹಾರ ಪ್ರಕಟಣೆಗೂ ಪೂರ್ವದಲ್ಲಿ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಆಹಾರ ಸುರಕ್ಷತಾ ನಿಯಂತ್ರಕರಿಗೆ ನಿರ್ದೇಶನ ನೀಡಿದೆ. "ಆಹಾರ ಪ್ರಕಟಣೆಯಲ್ಲಿ ಅವುಗಳ ಶೇಕಡಾವಾರು ಪ್ರಮಾಣವನ್ನು ಸೇರಿಸುವುದರ ಜೊತೆಗೆ ಅವರ ಕೋಡ್ ಹೆಸರುಗಳಿಂದ ಮಾತ್ರವಲ್ಲದೆ, ಅವು ಸಸ್ಯ ಅಥವಾ ಪ್ರಾಣಿ ಮೂಲದಿಂದ ಸಿದ್ಧಪಡಿಸಲಾಗಿದೆ ಅಥವಾ ಪ್ರಯೋಗಾಲಯಗಳಲ್ಲಿ ತಯಾರಿಸಲಾಗಿದೆಯೇ ಎಂಬುದನ್ನು ಉಲ್ಲೇಖಿಸಬೇಕು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2011ರ ನಿಯಮಾವಳಿ 2.2.2(4) ಅನ್ನು ನಿರ್ವಾಹಕರು ಕಟ್ಟುನಿಟ್ಟಾಗಿ ಪಾಲಿಸಬೇಕು. "ಯಾವುದೇ ಪದಾರ್ಥದ ಬಳಕೆಯ ಆಧಾರದ ಮೇಲೆ - ಯಾವುದೇ ಶೇಕಡಾವಾರು ಪ್ರಮಾಣ, ಪ್ರಾಣಿಗಳ ಮಾಂಸದಿಂದ ಸಿದ್ಧಪಡಿಸಲಾಗಿದೆಯೇ, ಸಸ್ಯಹಾರದಿಂದ ಸಿದ್ಧಪಡಿಸಲಾಗಿದೆಯೇ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸಬೇಕು," ಎಂದು ಕೋರ್ಟ್ ಹೇಳಿದೆ.

ಮಠಕ್ಕೆ ಬಂದು ತತ್ತಿ ತಿಂತೀವಿ, ಹುಷಾರ್! ಇದು ಒಂದು ಮೊಟ್ಟೆಯ ಕಥೆಮಠಕ್ಕೆ ಬಂದು ತತ್ತಿ ತಿಂತೀವಿ, ಹುಷಾರ್! ಇದು ಒಂದು ಮೊಟ್ಟೆಯ ಕಥೆ

2011ರ ನಿಯಮಗಳ ಅಡಿ ಲೇಬಲಿಂಗ್

2011ರ ನಿಯಮಗಳ ಅಡಿ ಲೇಬಲಿಂಗ್

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರತುಪಡಿಸಿದಂತೆ ಉಳಿದ ಮಾಂಸಹಾರಿ ಆಹಾರವನ್ನು "ಪಕ್ಷಿಗಳು, ತಾಜಾ ನೀರು ಅಥವಾ ಸಮುದ್ರ ಪ್ರಾಣಿಗಳು ಅಥವಾ ಮೊಟ್ಟೆಗಳು ಅಥವಾ ಯಾವುದೇ ಪ್ರಾಣಿ ಮಾಂಸದ ಉತ್ಪನ್ನ ಸಂಪೂರ್ಣ ಅಥವಾ ಭಾಗಶಃ ಪ್ರಮಾಣವನ್ನು ಒಳಗೊಂಡಿರುತ್ತದೆ," ಎಂದು ನಿಬಂಧನೆಯು ಉಲ್ಲೇಖಿಸುತ್ತದೆ. ಎಲ್ಲಾ ಮಾಂಸಾಹಾರಿ ಆಹಾರವನ್ನು "ಕಂದು ಬಣ್ಣ ತುಂಬಿದ ವೃತ್ತ... [ನಿರ್ದಿಷ್ಟ ವ್ಯಾಸದ] ಚೌಕದೊಳಗೆ ಕಂದು ಬಣ್ಣದ ಬಾಹ್ಯರೇಖೆಯೊಂದಿಗೆ ವೃತ್ತದ ವ್ಯಾಸಕ್ಕಿಂತ ಎರಡು ಪಟ್ಟು ಬದಿಗಳನ್ನು ಹೊಂದಿರುವ ಲೇಬಲ್ ಮಾಡಬೇಕು. ಮೊಟ್ಟೆ ಮಾತ್ರ ಮಾಂಸಾಹಾರ ಪದಾರ್ಥವಾಗಿದ್ದರೆ, "ಈ ಪರಿಣಾಮದ ಘೋಷಣೆಯನ್ನು ಹೇಳಿದ ಚಿಹ್ನೆಯ ಜೊತೆಗೆ". ಸಸ್ಯಾಹಾರಿ ಆಹಾರವನ್ನು "ಹಸಿರು ಬಣ್ಣ ತುಂಬಿದ ವೃತ್ತ, ಚೌಕದ ಒಳಗೆ ಹಸಿರು ಬಾಹ್ಯರೇಖೆ," ಲೇಬಲ್ ಮಾಡಿರಬೇಕು.

