ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಾದ್ಯಂತ ಭಯೋತ್ಪಾದಕ ದಾಳಿ ಸಂಭವ: ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 20: ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಮುಖ ಸಿಟಿಗಳ ಜನಜಂಗುಳಿ ಇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಪಾಕ್ ನೌಕಾಪಡೆ ಅಧಿಕಾರಿಗಳ ಮೇಲೆ ಉಗ್ರರ ದಾಳಿ: 2 ಸಾವುಪಾಕ್ ನೌಕಾಪಡೆ ಅಧಿಕಾರಿಗಳ ಮೇಲೆ ಉಗ್ರರ ದಾಳಿ: 2 ಸಾವು

ದೆಹಲಿ ಪೊಲೀಸರು ದೇಶದ ಎಲ್ಲಾ ಭದ್ರತಾ ದಳಗಳಿಗೂ ಸೂಚನೆ ನೀಡಿದ್ದು, ಬಸ್ ಸ್ಟೇಶನ್, ರೈಲ್ವೇ ಸ್ಟೇಶನ್, ಮೆಟ್ರೋ ಸ್ಟೇಶನ್, ಏರ್ ಪೋರ್ಟ್, ಸ್ಟೇಡಿಯಂ, ಮಾಲ್, ಪ್ರವಾಸೀ ತಾಣಗಳ ಮೇಲೆ ಕಣ್ಣಿಡುವಂತೆ ತಿಳಿಸಲಾಗಿದೆ.

High alert declared as IB warns of terror attacks in major cities of India

ಅಷ್ಟೇ ಅಲ್ಲದೆ, ಅಂತರರಾಜ್ಯ ಗಡಿಗಳಲ್ಲಿ ತೆರಳುವ ವಾಹನಗನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡುವಂತೆ ಆದೇಶಿಸಲಾಗಿದೆ.

ಭಯೋತ್ಪಾದಕರ ಗುರಿ ಕೇವಲ ದೆಹಲಿಯಷ್ಟೇ ಅಲ್ಲ, ಭಾರತದ ಇನ್ನುಳಿದ ಎಲ್ಲಾ ಪ್ರಮುಖ ನಗರಗಳ ಮೇಲೂ ಭಯೋತ್ಪಾದಕ ದಾಳಿ ನಡೆಯುವ ಸಂಭವವಿದೆ ಎಂಬ ಮಾಹಿತಿ ಲಂಬಿಸಿರುವ ಹಿನ್ನೆಲೆಯಲ್ಲಿ ಈ ಕಟ್ಟೆಚ್ಚರ ಘೋಷಿಸಲಾಗಿದೆ.

English summary
The Delhi police has issued an advisory to its counterparts across the country to step up security in the wake of an Intelligence Bureau warning on terror attacks. The IB warning states that terrorist groups could look to strike at crowded places. The intelligence is however not specific to any place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X