ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಶಾಂತಿ ಮಂತ್ರಕ್ಕೆ ಬೆಂಬಲದ ಭರವಸೆ ನೀಡಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಅಫ್ಘಾನಿಸ್ತಾನದಲ್ಲಿ ಶಾಂತಿ ಸೂತ್ರಕ್ಕೆ ಭಾರತದ ನಿರಂತರ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಫ್ಘಾನಿಸ್ತಾನ ಶಾಂತಿ ಸಮಾಲೋಚನಾ ಸಭೆಯಲ್ಲಿ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಭರವಸೆ ನೀಡಿದರು.

ಅಫ್ಘಾನಿಸ್ತಾನದ ರಾಷ್ಟ್ರೀಯ ಸಾಮರಸ್ಯದ ಉನ್ನತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ಲಾ ಅವರು ಮೋದಿಯನ್ನು ಭೇಟಿಯಾಗಿ, ಶಾಂತಿ ಪ್ರಕ್ರಿಯೆ ಮತ್ತು ಪ್ರಸ್ತುತ ಕತಾರ್‌ನ ದೋಹಾದಲ್ಲಿ ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ನಡೆಸುತ್ತಿರುವ ಮಾತುಕತೆಗಳ ಬಗ್ಗೆ ತಿಳಿಸಿದರು.

ಗಡಿ ಸಾರ್ವಭೌಮತ್ವ ಉಳಿಸಿಕೊಳ್ಳಲು ಭಾರತ ಎಂದಿಗೂ ಬದ್ಧ ಗಡಿ ಸಾರ್ವಭೌಮತ್ವ ಉಳಿಸಿಕೊಳ್ಳಲು ಭಾರತ ಎಂದಿಗೂ ಬದ್ಧ

ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಂತೋಷವಾಯಿತು, ನಮ್ಮ ಭೇಟಿಯಲ್ಲಿ ಶಾಂತಿ ಪ್ರಕ್ರಿಯೆ, ದೋಹಾದ ಮಾತುಕತೆ ಮತ್ತು ಶಾಂತಿ ಪ್ರಯತ್ನಗಳಿಗೆ ಭಾರತದ ಬೆಂಬಲ, ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದೆವು ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

Head Of Afghan Peace Council Abdullah Abdullah Meets PM Modi In Delhi

ಅಫ್ಘಾನಿಸ್ತಾನಕ್ಕೆ ಭಾರತದ ನಿರಂತರ ಬೆಂಬಲ ಇರುವುದಾಗಿ ಮೋದಿ ಭರವಸೆ ನೀಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ದೋಹಾದಲ್ಲಿ ಮಾತುಕತೆಗಳಿಗೆ ಬೆಂಬಲ ಕೋರಿ ಐದು ದಿನಗಳ ಭೇಟಿಗಾಗಿ ಅಬ್ದುಲ್ಲಾ ಭಾರತಕ್ಕೆ ಆಗಮಿಸಿದ್ದರು. ಇಸ್ಲಾಮಾಬಾದ್‌ನಲ್ಲಿ ಮೂರು ದಿನಗಳು ಇದ್ದು ಬಳಿಕ ದೆಹಲಿಗೆ ಭೇಟಿ ನೀಡಿದ್ದರು.

ಅವರು ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಆಂಡ್ ಅನಾಲಿಸಿಸ್‌ನಲ್ಲಿ ಭಾಷಣ ಮಾಡಲಿದ್ದಾರೆ. ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಅವರು ಭಾರತಕ್ಕೆ ಬರುವ ಮುನ್ನ'ಭಾರತವು ಅಫ್ಘಾನಿಸ್ತಾನದ ಕಾರ್ಯತಂತ್ರದ ಪಾಲುದಾರ' ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.

English summary
Prime Minister Narendra Modi assured Afghan peace negotiator Abdullah Abdullah on Thursday of India’s continued backing for the peace process in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X