ತೂಕ, ಪ್ರಮಾಣ ಮತ್ತು ಇತರೆ ಅಂಶಗಳನ್ನು ಒಳಗೊಂಡಿರಬೇಕು

ತೂಕ, ಪ್ರಮಾಣ ಮತ್ತು ಇತರೆ ಅಂಶಗಳನ್ನು ಒಳಗೊಂಡಿರಬೇಕು

ಆಹಾರ ಉತ್ಪಾದಕರು ನಿಬಂಧನೆ ಪ್ರಕಾರ, ಪದಾರ್ಥದ ಜೊತೆಗೆ ತೂಕ, ಪ್ರಮಾಣವನ್ನು ಉಲ್ಲೇಖಿಸಿರಬೇಕು. ಪದಾರ್ಥದಲ್ಲಿ ಯಾವ ಖಾದ್ಯದ ಎಣ್ಣೆ ಬಳಕೆಯಾಗಿದೆ, ಸಸ್ಯಹಾರ ಖಾದ್ಯದ ಕೊಬ್ಬು, ಮಾಂಸಹಾರಿ ಖಾದ್ಯದ ಕೊಬ್ಬು ಅಥವಾ ಎಣ್ಣೆ, ಮೀನು ಕೋಳಿ ಮಾಂಸ ಅಥವಾ ಗಿಣ್ಣು ಅನ್ನು ಬಳಕೆ ಮಾಡಲಾಗಿದೆ ಎಂಬುದನ್ನು ಪ್ರಕಟಿಸಿರಬೇಕು. ಯಾವಾಗ ಒಂದು ಪದಾರ್ಥವು "ಎರಡು ಅಥವಾ ಐದಕ್ಕಿಂತ ಹೆಚ್ಚು ಅಂಶವನ್ನು ಒಳಗೊಂಡಿರುವಾಗ ಸಂಯುಕ್ತ ಘಟಕಾಂಶದ ಪಟ್ಟಿಯನ್ನು ಘೋಷಿಸಬೇಕಾಗಿಲ್ಲ.

ಆಹಾರದ ಬಗ್ಗೆ ಕೋರ್ಟ್ ಮೊರೆ ಹೋಗಿದ್ದು ಯಾರು?

ಆಹಾರದ ಬಗ್ಗೆ ಕೋರ್ಟ್ ಮೊರೆ ಹೋಗಿದ್ದು ಯಾರು?

ಗೋವುಗಳ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆ ಆಗಿರುವ ರಾಮ ಗೋ ರಕ್ಷಾ ದಳವು ಪ್ರಸ್ತುತ ನಿಯಮಗಳನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಪಾತ್ರೆಗಳು, ಬಳಸಿರುವ ವಸ್ತುಗಳು ಸೇರಿದಂತೆ ಕೇವಲ ಆಹಾರ ಪದಾರ್ಥಗಳಲ್ಲದೇ, ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸುವ ವಸ್ತುಗಳನ್ನು ಲೇಬಲ್‌ನಲ್ಲಿ ಉಲ್ಲೇಖಿಸುವಂತೆ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿತ್ತು.

