ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ್ರ ಪೂಜೆ ಫಲಿಸಲಿಲ್ಲ, ಡಿಕೆಶಿಗೆ ಜಾಮೀನು ಸಿಗಲಿಲ್ಲ!

|
Google Oneindia Kannada News

ದೆಹಲಿ, ಸೆಪ್ಟೆಂಬರ್ 25: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ದೊರೆಯಲಿ ಎಂದು ಪ್ರಾರ್ಥಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇವಾಲಯವೊಂದರಲ್ಲಿ ಪೂಜೆ ಮಾಡಿಸಿದ್ದರು. ನನ್ನ ಪೂಜೆ ಫಲಿಸಲಿದೆ. 'ಡಿಕೆಶಿ ಅವರಿಗೆ ಪಕ್ಕಾ ಜಾಮೀನು ಸಿಗಲಿದೆ' ಎಂದು ವಿಶ್ವಾಸದಲ್ಲಿ ಹೇಳಿದ್ದ ಗೌಡರಿಗೆ ವಿಶೇಷ ನ್ಯಾಯಾಲಯದ ಆದೇಶ ಆಘಾತ ತಂದಿದೆ.

ಹೌದು, ಕನಕಪುರ ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ.

ಜಾಮೀನು ನಿರಾಕರಣೆ: ಡಿಕೆ ಶಿವಕುಮಾರ್ ಮುಂದಿನ ನಡೆ ಏನು?ಜಾಮೀನು ನಿರಾಕರಣೆ: ಡಿಕೆ ಶಿವಕುಮಾರ್ ಮುಂದಿನ ನಡೆ ಏನು?

ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದ ಲಾಗಾಯ್ತೂ ಅವರ ಬೆಂಬಲಕ್ಕೆ ನಿಂತಿರುವ ದೇವೇಗೌಡರು, ತಿಹಾರ್ ಜೈಲಿನಲ್ಲಿರುವ ಡಿಕೆಶಿ ಅವರ ಭೇಟಿಗೂ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ನಂತರ ದೇವಾಲಯವೊಂದಕ್ಕೆ ತೆರಳಿ ಅವರಿಗಾಗಿ ವಿಶಷ ಪೂಜೆ ಸಲ್ಲಿಸಿದ್ದರು.

ಭೇಟಿ ಸಾಧ್ಯವಾಗಲಿಲ್ಲ

ಭೇಟಿ ಸಾಧ್ಯವಾಗಲಿಲ್ಲ

"ಡಿಕೆಶಿ ಅವರನ್ನು ಭೇಟಿಯಾಗುವ ಉದ್ದೇಶದಿಂದಲೇ ನಾನು ದೆಹಲಿಗೆ ತೆರಳಿದ್ದೆ. ಆದರೆ ಎರಡು ದಿನ ಮೊದಲೇ ಅನುಮತಿ ಪಡೆಯಬೇಕು ಎಂದಯ ಜೈಲಿನ ಅಧಿಕಾರಿಗಳು ಹೇಳಿದರು. ಆದ್ದರಿಂದ ಅವರ ಭೇಟಿ ಸಾಧ್ಯವಾಗಲಿಲ್ಲ" ಎಮದು ದೇವೇಗೌಡ್ರು ಹೇಳಿದರು.

ದೆಹಲಿಯಲ್ಲಿ ಎಚ್. ಡಿ. ದೇವೇಗೌಡ ಭೇಟಿಯಾದ ಡಿ. ಕೆ. ಸುರೇಶ್ದೆಹಲಿಯಲ್ಲಿ ಎಚ್. ಡಿ. ದೇವೇಗೌಡ ಭೇಟಿಯಾದ ಡಿ. ಕೆ. ಸುರೇಶ್

ಪೂಜೆ ಸಲ್ಲಿಸಿದ್ದ ಗೌಡ್ರು!

ಪೂಜೆ ಸಲ್ಲಿಸಿದ್ದ ಗೌಡ್ರು!

ಉತ್ತಮ ತೀರ್ಥಕ್ಷೇತ್ರವೊಂದಕ್ಕೆ ತೆರಳಿ ನಾನು ಪೂಜೆ ಸಲ್ಲಿಸಿದ್ದೇನೆ. ದೇವರ ದಯೆಯಿಂದ ಜಾಮೀನಿನ ಮೇಲೆ ಡಿಕೆಶಿ ಬಿಡುಗಡೆಯಾಗುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ ಎಂದು ಗೌಡರು ಹೇಳಿದ್ದರು. ಆದರೆ ಗೌಡರ ಪ್ರಾರ್ಥನೆ ಫಲಿಸಲಿಲ್ಲ, ಡಿಕೆಶಿಗೆ ಜಾಮೀನು ಸಿಗಲಿಲ್ಲ.

ಡಿಕೆ ಸುರೇಶ್ ಭೇಟಿ

ಡಿಕೆ ಸುರೇಶ್ ಭೇಟಿ

ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿರುವ ಎಚ್. ಡಿ. ದೇವೇಗೌಡರ ನಿವಾಸಕ್ಕೆ ಸಂಸದ ಡಿ. ಕೆ. ಸುರೇಶ್ ಭೇಟಿ ನೀಡಿದರು. ಮಾಜಿ ಸಚಿವ ಎಚ್. ಡಿ. ರೇವಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಡಿ. ಕೆ. ಶಿವಕುಮಾರ್ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದರು.

ಏನಿದು ಪ್ರಕರಣ?

ಏನಿದು ಪ್ರಕರಣ?

2017ರ ಆಗಸ್ಟ್‌ 2 ರಿಂದ 5ನೇ ತಾರೀಕಿನ ತನಕ ನಡೆದ ಆದಾಯ ತೆರಿಗೆ ಇಲಾಖೆ ದಾಳಿ 8.59 ಕೋಟಿ ರೂ.ಗಳ ಪ್ರಕರಣ ದಾಖಲಾಗುವಂತೆ ಮಾಡಿತು. ಇದೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್‌ ನಾಲ್ಕು ದಿನಗಳ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾಗಿದ್ದಾರೆ.

English summary
HD Deve Gowda Prays God For DK Shivakumar To Grant Him Bail ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X