ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಗ್ನೇಶ್ ಜಾಥಾ: ರಾಜಧಾನಿ ದೆಹಲಿಯಲ್ಲಿ ಬಿಗಿಭದ್ರತೆ

|
Google Oneindia Kannada News

ನವದೆಹಲಿ, ಜನವರಿ 09: ನವದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ದಲಿತ ನಾಯಕ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ 'ಯುವ ಹೂಂಕಾರ್ ಯಾತ್ರೆ' ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಮತ್ತು ಬಲಪಂಥೀಯ ಹಿಂಸಾಚಾರಗಳು ಹೆಚ್ಚುತ್ತಿವೆ ಎಂದು ದೂರಿ ಜಿಗ್ನೇಶ್ 'ಸಾಮಾಜಿಕ ನ್ಯಾಯ' ಅಥವಾ 'ಯುವ ಹೂಂಕಾರ್ rally'
ಹೆಸರಿನಲ್ಲಿ ಸರ್ಕಾರದ ವಿರುದ್ಧ ಜಾಥಾ ನಡೆಸಲು ಸಜ್ಜಾಗಿದ್ದಾರೆ.

ದೆಹಲಿಯಲ್ಲಿ ಜಿಗ್ನೇಶ್ ಯಾತ್ರೆಗೆ ಅನುಮತಿ ನಿರಾಕರಣೆದೆಹಲಿಯಲ್ಲಿ ಜಿಗ್ನೇಶ್ ಯಾತ್ರೆಗೆ ಅನುಮತಿ ನಿರಾಕರಣೆ

ಗುಜರಾತಿನ ವಡ್ಗಾಂ ಶಾಸಕ ಜಿಗ್ನೇಶ್ ಮೆವಾನಿ ಅವರು ಇತ್ತೀಚೆಗೆ ಪುಣೆಯಲ್ಲಿ ನೀಡಿದ್ದ ಭಾಷಣವನ್ನು ಹಲವು ಹಿಂದುಪರ ಸಂಘಟನೆಗಳು 'ಪ್ರಚೋದನಾಕಾರಿ ಭಾಷಣ' ಎಂದು ದೂರಿದ್ದವು. ಈ ಘಟನೆಯ ನಂತರ ಮಹಾರಾಷ್ಟ್ರದಲ್ಲಿ ಗಲಭೆ ಎದ್ದಿತ್ತು.

Heavy security deployed ahead of Mevani's 'Yuva Hunkar Rally'

ಇದೀಗ ದೆಹಲಿಯಲ್ಲೂ ಇಂಥದೇ ಘಟನೆ ನಡೆಯಬಾರದೆಂಬ ಕಾರಣಕ್ಕೆ, ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಜಿಗ್ನೇಶ್ ಜಾಥಾಕ್ಕೆ ಅನುಮತಿ ನಿರಾಕರಿಸಿದ್ದಾರೆ. ಆದರೆ ಪೊಲೀಸರ ನಿರಾಕರಣೆಯನ್ನೂ ಲೆಕ್ಕಿಸದೆ ಜಿಗ್ನೇಶ್ ಮತ್ತವರ ಬೆಂಬಲಿಗರು ಯಾತ್ರೆ ಕೈಗೊಳ್ಳುವುದಾಗ ಹೇಳಿದ್ದಾರೆ.

2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?2018ರ ಚುನಾವಣೆ : ಜಿಗ್ನೇಶ್ ಮೇವಾನಿ ಹೇಳಿದ್ದೇನು?

ಈ ಹಿನ್ನೆಲೆಯಲ್ಲಿ ಪಾರ್ಲಿಮೆಂಟ್ ರಸ್ತೆಯಾದ್ಯಂತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

English summary
Heavy security has been deployed ahead of Dalit leader and Gujarat MLA Jignesh Mevani's 'Yuva Hunkar Rally', to be held here at Parliament Street on Jan 9th. Mevani and his supporters were reported to be going ahead with the rally despite Delhi police denying permission for the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X