ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಶೀಲ್ಡ್ ಲಸಿಕೆಗಳ ಅಂತರ ತಗ್ಗಿಸಲು ದೆಹಲಿ ಹೈಕೋರ್ಟ್ ನಕಾರ

|
Google Oneindia Kannada News

ನವದೆಹಲಿ, ಜುಲೈ 15: ಕೋವಿಶೀಲ್ಡ್ ಲಸಿಕೆಗಳ ನಡುವಿನ ಅಂತರ ತಗ್ಗಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. 50 ವರ್ಷದ ಮೇಲ್ಪಟ್ಟವರು ಹಾಗೂ ಬಹು ರೀತಿಯ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರಿಗೆ ಕೋವಿಶೀಲ್ಡ್‌ನ ಡೋಸೇಜ್ ಅಂತರವನ್ನು 12-16 ರಿಂದ 8 ವಾರಗಳಿಗೆ ತಗ್ಗಿಸಲು ನಿರ್ದೇಶನ ನೀಡಬೇಕೆಂದು ಡಾ.ಸಿದ್ಧಾರ್ಥ್ ಡೆ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಜು.15 ರಂದು ನಡೆಸಿದೆ ಕೋರ್ಟ್ ಈ ಸಂಬಂಧ ನೋಟಿಸ್ ಜಾರಿ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ಶುಲ್ಕ (ದಂಡ) ಸಹಿತ ವಜಾಗೊಳಿಸಿದೆ.

ಇದು ಪ್ರಮಾಣಿಕವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಜೌಹರಿ ಹೇಳಿದರು, ಇದು ಪ್ರಮಾಣಿಕ ಪಿಐಎಲ್ ಎಂಬ ಬಗ್ಗೆ ಅನುಮಾನವಿಲ್ಲ. ಅರ್ಜಿ ವಜಾಗೊಳಿಸುವುದು ಅಪ್ರಾಮಾಣಿಕತೆಯ ಪ್ರಮಾಣಪತ್ರವೂ ಅಲ್ಲ ಎಂದು ಕೋರ್ಟ್ ಹೇಳಿದೆ. ಜೌಹರಿ ತಮ್ಮ ಅರ್ಜಿಯನ್ನು ಬೇಷರತ್ ಆಗಿ ಹಿಂಪಡೆದಿದ್ದಾರೆ.

 ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO ನಾವು ಕೊರೊನಾ 3ನೇ ಅಲೆಯ ಆರಂಭಿಕ ಹಂತದಲ್ಲಿದ್ದೇವೆ: WHO

ಕೋವಿಶೀಲ್ಡ್ ನ ಎರಡು ಡೋಸ್ ಗಳ ಅಂತರವನ್ನು ಈಗ 12-16 ವಾರಗಳಿಗೆ ನಿಗದಿಪಡಿಸಲಾಗಿದೆ. ಕೋವಿಶೀಲ್ಡ್ ಡೋಸೇಜ್ ಅಂತರವನ್ನು ತಗ್ಗಿಸುವುದಕ್ಕೆ ನಿರ್ದೇಶನ ನೀಡಲು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

Delhi HC Refuses To Entertain A PIL Seeking Reduction Of Gap Between Two Doses Of Covishield

ಡೋಸೇಜ್ ಗಳ ಅಂತರವನ್ನು ನಿಗದಿಪಡಿಸುವ ವಿಧಾನದ ಬಗ್ಗೆ ನಿಮಗೆ ಅರಿವಿದೆಯೇ? ಡೋಸೇಜ್ ಗಳನ್ನು ಯಾರು ನಿಗದಿಪಡಿಸುತ್ತಿದ್ದಾರೆ? ನಮಗೆ ಆ ಅಧಿಕಾರವಿದ್ದರೆ ವಿಧಾನವನ್ನೇ ಬದಲಾವಣೆ ಮಾಡಬೇಕಾಗುತ್ತದೆ ಎಂದು ಸಿದ್ಧಾರ್ಥ್ ಅವರ ಪರ ವಾದ ಮಂಡಿಸಿದ ವಕೀಲ ಕುಲ್ದೀಪ್ ಜೌಹರಿ ಅವರಿಗೆ ನ್ಯಾ.ಡಿ.ಎನ್ ಪಟೇಲ್, ನ್ಯಾ. ಜ್ಯೋತಿ ಸಿಂಗ್ ಅವರಿದ್ದ ಪೀಠ ಹೇಳಿದೆ.

ಜೌಹರಿ ಅವರು ಮಂಡಿಸಿರುವ ವಾದ ಡೋಸೇಜ್ ಅಂತರ ತಗ್ಗಿಸುವ ವಿಚಾರದಲ್ಲಿ ಕೋರ್ಟ್ ಗೆ ಸ್ಪಷ್ಟವಾಗಿ ಮನವರಿಕೆಯಾಗಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಕೇವಲ ವಾದ ಮಾಡುವುದಕ್ಕಾಗಿಯಷ್ಟೇ ವಾದಿಸುತ್ತಿದ್ದೀರಿ, ನಮಗೆ ಮನವರಿಕೆಯಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕೋವಿಡ್-19 ಕಾರ್ಯನಿರತ ಗುಂಪು ಹಾಗೂ ತಜ್ಞ ಗುಂಪುಗಳು ಈ ಅಂಶದ ಬಗ್ಗೆ ಗಮನ ಹರಿಸಿದೆ ಎಂದು ಹೇಳಿದ್ದು, ತಮ್ಮ ವಾದದ ಸಮರ್ಥನೆಗೆ ಬ್ರಿಟನ್ ವಿಜ್ಞಾನಿಗಳ ಅಧ್ಯಯನವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಬ್ರಿಟನ್ ನ ವಿಜ್ಞಾನಿಗಳು ನಡೆಸಿರುವ ಅಧ್ಯಯನದ ಪ್ರಕಾರ ಕೋವಿಡ್-19 ನ ಹೊಸ ರೂಪಾಂತರಿಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಡೋಸೇಜ್ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದರು.

English summary
Delhi High Court refuses to entertain a PIL seeking reduction of interval gap between two doses of COVID19 vaccine Covishield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X