ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಗೆ ಕೇಜ್ರಿವಾಲ್ ಸದಾ ಗೈರು: ಕೇಸ್ ಹಾಕಿದ ಮಾಜಿ ಸ್ನೇಹಿತ!

|
Google Oneindia Kannada News

ನವದೆಹಲಿ, ಜೂನ್ 11: ವಿಧಾನಸಭೆ ಕಲಾಪಗಳಿಗೆ ಗೈರು ಹಾಜರಾಗುತ್ತಿರುವ ದೆಹಲಿ ಮುಖ್ಯಮಂತ್ರಿ ವಿರುದ್ಧ ದೂರು ಸಲ್ಲಿಸಲು ಆಮ್ ಆದ್ಮಿ ಪಕ್ಷದ ಅಮಾನತುಗೊಂಡ ನಾಯಕ ಕಪಿಲ್ ಮಿಶ್ರಾ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

ಕೇಜ್ರಿವಾಲ್ ಅವರ ವಿಧಾನಸಭೆಯ ಹಾಜರಾತಿ ಶೇ 10ಕ್ಕಿಂತಲೂ ಕಡಿಮೆ ಇದೆ ಎಂದು ಮಿಶ್ರಾ ಆರೋಪಿಸಿದ್ದಾರೆ. ಈ ಅರ್ಜಿಯನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಹೇಳಿದೆ.

ಸರ್ಕಾರ ಬಿಜೆಪಿಯದು, ರಾಜ್ಯಗಳ ಮೇಲೆ ಗೂಬೆಕೂರಿಸುವುದೇಕೆ?: ಚಿದಂಬರಂಸರ್ಕಾರ ಬಿಜೆಪಿಯದು, ರಾಜ್ಯಗಳ ಮೇಲೆ ಗೂಬೆಕೂರಿಸುವುದೇಕೆ?: ಚಿದಂಬರಂ

ವಿಧಾನಸಭಾ ಕಲಾಪಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಬೇಕು. ಮುಖ್ಯಮಂತ್ರಿಯವರು ಕಲಾಪಕ್ಕೆ ಹಾಜರಾಗುತ್ತಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಲೆಫ್ಟಿನೆಂಟ್ ಗವರ್ನರ್ ಮತ್ತು ಸ್ಪೀಕರ್‌ಗೆ ಸೂಚಿಸಬೇಕು.

hc allowed kapil mishra to file petition against kejriwal

ಕಲಾಪದಲ್ಲಿ ಕೇಜ್ರಿವಾಲ್ ಅವರ ಹಾಜರಾತಿ ಶೇ 10ಕ್ಕಿಂತಲೂ ಕಡಿಮೆ ಇದೆ. ವಿಶೇಷ ಅಧಿವೇಶನಗಳಲ್ಲಿಯೂ ಅವರು ಭಾಗವಹಿಸಿಲ್ಲ. ಎರಡು ಗಂಟೆ ಮಾತ್ರ ಅಲ್ಲಿದ್ದರು. ಇದು ದೆಹಲಿ ಜನರು ನೀಡಿದ ಮತಕ್ಕೆ ಮಾಡಿದ ಅವಮಾನ. ಅವರು ಕಲಾಪಕ್ಕೆ ಹಾಜರಾಗದೆ ಇದ್ದರೆ ಅವರ ವೇತನಕ್ಕೆ ಕತ್ತರಿ ಹಾಕಬೇಕು ಎಂದು ಮಿಶ್ರಾ ಒತ್ತಾಯಿಸಿದರು.

English summary
The Delhi High Court allowed suspended Aam Aadmi Party leader Kapil Mishra to file a petition against Delhi Chief Minister Arvind Kejriwal over poor attendance in assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X