ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿತನ ಮೂಲಭೂತ ಹಕ್ಕು ಸುಪ್ರೀಂ ತೀರ್ಪು: ಟ್ವಿಟ್ಟಿಗರು ಏನಂತಾರೆ?

|
Google Oneindia Kannada News

ನವದೆಹಲಿ, ಆಗಸ್ಟ್ 24: ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ನ ಒಂಬತ್ತು ಸದಸ್ಯರ ಪೀಠ ಇಂದು(ಆಗಸ್ಟ್ 24) ನೀಡಿದ ಮಹತ್ವದ ತೀರ್ಪು ಆಧಾರ್ ಕಾರ್ಡ್ ನ ಭವಿಷ್ಯವನ್ನೇ ಅತಂತ್ರಗೊಳಿಸಿದೆ.

ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ನವೆಂಬರ್ 2012 ರಲ್ಲಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಣ್ಣಯ್ಯ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯ ಕುರಿತು ನಂತರ ಹಲವರು ಪ್ರಶ್ನೆ ಎತ್ತಿದ್ದರು.

'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು 'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು

ಬಯೋಮೆಟ್ರಿಕ್ ಮಾಹಿತಿಯನ್ನು ಯಾವ ಮುಂದುವರಿದ ರಾಷ್ಟ್ರಗಳೂ ಒತ್ತಾಯಪೂರ್ವಕವಾಗಿ ಸಂಗ್ರಹಿಸುವಂತಿಲ್ಲ. ಆದರೆ ಆಧಾರ್ ಗಾಗಿ ಪ್ರತಿ ವ್ಯಕ್ತಿಯೂ ತನ್ನ ಬೆರಳಚ್ಚು, ಕಣ್ಣಿನ ಪಾಪೆಯ ವಿವರ, ಜೊತೆಗೆ ವೈಯಕ್ತಿಕ ಮಾಹಿತಿ ನೀಡಬೇಕಾಗುತ್ತದೆ. ಇದು ಖಾಸಗಿತನದ ಹಕ್ಕನ್ನು ಕಸಿದಂತಾಗುತ್ತದೆ. ಖಾಸಗಿತನವೂ ಮೂಲಭೂತ ಹಕ್ಕೇ ಎಂಬುದಾದರೆ ಖಾಸಗಿತನದ ಹಕ್ಕನ್ನು ಕಸಿಯುವಂತಿಲ್ಲ.

ಹಾಗೊಮ್ಮೆ ಮೂಲಭೂತ ಹಕ್ಕನ್ನು ಕಸಿದರೆ, ಅಂಥ ಕಾನೂನನ್ನೇ ಸಾಂವಿಧಾನಿಕ ನ್ಯಾಯಾಲಯಗಳು ರದ್ದು ಮಾಡುವ ಅಧಿಕಾರ ಪಡೆದಿರುತ್ತವೆ. ಭಾರತೀಯ ಸಂವಿಧಾನದ 14 ರಿಂದ 32 ರವರೆಗಿನ ವಿಧಿಗಳು ಮೂಲಭೂತ ಹಕ್ಕುಗಳ ಬಗ್ಗೆ ಹೇಳುತ್ತವೆ.

ಇನ್ನೊಂದು ಸ್ವಾತಂತ್ರ್ಯ ದಿನ

ಸುಪ್ರೀಂಕೋರ್ಟ್ ತೀರ್ಪಿನ ನಂತರ ಮತ್ತೊಂದು ಸ್ವಾತಂತ್ರ್ಯ ದಿನವನ್ನು ಆಚರಿಸಿದಂತೆನ್ನಿಸುತ್ತಿದೆ. ನಾವೆಲ್ಲ ಭಾರತದ ಪ್ರಜೆಗಳು, ಗುಲಾಮರಲ್ಲ ಎಂಬುದು ದೃಢವಾಗಿದೆ ಎಂದು ಜೇಮ್ಸ್ ವಿಲ್ಸನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತೀರ್ಪಿನ ಶ್ರೇಯಸ್ಸು ಎಲ್ಲರಿಗೂ ಸಲ್ಲಲಿ

ನಮ್ಮ ಖಾಸಗಿತನದ ಹಕ್ಕನ್ನು ಸಮರ್ಥಿಸುವುದಕ್ಕಾಗಿ ಶ್ರಮಿಸಿದ ಎಲ್ಲರೂ ಈ ತೀರ್ಪಿನ ಶ್ರೇಯಸ್ಸಿಗೆ ಅರ್ಹರು ಎಂದು ಎಸ್ ಐ ಹಬೀಬ್ ಟ್ವೀಟ್ ಮಾಡಿದ್ದಾರೆ.

ಸುಪ್ರೀ ಕೋರ್ಟ್ ನಮ್ಮ ಕೊನೆಯ ಭರವಸೆ

ಈ ತೀರ್ಪು ಕೇಂದ್ರ ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ. ಭಾರತೀಯರಿಗೆ ಸದಾ ಕೊನೆಯ ಭರವಸೆಯಾಗಿ, ಆಸರೆಯಾಗಿ ಇರುವುದು ನ್ಯಾಯಾಂಗ ಮಾತ್ರ ಎಂದು ಪ್ರತೀಕ್ ಕೆ.ಶರ್ಮಾ ಟ್ವೀಟ್ ಮಾಡಿದ್ದಾರೆ.

ಈ ದಿನಕ್ಕಾಗಿಯೇ ಕಾಯುತ್ತಿದ್ದೆ!

ಸೂಪರ್ ! ನಾನು ಈ ದಿನಕ್ಕಾಗಿಯೇ ಕಾಯುತ್ತಿದ್ದೆ ಎಂದು ಯು.ಬಿ. ಪವನಜ ಟ್ವೀಟ್ ಮಾಡಿದ್ದಾರೆ.

ರಾಘವ ಚಢಾ

ನಮ್ಮ ಖಾಸಗಿತನದ ಹಕ್ಕನ್ನು ಕಸಿಯುತ್ತಿದ್ದ ಮತ್ತು ನಮ್ಮ ವಾರ್ಡ್ ರೋಬ್, ಬೆಡ್ ರೂಮ್, ಕಿಚನ್, ಫೊನ್ ಮೇಲೆಲ್ಲ ದಾಳಿ ಮಾಡುತ್ತಿದ್ದವರಿಗೆ ಸುಪ್ರೀಂ ನ ಈ ತೀರ್ಪು ತೀವ್ರ ಹಿನ್ನಡೆ ಎಂದು ರಾಘವ ಚಾಢಾ ಅವರು ಟ್ವೀಟ್ ಮಾಡಿದ್ದಾರೆ.

English summary
Most of the Indian citizens welcomed Supreme court of India's historical verdict, in which it quoted right to privacy is a fundamental right. Here are some twitter statements on right to privacy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X