ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಇಳಿಕೆಗೆ ಕುಮಾರಸ್ವಾಮಿ ಚಿಂತನೆ

By Nayana
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಪೆಟ್ರೋಲ್ , ಡೀಸೆಲ್ ಮೇಲಿನ ಸೆಸ್ ಇಳಿಸುವ ಚಿಂತನೆ ಇದ್ದು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿನ ನೆರೆ-ಬರ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆಯೇ ಇದೆ, ಆದರೂ ಸಾಧ್ಯವಾದಷ್ಟರ ಮಟ್ಟಿಗೆ ತೆರಿಗೆ ಇಳಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

HDK to reduce cess on fuel in the state

ನೆರೆ-ಬರದಿಂದ ತತ್ತರಿಸಿದ ಕರ್ನಾಟಕ: 2ಸಾವಿರ ಕೋಟಿ ನೀಡಲು ಮೋದಿಗೆ ಮೊರೆ ನೆರೆ-ಬರದಿಂದ ತತ್ತರಿಸಿದ ಕರ್ನಾಟಕ: 2ಸಾವಿರ ಕೋಟಿ ನೀಡಲು ಮೋದಿಗೆ ಮೊರೆ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಸೋಮವಾರ ಬಂದ್‌ ಗೆ ಕರೆ ನೀಡಿದೆ, ಇದೇ ವೇಳೆ ಕರ್ನಾಟಕದಲ್ಲಿ ತೈಲದ ಮೇಲಿರುವ ತೆರಿಗೆಯನ್ನು ಕಡಿಮೆ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಈ ಹಿಂದೆಯೂ ಎಚ್‌ಡಿ ಕುಮಾರಸ್ವಾಮಿ ಸೆಸ್ ಕಡಿಮೆ ಮಾಡುವ ಕುರಿತು ಚಿಂತನೆ ಮಾಡುತ್ತೇವೆ ಎಂದಿದ್ದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸಿನ ವೀರಭದ್ರಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಶೇ.2ರಷ್ಟು ತೆರಿಗೆಯನ್ನು ಕಡಿತ ಗೊಳಿಸಲಾಗಿದೆ ಎಂದಿದ್ದಾರೆ. ಕಳೆದ ಜುಲೈ ನಲ್ಲಿ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದ ಎಚ್‌ಡಿ ಎಚ್‌ಡಿ ಕುಮಾರಸ್ವಾಮಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು 1.14 ರೂ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು 1.12ರೂ.ನಷ್ಟು ಏರಿಕೆ ಮಾಡಿದ್ದರು.

English summary
Chief minister H.D.Kumarswamy has said that he will discuss with finance department to reduce the cess on petrol and diesel in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X