ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೂ ಅನುಕೂಲ ಮಾಡಿಕೊಡಿ: ಮೋದಿಗೆ ದೇವೇಗೌಡ ತಾಕೀತು

|
Google Oneindia Kannada News

Recommended Video

ರೈತರಿಗೆ ಅನುಕೂಲ ಮಾಡಿಕೊಡಲು ಮೋದಿಗೆ ತಾಕೀತು ಮಾಡಿದ ಎಚ್ ಡಿ ದೇವೇಗೌಡ | Oneindia Kannada

ಬೆಂಗಳೂರು, ನವೆಂಬರ್ 30: ಸ್ವಾಮಿನಾಥನ್ ವರದಿ, ರೈತರ ಸಾಲಮನ್ನಾ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೂ ದೆಹಲಿಗೆ ಧಾವಿಸಿದ್ದಾರೆ. ಅಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿ ಅವರಿಗೆ ಬೆಂಬಲ ಪ್ರಕಟಿಸಿದ್ದಾರೆ.

ಸಂಸತ್ತಿನತ್ತ ಲಕ್ಷಾಂತರ ರೈತರ ನಡಿಗೆ, ತಡೆಯಲು ಸಾವಿರಾರು ಪೊಲೀಸರ ನಿಯೋಜನೆಸಂಸತ್ತಿನತ್ತ ಲಕ್ಷಾಂತರ ರೈತರ ನಡಿಗೆ, ತಡೆಯಲು ಸಾವಿರಾರು ಪೊಲೀಸರ ನಿಯೋಜನೆ

ರೈತರು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಅದರ ಬಗ್ಗೆ ಕೇಂದ್ರ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೇವೇಗೌಡ ಹರಿಹಾಯ್ದಿದ್ದಾರೆ.

ಸರ್ಕಾರ ರೈತರನ್ನು ಕಡೆಗಣಿಸಬಾರದು. ಅವರನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರವೂ ದೇವೇಗೌಡರು ತಮ್ಮ ವಾಗ್ದಾಳಿ ಮುಂದುವರಿಸಿದ್ದು, ಸರಣಿ ಟ್ವೀಟ್‌ಗಳನ್ನು ಮಾಡಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಸುಲಭ ಉದ್ಯಮ ಬಿಂಬಿಸಿಕೊಳ್ಳುತ್ತಿದ್ದಾರೆ

'ಸುಲಭ ಉದ್ಯಮ' ಸೂಚ್ಯಂಕದಲ್ಲಿ ಭಾರತ ಉತ್ತಮ ಸ್ಥಾನಗಳಿಸಿ ಮೇಲಕ್ಕೆ ಬಂದಿದೆ ಎಂಬುದನ್ನು ಮೋದಿ ಸರ್ಕಾರ ಮತ್ತು ಬಿಜೆಪಿ ಭಾರಿ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಆದರೆ ಭಾರತ 'ಸುಲಭ ಉದ್ಯಮ'ದ ಜೊತೆಗೆ 'ಸುಲಭ ಕೃಷಿ'ಯಲ್ಲಿ ಸಾಧನೆ ಮಾಡಬೇಕು ಎಂಬುದು ಅತೀ ಮುಖ್ಯ ಸಂಗತಿ ನರೇಂದ್ರ ಮೋದಿ ಅವರೇ.

Array

ಸುಲಭ ಕೃಷಿಗೆ ಗಮನ ಹರಿಸಿ

ಭಾರತ ಮೂಲತಃ ಕೃಷಿ ಪ್ರಧಾನ ದೇಶ. 'ಸುಲಭ ಕೃಷಿ' ಕಡೆಗೂ ಗಮನ ಹರಿಸಿದರೆ ಆಹಾರ, ಉದ್ಯೋಗ, ಗ್ರಾಮೀಣಾಭಿವೃದ್ಧಿ ಎಲ್ಲವೂ ಸಾಧ್ಯ‌. ಸುಲಭ ಉದ್ಯಮ ಸ್ನೇಹಿ ವಾತಾವರಣ ಕಡೆಗಷ್ಟೇ ಗಮನಕೊಟ್ಟರೆ ಉದ್ಯಮಿಗಳಿಗಷ್ಟೇ ಅನುಕೂಲ‌ ಎಂದು ದೇವೇಗೌಡ ಅವರು ಹೇಳಿದ್ದಾರೆ.

