ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲಿನ ಝಳ: 15 ದಿನಗಳಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ

|
Google Oneindia Kannada News

ನವದೆಹಲಿ ಮೇ 17: ಮೇ ತಿಂಗಳ ಮೊದಲ 15 ದಿನಗಳಲ್ಲಿ ಪೆಟ್ರೋಲ್ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಡೀಸೆಲ್ ಬಳಕೆಯೂ ಗಣನೀಯವಾಗಿ ಏರಿಕೆಯಾಗಿದ್ದರೂ, ಪೆಟ್ರೋಲ್ ಬೇಡಿಕೆ ಅನಿರೀಕ್ಷಿತವಾಗಿ ಹೆಚ್ಚಿದೆ. ದೇಶದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಬೇಗೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪೆಟ್ರೋಲ್‌ ಬೇಡಿಕೆ ಹೆಚ್ಚಳಕ್ಕೆ ಕಾರಣವೇನು? ಡೀಸೆಲ್ ಮಾರಾಟ ಹೆಚ್ಚಳದ ಹಿಂದೆ ಬೇಸಿಗೆಯ ಪಾತ್ರವೇನು? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಮೇ ತಿಂಗಳ ಆರಂಭದಿಂದಲೂ ಹೀಟ್‌ವೇವ್ ಅಥವಾ ಬೇಸಿಗೆಯ ಅಧಿಕ ಶಾಖಕ್ಕೆ ಜನ ಹೈರಾಣಾಗಿದ್ದಾರೆ. ಹೀಗಾಗಿ ಸ್ಕಾರ್ಫ್, ಛತ್ರಿ, ಹಾಗೂ ಕ್ಯಾಪ್‌ಗಳನ್ನು ಹಾಕಿಕೊಳ್ಳುವುದು ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಅಧಿಕ ಬಿಸಿಲಿನಿಂದಾಗಿ ಪೆಟ್ರೋಲ್ ಡಿಸೇಲ್ ಬೆಲೆ ಕೂಡ ಅಧಿಕವಾಗಿದೆ. ಕೇವಲ ಪೆಟ್ರೋಲ್ ಮಾರಾಟದ ಹೆಚ್ಚಳವನ್ನು ಗಮನಿಸಿದರೆ ಶಾಖದ ಅಲೆಯು ಹೇಗೆ ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ ಎಂದು ಅಂದಾಜಿಸಬಹುದು.

ಕೇರಳದಲ್ಲಿ ಭಾರೀ ಮಳೆ: 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ಕೇರಳದಲ್ಲಿ ಭಾರೀ ಮಳೆ: 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಜೊತೆಗೆ ಡೀಸೆಲ್ ಮಾರಾಟ ಹೆಚ್ಚಳದ ಹಿಂದೆ ಬೇಸಿಗೆ ಪಾತ್ರ ದೊಡ್ಡದಾಗಿದೆ. ಬೇಸಿಗೆ ಬಿಸಿಯನ್ನು ತಪ್ಪಿಸಲು ಅಧಿಕ ಜನರು ತಮ್ಮ ಕಾರುಗಳಲ್ಲಿ ಪ್ರಯಾಣಿಸಲು ಬಯಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಶಾಖವನ್ನು ಎದುರಿಸಬಹುದು ಎನ್ನುವುದು ಲೆಕ್ಕಾಚಾರವಾಗಿದೆ.

ಬೇಸಿಗೆ ಬಿಸಿ ತಪ್ಪಿಸಲು ಕಾರು ಬಳಕೆ

ಬೇಸಿಗೆ ಬಿಸಿ ತಪ್ಪಿಸಲು ಕಾರು ಬಳಕೆ

ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮಾರಾಟದಲ್ಲಿ ಅಭೂತಪೂರ್ವ ಏರಿಕೆಯಾಗಿದೆ. ವಿಷಯ ಆಶ್ಚರ್ಯಕರವಾಗಿದೆ. ಆದರೆ ಇದರ ಹಿಂದೆ ರಾಜಧಾನಿ ದೆಹಲಿ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಹೀಟ್ ವೇವ್ ಇದೆ. ಜನರು ಶಾಖವನ್ನು ತಪ್ಪಿಸಲು ತಮ್ಮ ವೈಯಕ್ತಿಕ ವಾಹನಗಳನ್ನು ಹೆಚ್ಚು ಬಳಸಲಾರಂಭಿಸಿದ್ದಾರೆ ಮತ್ತು ಎಸಿ ಚಾಲನೆಯಲ್ಲಿರುವ ಕಾರಣ ಪೆಟ್ರೋಲ್ ಡಿಸೇಲ್ ಅಧಿಕವಾಗಿ ಬಳಕೆ ಮಾಡುತ್ತಿದ್ದಾರೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೇ 1 ಮತ್ತು ಮೇ 15 ರ ನಡುವೆ ಪೆಟ್ರೋಲ್ ಬಳಕೆ ಶೇಕಡಾ 14 ರಷ್ಟು ಹೆಚ್ಚಾಗಿದೆ. ಮೇ ತಿಂಗಳ ಮೊದಲಾರ್ಧದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಹೆಚ್ಚಾಗಿದೆ.

