ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ವಿನಾಯಿತಿ: ದೆಹಲಿಯಲ್ಲಿ ಭಾರೀ ವಾಹನ ದಟ್ಟಣೆ

|
Google Oneindia Kannada News

ನವದೆಹಲಿ, ಮೇ 19: ಸತತ 60 ದಿನಗಳ ಲಾಕ್‌ಡೌನ್ ತೆರವಾದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲಾಕ್‌ಡೌನ್ ನಲ್ಲಿ ಭಾರೀ ವಿನಾಯಿತಿ ಘೋಷಣೆ ಮಾಡಿದ್ದಾರೆ.

Recommended Video

ಲಟಿಕೆ ತೆಗೆಯೋದರಿಂದ ಏನೆಲ್ಲಾ ತೊಂದರೆಗಳು ಕಾಣಿಸಿಕೊಳ್ಳುತ್ತವೆ | Oneindia Kannada

ಇದರಿಂದ ಜನ ಮಂಗಳವಾರ ತಮ್ಮ ಕಾರ್ಯಸ್ಥಳಗಳಿಗೆ ತೆರಳುವಾಗ ದೆಹಲಿಯ ಐಟಿಓ ಮತ್ತು ಯಮುನಾ ಸೇತುವೆ ಬಳಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿ ಗಮನ ಸೆಳೆಯಿತು. ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಂತಿದ್ದವು.

ಡಿಕೆ ಶಿವಕುಮಾರ್‌ ಒಳಗೊಳಗೆ ಕುದಿಯುವಂತೆ ಮಾಡಿತಾ ಬಿಜೆಪಿ ಸರ್ಕಾರ?ಡಿಕೆ ಶಿವಕುಮಾರ್‌ ಒಳಗೊಳಗೆ ಕುದಿಯುವಂತೆ ಮಾಡಿತಾ ಬಿಜೆಪಿ ಸರ್ಕಾರ?

ಲಾಕ್‌ಡೌನ್‌ನ ನಾಲ್ಕನೇ ಹಂತದಲ್ಲಿ ಜನರು ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಕೆಲಸದ ಸ್ಥಳಗಳಿಗೆ ಹೋಗಲು ಪ್ರಾರಂಭಿಸುತ್ತಿದ್ದಂತೆ ಹಲವಾರು ಕಾರುಗಳು, ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ಕೆಲವು ಬಸ್‌ಗಳು ಸೇತುವೆ ಬಳಿ ಬಂದಾಗ ಭಾರೀ ದಟ್ಟಣೆ ಕಂಡು ಬಂದಿತ್ತು.

Heavy Traffic Congestion Seen At ITO And Yamuna Bridge

ಆಟೋರಿಕ್ಷಾ, ಇ-ರಿಕ್ಷಾ ಮತ್ತು ಸೈಕಲ್-ರಿಕ್ಷಾಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಅನುಮತಿಸಲಾಗುವುದಿಲ್ಲ ಎಂಬ ನಿಯಮ ಇಲ್ಲಿಗೆ ಗಾಳಿಗೆ ತೂರಲಾಗಿತ್ತು. ಹೀಗಾಗಿ ಸಂಚಾರ ಪೊಲೀಸರು ವಾಹನ ದಟ್ಟಣೆ ಜೊತೆ ಜನ ದಟ್ಟಣೆಯನ್ನು ತಡೆಯಲು ಆಗಿರಲಿಲ್ಲ.

ದೆಹಲಿ ಸಾರಿಗೆ ನಿಗಮ (ಡಿಟಿಸಿ) ತನ್ನ ನಗರ ಬಸ್ ಸೇವೆಗಳನ್ನು ಮಂಗಳವಾರ ಪುನರಾರಂಭಿಸಿದೆ. ದೆಹಲಿ ಸರ್ಕಾರ ಸೋಮವಾರ ಖಾಸಗಿ ಕಚೇರಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದರಿಂದ ದೆಹಲಿ ಪ್ರಮುಖ ಸ್ಥಳಗಳಿಗೆ ಸಂಪರ್ಕಿಸುವ ಐಟಿಓ ಮತ್ತು ಯಮುನಾ ಸೇತುವೆ ಬಳಿ ಭಾರೀ ದಟ್ಟಣೆಗೆ ಕಾರಣವಾಗಿತ್ತು.

ಇನ್ನೊಂದು ವಿಶೇಷವೆಂದರೆ ದೆಹಲಿಯಲ್ಲಿ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಆದರೆ, ದೆಹಲಿಯಲ್ಲಿರುವ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು, ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಹಾಗಿಲ್ಲ ಎಂದು ದೆಹಲಿ ಸರ್ಕಾರ ನಿರ್ಬಂಧ ವಿಧಿಸಿದೆ. (ANI).

English summary
Heavy Traffic Congestion Seen At ITO And Yamuna Bridge ahead of corona lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X