ರಾಜಧಾನಿಯಲ್ಲಿ ಅನ್ನದಾತನ ಅಬ್ಬರ, ರಾಮಲೀಲಾದಲ್ಲಿ ರೈತ ಸಾಗರ!ರಾಜಧಾನಿಯಲ್ಲಿ ಅನ್ನದಾತನ ಅಬ್ಬರ, ರಾಮಲೀಲಾದಲ್ಲಿ ರೈತ ಸಾಗರ!

ಪ್ರಧಾನಿ ಬುದ್ಧಿ ಹೇಳಲಿ

ರೈತರ ಬೆಳೆ ಸಾಲ ಮನ್ನಾ ಮೂಲಕ ಕರ್ನಾಟಕ ಸುಲಭ ಕೃಷಿಯ (Ease of Doing Agriculture) ಕಡೆಗೆ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಮಾದರಿಯಾಗಲಿ. ಅದೇ ಹೊತ್ತಿನಲ್ಲಿ ಸಾಲ ಮರು ಪಾವತಿಗಾಗಿ ರೈತರಿಗೆ ನೋಟಿಸ್ ಕೊಡುತ್ತಿರುವ ದೇಶದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರಧಾನಿ ಬುದ್ಧಿ ಹೇಳಲಿ ಎಂದು ಸಲಹೆ ನೀಡಿದ್ದಾರೆ.

ರೈತರ ಕೂಗಿಗೆ ಬೆಲೆಯೇ ಇಲ್ಲ

ರೈತರ ಕೂಗಿಗೆ ಬೆಲೆಯೇ ಇಲ್ಲ

ಗುರುವಾರ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ನಾವು ರೈತರ ಜತೆಗಿದ್ದೇವೆ. ಬರ, ಬೆಳೆಗೆ ತಕ್ಕ ಬೆಲೆ ಕೊರತೆಯಿಂದ ಹೆಣಗಾಡುತ್ತಿದ್ದರೆ ಕೇಂದ್ರ ಸರ್ಕಾರ ಇದರತ್ತ ಗಮನವನ್ನೇ ಹರಿಸುತ್ತಿಲ್ಲ. ರೈತರ ಕೂಗಿಗೆ ಬೆಲೆ ಇಲ್ಲದಂತಾಗಿದೆ. ಅವರ ಸಮಸ್ಯೆಗಳನ್ನು ಬಗೆಹರಿಸುವತ್ತ ಮೋದಿ ಚಿಂತಿಸುತ್ತಲೇ ಇಲ್ಲ. ಆದರೆ, ಈ ಎಲ್ಲ ರೈತರ ಜೊತೆ ನಾವಿದ್ದೇವೆ. ಬಿಜೆಪಿಯನ್ನು ಹೊರತುಪಡಿಸಿ ಎಲ್ಲ ಪಕ್ಷಗಳ ನಾಯಕರೂ ನಿಮ್ಮೊಟ್ಟಿಗಿದ್ದೇವೆ ಎಂದು ಹೇಳಿದ್ದರು.

ದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯದೆಹಲಿಯಲ್ಲಿ ಲಕ್ಷಾಂತರ ಅನ್ನದಾತರ ಪ್ರತಿಭಟನೆ: ಸರ್ಕಾರ, ಮಾಧ್ಯಮಗಳ ನಿರ್ಲಕ್ಷ್ಯ

English summary
Former Prime Minister HD Devegowda demanded Prime Minister Narendra Modi to solve the problems of farmers than giving importance only to the businessmen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X