ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ತೀವ್ರ ಮಳೆ: ಹಲವು ಪ್ರದೇಶಗಳು ಜಲಾವೃತ

|
Google Oneindia Kannada News

ಹೊಸದಿಲ್ಲಿ ಜುಲೈ 16: ಶನಿವಾರ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಧಿಕ ಮಳೆಯಾಗಿದ್ದು, ಹಲವಾರು ಸ್ಥಳಗಳು ಜಲಾವೃತಗೊಂಡಿದೆ. ಜೊತೆಗೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಜೊತೆಗೆ ಲಘು ಮಳೆಯಾಗುವ ಮುನ್ಸೂಚನೆ ನೀಡಿದೆ. ಇದರಿಂದ ದೆಹಲಿ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.

ಜೊತೆಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೃಪ್ತಿದಾಯಕ (85) ವಿಭಾಗದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ. ಸೊನ್ನೆ ಮತ್ತು 50 ರ ನಡುವಿನ AQI ಉತ್ತಮ ವಾಯು ಗುಣಮಟ್ಟ ಸೂಚ್ಯಂಕವಾಗಿದೆ. 51 ಮತ್ತು 100 ತೃಪ್ತಿದಾಯಕ, 101 ಮತ್ತು 200 ಮಧ್ಯಮ, 201 ಮತ್ತು 300 ಕಳಪೆ, 301 ಮತ್ತು 400 ಅತ್ಯಂತ ಕಳಪೆ, ಮತ್ತು 401 ಮತ್ತು 500 ತೀವ್ರ ಎಂದು ಪರಿಗಣಿಸಲಾಗಿದೆ.

Breaking; ಪಾಟ್ನಾದಿಂದ ಲಾಲೂ ಏರ್‌ಲಿಫ್ಟ್‌, ದೆಹಲಿ ಏಮ್ಸ್‌ಗೆ ದಾಖಲು Breaking; ಪಾಟ್ನಾದಿಂದ ಲಾಲೂ ಏರ್‌ಲಿಫ್ಟ್‌, ದೆಹಲಿ ಏಮ್ಸ್‌ಗೆ ದಾಖಲು

ಕಳೆದ ತಿಂಗಳು ಮಳೆಗೆ ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಋತುವಿನ ಸರಾಸರಿಗಿಂತ ಒಂಬತ್ತು ಹಂತಗಳು ಕಡಿಮೆಯಾಗಿದೆ. ಮೇ 1, 2004 ರಿಂದ 16.7 ಡಿಗ್ರಿ ಸೆಲ್ಸಿಯಸ್ ತಾಪಮಾನವು ಇದ್ದ ನಂತರ ರಾಜಧಾನಿಯು ಮೇ ತಿಂಗಳ ಕನಿಷ್ಠ ತಾಪಮಾನವನ್ನು ದಾಖಲಿಸಿದೆ. ತಿಂಗಳಿನಲ್ಲಿ ಇದುವರೆಗಿನ ಕನಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ಆಗಿದೆ ಮತ್ತು ಇದು ಮೇ 2, 1982 ರಂದು ದಾಖಲಾಗಿದೆ.

Heavy rain in Delhi: Several Areas Waterlogged

ಜೊತೆಗೆ ಕಳೆದ ಬಾರಿ ಸುರಿದ ಮಳೆಗೆ ಗುಡುಗು ಸಹಿತ ಮಳೆಗೆ ರಸ್ತೆ ಮತ್ತು ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿತ್ತು. ಕೆಲವು ಸ್ಥಳಗಳಲ್ಲಿ ಮನೆಗಳು ಜಲಾವೃತಗೊಂಡು ಮತ್ತು ಮರಗಳು ಉರುಳಿದವು, ಕನಿಷ್ಠ ಎಂಟು ಜನರು ಗಾಯಗೊಂಡಿದ್ದರು. ಜೊತೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಬಲವಾದ ಗಾಳಿಯಿಂದಾಗಿ ಸುಮಾರು 44 ಸ್ಥಳಗಳಲ್ಲಿ ಮರಗಳು ಧರೆಗುರುಳಿದ್ದವು. ಈ ವೇಳೆ ತಾಪಮಾನವು 29 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್‌ಗೆ 11 ಡಿಗ್ರಿಗಳಷ್ಟು ಕುಸಿದಿತ್ತು.

English summary
Heavy rain lashed Delhi and its surrounding areas on Saturday, inundating several places. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X