ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣನ ಆರ್ಭಟ; ಉತ್ತರ ಪ್ರದೇಶದಲ್ಲಿ 13 ಸಾವು, ಹಲವೆಡೆ ಶಾಲೆಗಳು ಬಂದ್

|
Google Oneindia Kannada News

ನವದೆಹಲಿ, ಸೆ. 23: ಗುರುವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಪ್ರದಶದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಗುರ್‌ಗಾಂವ್‌ನಲ್ಲಿ ಖಾಸಗಿ ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಲಾಗಿದೆ. ಹಲವೆಡೆ ಶಾಲೆಗಳನ್ನು ಮುಚ್ಚಲಾಗಿದ್ದು, ದೆಹಲಿಯ ಕೆಲವು ಭಾಗಗಳು ಜಲಾವೃತವಾಗಿವೆ.

ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಫಿರೋಜಾಬಾದ್‌ನಲ್ಲಿ ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಗುಡುಗು, ಸಿಡಿಲು ಮತ್ತು ಮನೆ ಕುಸಿದ ಘಟನೆಗಳಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಈ ದುರಂತಗಳಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಅಲಿಘರ್‌ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಗುರ್ಗಾಂವ್ ಮಳೆ ಅಟ್ಟಹಾಸ: Work From Home ಮಾಡಲು ಹೊರಬಿದ್ದ ಸಂದೇಶ!ಗುರ್ಗಾಂವ್ ಮಳೆ ಅಟ್ಟಹಾಸ: Work From Home ಮಾಡಲು ಹೊರಬಿದ್ದ ಸಂದೇಶ!

ಮಳೆಯಿಂದಾಗಿ ಶುಕ್ರವಾರ ಗೌತಮ್ ಬುದ್ಧ ನಗರ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಾದ್ಯಂತ 8 ನೇ ತರಗತಿಯವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ಅಧಿಕೃತ ಆದೇಶ ಪ್ರಕಟಿಸಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ದೆಹಲಿಯಲ್ಲಿ ಹಲವು ರಸ್ತೆಗಳು, ಪ್ರದೇಶಗಳು ಜಲಾವೃತ

ದೆಹಲಿಯಲ್ಲಿ ಹಲವು ರಸ್ತೆಗಳು, ಪ್ರದೇಶಗಳು ಜಲಾವೃತ

ಲಘು ಮತ್ತು ಸಾಧಾರಣ ಮಳೆಯಿಂದಾಗಿ ದೆಹಲಿಯಲ್ಲಿ ಗುರುವಾರ ಬೆಳಗ್ಗೆ 8:30 ರಿಂದ ಸಂಜೆ 5:30 ರ ನಡುವೆ 31.2 ಮಿಮೀ ಮಳೆಯಾಗಿದೆ. ಇದರಿಂದಾಗಿ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡವು ಮತ್ತು ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯ ಮೇಲೆ ಭಾರೀ ಪರಿಣಾಮ ಬೀರಿತು. ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

"ದಕ್ಷಿಣ-ದೆಹಲಿ, ಆಗ್ನೇಯ ದೆಹಲಿ, NCR (ಹಿಂಡನ್ ಎಎಫ್ ಸ್ಟೇಷನ್, ಗಾಜಿಯಾಬಾದ್, ಇಂದಿರಾಪುರಂ, ಛಾಪ್ರೌಲಾ, ನೋಯ್ಡಾ, ದಾದ್ರಿ, ಗ್ರೇಟರ್ ನೋಯ್ಡಾ, ಗುರ್‌ಗಾಂಮ್, ಫರಿದಾಬಾದ್, ಮನೇಸರ್, ಬಲ್ಲಭಗಢ್) ಅನೇಕ ಸ್ಥಳಗಳ ಮೇಲೆ ತೀವ್ರತೆಯ ಮಳೆ ಅಥವಾ ತುಂತುರು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಕ್ಕದ ಪ್ರದೇಶಗಳಾದ ಯಮುನಾನಗರ, ಕುರುಕ್ಷೇತ್ರ... ಕೊಟ್‌ಪುಟ್ಲಿ, ಅಲ್ವಾರ್ (ರಾಜಸ್ಥಾನ) ಮುಂದಿನ 2 ಗಂಟೆಗಳಲ್ಲಿ ತೀವ್ರ ಮಳೆ ಅಥವಾ ತುಂತುರು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಬೆಳಗ್ಗೆ ಟ್ವೀಟ್ ಮಾಡಿದೆ.

