ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ದಾಳಿ ನಡೆಸಲು ಸಂಚು; ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆ

|
Google Oneindia Kannada News

ನವದೆಹಲಿ, ನವೆಂಬರ್ 20 : ಅಮೃತ್ ಸರ್ ಸ್ಫೋಟದ ಎರಡು ದಿನದ ನಂತರ ದೆಹಲಿ ಪೊಲೀಸರು ಮಂಗಳವಾರ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತರು ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದ್ದು, ದೆಹಲಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿರಬಹುದು ಎಂಬ ಗುಮಾನಿ ಇದೆ.

ಜಮ್ಮು-ಕಾಶ್ಮೀರ: ನಾಲ್ವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆಜಮ್ಮು-ಕಾಶ್ಮೀರ: ನಾಲ್ವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

ಗೆಸ್ಟ್ ಹೌಸ್ ಗಳಲ್ಲಿ, ಪೇಯಿಂಗ್ ಗೆಸ್ಟ್ ಅಂತ ಉಳಿದುಕೊಂಡಿರುವ ಸಾಧ್ಯತೆ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಶಂಕಿತರು ತೆಗೆಸಿಕೊಂಡಿರುವ ಫೋಟೊದಲ್ಲಿ ಫಿರೋಜ್ ಪುರ್ 9 ಕಿ.ಮೀ., ದೆಹಲಿ 360 ಕಿ.ಮೀ. ಅಂತಿದೆ. ಫಿರೋಜ್ ಪುರ್ ಎಂಬುದು ಅಮೃತ್ ಸರ್ ಗೆ 133 ಕಿ.ಮೀ. ಇದೆ. ಇದೇ ಸ್ಥಳದಲ್ಲಿ ಎರಡು ಮೋಟಾರ್ ಸೈಕಲ್ ನಲ್ಲಿ ಬಂದ ಯುವಕರು ಭಾನುವಾರ ಗ್ರನೇಡ್ ದಾಳಿ ನಡೆಸಿ, ಮೂವರ ಸಾವಿಗೆ ಹಾಗೂ ಇಪ್ಪತ್ತು ಮಂದಿ ಗಾಯಗೊಳ್ಳಲು ಕಾರಣರಾಗಿದ್ದರು.

ಪ್ರವಾದಿ ಮಹಮ್ಮದ್ ಜನ್ಮದಿನ ಕಾರ್ಯಕ್ರಮದಲ್ಲೇ ಆತ್ಮಹತ್ಯಾ ಬಾಂಬ್ ಸ್ಫೋಟ, 50ಕ್ಕೂ ಹೆಚ್ಚು ಸಾವು ಪ್ರವಾದಿ ಮಹಮ್ಮದ್ ಜನ್ಮದಿನ ಕಾರ್ಯಕ್ರಮದಲ್ಲೇ ಆತ್ಮಹತ್ಯಾ ಬಾಂಬ್ ಸ್ಫೋಟ, 50ಕ್ಕೂ ಹೆಚ್ಚು ಸಾವು

ದೆಹಲಿ ನಗರದಾದ್ಯಂತ ಇಬ್ಬರು ಶಂಕಿತರ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಾಕಲಾಗಿದ್ದು, ಇವರಿಬ್ಬರು ಕಂಡುಬಂದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.

High alert in Delhi, cops look for 2 suspected Jaish e Mohammed terrorists

ಈಚೆಗೆ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜೈಷ್ ಇ ಮೊಹ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಸೋದರ ಸಂಬಂಧಿಯನ್ನು ಕೊಲ್ಲಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲು ಯೋಜನೆ ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

English summary
Two days after the Amritsar blast, the Delhi police on Tuesday sounded an alert and released pictures of two men, suspected to be Jaish-e-Mohammed terrorists who may seek to carry out an attack in the city. Police said that guest houses, hotels and paying guest accommodations where foreign students usually stay, are being scanned to trace the two.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X