ದೇಶದ ಮೂರು ಅತಿದೊಡ್ಡ ತೈಲ ಕಂಪನಿಗಳ ಅಂಕಿಅಂಶ

ದೇಶದ ಮೂರು ಅತಿದೊಡ್ಡ ತೈಲ ಕಂಪನಿಗಳ ಅಂಕಿಅಂಶ

ನಾವು ದೇಶದ ಮೂರು ಅತಿದೊಡ್ಡ ತೈಲ ಕಂಪನಿಗಳ ಅಂಕಿಅಂಶಗಳನ್ನು ನೋಡಿದರೆ, 2020 ಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಪೆಟ್ರೋಲ್ ಬಳಕೆ 122% ರಷ್ಟು ಮತ್ತು 2021 ಕ್ಕೆ ಹೋಲಿಸಿದರೆ 59.7% ರಷ್ಟು ಹೆಚ್ಚಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗದ ಮೊದಲು ಮೇ 2019 ರ ಅಂಕಿಅಂಶಗಳನ್ನು ತೆಗೆದುಕೊಂಡರೂ ಈ ಹೆಚ್ಚಳವು 16.3% ರಷ್ಟು ಹೆಚ್ಚಾಗಿದೆ. ಭಾರತದ ಮೂರು ದೊಡ್ಡ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ದೇಶೀಯ ತೈಲ ಮಾರುಕಟ್ಟೆಯಲ್ಲಿ 90% ಪಾಲನ್ನು ಹೊಂದಿವೆ.

ಲಾಕ್‌ಡೌನ್ ಸಮಯದಲ್ಲಿ ಡೀಸೆಲ್ ಬಳಕೆ

ಲಾಕ್‌ಡೌನ್ ಸಮಯದಲ್ಲಿ ಡೀಸೆಲ್ ಬಳಕೆ

ಡೀಸೆಲ್ ಮಾರಾಟ 2020ರ ಮೇ ಮೊದಲ ಹದಿನೈದು ದಿನಗಳಿಗೆ ಹೋಲಿಸಿದರೆ 57.6% ರಷ್ಟು ಮತ್ತು ಹಿಂದಿನ ವರ್ಷದ ಮೇ 15 ರವರೆಗೆ 37.8% ರಷ್ಟು ಹೆಚ್ಚಾಗಿದೆ. ಜೊತೆಗೆ ಮೇ 2019 ಕ್ಕಿಂತ 1.5%ರಷ್ಟು ಹೆಚ್ಚಾಗಿದೆ. ಆದರೆ, ಜೆಟ್ ಇಂಧನದ ವಿಷಯದಲ್ಲಿ, ಚಿತ್ರವು ವಿಭಿನ್ನವಾಗಿದೆ. ಮೇ 2020 ರ ಈ ಅವಧಿಯ ಪ್ರಕಾರ, ಅದರ ಮಾರಾಟ 492.4% ರಷ್ಟು ಹೆಚ್ಚಾಗಿದೆ, ಏಕೆಂದರೆ ಆಗ ಸಂಪೂರ್ಣ ಲಾಕ್‌ಡೌನ್ ಇತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ 83.7% ರಷ್ಟು ಹೆಚ್ಚಾಗಿದೆ.

ಕಾರುಗಳ ಬಳಕೆ

ಕಾರುಗಳ ಬಳಕೆ

ತೈಲ ಮಾರಾಟದ ಬಗ್ಗೆ ತಿಳಿದಿರುವ ರಿಫೈನರಿ ಅಧಿಕಾರಿಗಳ ಪ್ರಕಾರ, ಈ ವರ್ಷ ಮೇ 1 ರಿಂದ ಮೇ 15 ರ ನಡುವೆ, ಮೂರು ತೈಲ ಕಂಪನಿಗಳು ಸುಮಾರು 1.3 ಮಿಲಿಯನ್ ಟನ್ ಪೆಟ್ರೋಲ್ ಅನ್ನು ಮಾರಾಟ ಮಾಡಿವೆ ಮತ್ತು ಇದು ಈ ವರ್ಷದ ಏಪ್ರಿಲ್‌ ಅವಧಿಗಿಂತ 14% ಹೆಚ್ಚಾಗಿದೆ. ಬಿಸಿಲಿನ ಶಾಖವನ್ನು ತಪ್ಪಿಸಲು ಖಾಸಗಿ ಕಾರುಗಳ ಬಳಕೆ ಮತ್ತು ಕಾರು ಎಸಿಗಳ ಬಳಕೆ ಇದಕ್ಕೆ ಮೂಲ ಕಾರಣ. ದೇಶದಲ್ಲಿ ಬಿಸಿಲಿನ ತಾಪದಿಂದಾಗಿ ವಿದ್ಯುತ್ ಸಮಸ್ಯೆಯೂ ತಲೆದೋರಿದ್ದು, ಹಲವೆಡೆ 49 ಡಿಗ್ರಿ ತಲುಪಿರುವ ತಾಪಮಾನದಿಂದಾಗಿ ಬೆಳೆಗಳು ಕೂಡ ಹಾಳಾಗುತ್ತಿದ್ದು, ಲಕ್ಷಾಂತರ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದ ದೊಡ್ಡ ನಗರಗಳಲ್ಲಿಯೂ ಸಹ ಎಸಿ ಸೌಲಭ್ಯದೊಂದಿಗೆ ಸಾರ್ವಜನಿಕ ಸಾರಿಗೆಯ ಸಮರ್ಪಕ ವ್ಯವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ಜನರು ಖಾಸಗಿ ವಾಹನಗಳನ್ನು ಹೆಚ್ಚು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

English summary
Petrol-diesel sales increased in the first 15 days of May due to summer heatwave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X