ಗುರ್‌ಗಾಂವ್‌ನಲ್ಲಿ ಟ್ರಾಫಿಕ್ ನಿಭಾಯಿಸಲು ಪೊಲೀಸರ ಪರದಾಟ

ಗುರ್‌ಗಾಂವ್‌ನಲ್ಲಿ ಟ್ರಾಫಿಕ್ ನಿಭಾಯಿಸಲು ಪೊಲೀಸರ ಪರದಾಟ

ದೆಹಲಿ ಭಾಗದಲ್ಲಿ ಭಾರತೀಯ ಹವಾಮಾನ ಇಲಾಖೆ (IMD) 'ಹಳದಿ ಅಲರ್ಟ್' ಘೋಷಿಸಿದ್ದು, ನಗರದ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.

ಭಾರೀ ಮಳೆಯಿಂದಾಗಿ ಗುರ್‌ಗಾಂವ್‌ನ ಕೆಲವು ಭಾಗಗಳು ಜಲಾವೃತವಾದವು. ರಸ್ತೆಗಳಲ್ಲಿ ಉಂಟಾದ ದಟ್ಟಣೆಯನ್ನು ನಿವಾರಿಸಲು ಪೊಲೀಸರು ಹೆಣಗಾಡಿದ್ದರಿಂದ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಹೀಗಾಗಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.

ಅಗತ್ಯವಿದ್ದರೇ ಮಾತ್ರ ಮನೆಯಿಂದ ಹೊರಬನ್ನಿ ಎಂದ ಪೊಲೀಸರು

ಅಗತ್ಯವಿದ್ದರೇ ಮಾತ್ರ ಮನೆಯಿಂದ ಹೊರಬನ್ನಿ ಎಂದ ಪೊಲೀಸರು

"ಗುರ್‌ಗಾಂವ್‌ನಲ್ಲಿ ನಿರಂತರ ಮಳೆಯಿಂದಾಗಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಅಗತ್ಯ ಬಿದ್ದಾಗ ಮಾತ್ರ ಮನೆಯಿಂದ ಹೊರಗೆ ಬರುವಂತೆ ನಿಮ್ಮೆಲ್ಲರಲ್ಲಿ ವಿನಂತಿಸುತ್ತೇವೆ,'' ಎಂದು ಸಂಚಾರ ಪೊಲೀಸರು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತದ ಪ್ರಕಾರ ಗುರುವಾರ ಗುರ್‌ಗಾಂವ್‌ನಲ್ಲಿ 54 ಮಿಮೀ ಮಳೆಯಾಗಿದ್ದು, ವಜೀರಾಬಾದ್‌ನಲ್ಲಿ ಗರಿಷ್ಠ 60 ಮಿಮೀ ಮಳೆಯಾಗಿದೆ. ಸಂಜೆ 5 ಗಂಟೆಯವರೆಗೆ ಮಾನೇಸರ್‌ನಲ್ಲಿ 50 ಮಿಮೀ, ಸೋಹ್ನಾ 43 ಮಿಮೀ, ಹರ್ಸರ್ 54 ಮಿಮೀ, ಬಾದ್‌ಶಾಹ್‌ಪುರ 30 ಮಿಮೀ, ಪಟೌಡಿ 20 ಮಿಮೀ ಮತ್ತು ಫರುಖ್‌ನಗರದಲ್ಲಿ 29 ಮಿಮೀ ಮಳೆ ದಾಖಲಾಗಿದೆ.

ಸಂಚಾರ ದಟ್ಟಣೆ ತಪ್ಪಿಸಲು ವರ್ಕ್ ಫ್ರಂ ಹೋಂ ಮಾಡಿ!

ಗುರ್‌ಗಾಂವ್‌ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಖಾಸಗಿ ಕಂಪನಿ ಉದ್ಯೋಗಿಗಳು ಸಾಧ್ಯವಾದಷ್ಟು ಮನೆಗೆಳಿಂದ ಕೆಲಸ ಮಾಡುವಂತೆ (ವರ್ಕ್ ಫ್ರಂ ಹೋಮ್) ಆಡಳಿತಾಧಿಕಾರಿಗಳು ಸಲಹೆ ನೀಡಿದ್ದಾರೆ.


ನಗರದಲ್ಲಿ ಈಗಾಗಲೇ ಸಂಚಾರ ದಟ್ಟಣೆ ಸೃಷ್ಟಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಶುಕ್ರವಾರ ಮತ್ತೆ ಉದ್ಯೋಗಿಗಳು ರಸ್ತೆಗೆ ಇಳಿಯುವುದರಿಂದ ಮತ್ತಷ್ಟು ಸಮಸ್ಯೆ ಹಾಗೂ ಸಂಚಾರ ದಟ್ಟಣೆ ಸೃಷ್ಟಿ ಆಗುವ ಮುನ್ಸೂಚನೆ ಇದೆ.

English summary
Heavy Rain; Schools are shut in parts of Uttar Pradesh and Gurgaon, 13 Killed in Uttar Pradesh, some parts of Delhi are flooded. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X