ಆಹಾರ ಪದಾರ್ಥಗಳ ಮೇಲೆ ಈ ರೀತಿಯ ಲೇಬಲ್ ಹಾಗೂ ಅಂಶಗಳನ್ನು ಉಲ್ಲೇಖಿಸುವುದರಿಂದ ಶುದ್ಧ ಸಸ್ಯಹಾರಿಗಳು ಅವುಗಳನ್ನು ಬಳಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯಕವಾಗಲಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಲೇಬಲ್ ಉಲ್ಲೇಖದ ಹಿಂದೆ ಇರುವ ಸಮಸ್ಯೆಗಳೇನು?

ಲೇಬಲ್ ಉಲ್ಲೇಖದ ಹಿಂದೆ ಇರುವ ಸಮಸ್ಯೆಗಳೇನು?

"ಎಲ್ಲಾ ಆಹಾರ ಪದಾರ್ಥಗಳ ಮೇಲೆ ಅದು ಯಾವ ಅಂಶಗಳಿಂದ ಕೂಡಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿರಬೇಕು, ಅದರಿಂದ ಪದಾರ್ಥವು ಸಸ್ಯಹಾರವೋ ಅಥವಾ ಮಾಂಸಹಾರವೋ ಎಂಬುದನ್ನು ಗುರುತಿಸುವಂತೆ ಇರಬೇಕು. ನಿಯಮಾವಳಿಯನ್ನು ಕೆಲವು ಆಹಾರ ಉತ್ಪಾದಕರು ಮತ್ತು ಉದ್ಯಮಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಪ್ರತಿ ಆಹಾರ ಪದಾರ್ಥ, ಆಹಾರ ಉತ್ಪನ್ನಗಳ ಮೇಲೆ ಅವುಗಳಲ್ಲಿ ಬಳಸಲಾದ ಘಟಕ ಮತ್ತು ಅಂಶವನ್ನು ಉಲ್ಲೇಖಿಸುವುದು ಕಡ್ಡಾಯ," ಎಂದು ಕೋರ್ಟ್ ಹೇಳಿದೆ.

ಮಾಂಸ ಅಥವಾ ಮೀನುಗಳಿಂದ ವಾಣಿಜ್ಯಿಕವಾಗಿ ತಯಾರಿಸಲಾದ ತ್ವರಿತ ನೂಡಲ್ಸ್ ಮತ್ತು ಆಲೂಗಡ್ಡೆ ಚಿಪ್ಸ್‌ನಲ್ಲಿ ಕಂಡುಬರುವ ಆಹಾರ ಸಂಯೋಜಕವಾದ ಡಿಸೋಡಿಯಮ್ ಇನೋಸಿನೇಟ್ ಎಂಬ ರಾಸಾಯನಿಕದ ಉದಾಹರಣೆಯನ್ನು ನ್ಯಾಯಾಲಯವು ನೀಡಿತು. "Google ನಲ್ಲಿ ಈ ಬಗ್ಗೆ ಪರಿಶೋಧಿಸಿದಾಗ ಇದನ್ನು ಸಾಮಾನ್ಯವಾಗಿ ಹಂದಿ ಕೊಬ್ಬಿನಿಂದ ಸಿದ್ಧಪಡಿಸಲಾಗಿರುತ್ತದೆ ಎಂಬುದು ಗೊತ್ತಾಗುತ್ತದೆ," ಎಂದು ಕೋರ್ಟ್ ಹೇಳಿದೆ.

"ಅದೇ ರೀತಿ ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳು ಮತ್ತು ಮಸಾಲೆ ಪದಾರ್ಥಗಳಲ್ಲಿ ಯಾವ ಅಂಶಗಳನ್ನು ಸೇರಿಸಲಾಗಿತ್ತದೆ. ಈ ಪದಾರ್ಥವನ್ನು ಸಿದ್ಧಪಡಿಸುವಲ್ಲಿ ಸಸ್ಯಹಾರಿ, ಮಾಂಸ ಹಾರಿ ಅಥವಾ ಮೀನು-ಮೊಟ್ಟೆ ಅಂಶಗಳನ್ನು ಸೇರಿಸಲಾಗಿದೆಯೇ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಾಗುತ್ತದೆ," ಎಂದು ಕೋರ್ಟ್ ತಿಳಿಸಿದೆ.

English summary
Delhi High Court has directed the food safety regulator to ensure that food business operators make full disclosures of veg, non-veg ingredients of food items. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X