ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಎಂದಾದರೂ ನಾಲ್ಕು ಕಿವಿಯ ಬೆಕ್ಕನ್ನು ನೋಡಿದ್ದೀರಾ? ಇಲ್ಲಿದೆ ನೋಡಿ

|
Google Oneindia Kannada News

ನವದೆಹಲಿ, ನವೆಂಬರ್ 16: ಸಾಕುಪ್ರಾಣಿಗಳು ಅಂದರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ. ಅದ್ರಲ್ಲೂ ಮುದ್ದಾದ ಪುಟ್ಟದಾದ ಸಾಕುಪ್ರಾಣಿಗಳು ಪ್ರಾಣಿಪ್ರಿಯರನ್ನು ಆಕರ್ಷಿಸಿಬಿಡುತ್ತವೆ. ಅವುಗಳ ಆಟ, ಬುದ್ಧಿವಂತಿಕೆ, ನಿಷ್ಠತೆಯಿಂದ ಎಲ್ಲರಲ್ಲೂ ಬೆರಗುಗೊಳಿಸುತ್ತವೆ. ಮನೆಯಲ್ಲಿ ಪ್ರೀತಿಯಿಂದ ಬೆಳೆಸುವ ಸಾಕುಪ್ರಾಣಿಗಳು ಮಕ್ಕಳೊಂದಿಗೆ ಬಲು ಆಪ್ತವಾಗಿರುತ್ತವೆ. ಮಕ್ಕಳಿಗೂ ಮುದ್ದು ಸಾಕುಪ್ರಾಣಿ ಗೆಳೆಯರೊಂದಿಗೆ ಆಟ ಆಡುವುದೆಂದರೆ ಬಲು ಇಷ್ಟ. ಅದೊಂದು ರೀತಿಯ ಸುಂದರ ಗೆಳೆತನ. ಕೆಲವೊಂದು ಸಲ ಇದೇ ಸಾಕುಪ್ರಾಣಿಗಳು ತಮ್ಮದೇ ಆದ ವಿಶಿಷ್ಟ ರೂಪದ ಮೂಲಕ ಹುಬ್ಬೇರಿಸುವಂತೆ ಮಾಡುತ್ತವೆ.

ಈ ಜಗತ್ತಿನಲ್ಲಿ ಅನೇಕ ಸಂಗತಿಗಳು ಬಹಳ ವಿರಳವಾಗಿ ಕಂಡು ಬರುತ್ತವೆ. ಅವುಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಅಂತಹ ವಿಶಿಷ್ಟ ಬೆಕ್ಕು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ವಾಸ್ತವವಾಗಿ ಈ ಬೆಕ್ಕಿಗೆ ನಾಲ್ಕು ಕಿವಿಗಳಿವೆ. ಅದಕ್ಕಾಗಿಯೇ ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆಕ್ಕು ಫೇಮಸ್

ಈ ಬೆಕ್ಕು ಟರ್ಕಿಯದ್ದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. 4 ತಿಂಗಳ ವಯಸ್ಸಿನ ಈ ಬೆಕ್ಕಿನ ಹೆಸರು ಮಿಡಾಸ್. ಇದು ತನ್ನದೇ ಆದ ಇನ್‌ಸ್ಟಾಗ್ರಾಮ್ ಪುಟವನ್ನು ಸಹ ಹೊಂದಿದೆ. ಇದನ್ನು 46 ಸಾವಿರಕ್ಕೂ ಹೆಚ್ಚು ಜನರು ಅನುಸರಿಸುತ್ತಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಈ ಮುದ್ದಾದ ಬೆಕ್ಕಿನ ಕಿವಿಗಳು ಮಾತ್ರ ಆಶ್ಚರ್ಯಕರವಾಗಿಲ್ಲ. ಬದಲಿಗೆ ಈ ಬೆಕ್ಕಿನ ಎದೆಯ ಮೇಲೆ ಬಿಳಿ ಬಣ್ಣದ ಗುರುತು ಕೂಡ ಇದೆ. ಅದು ಹೃದಯದ ಆಕಾರದಲ್ಲಿದೆ ಮತ್ತೊಂದು ವಿಶೇಷ.

ಮಿಡಾಸ್ ವೈದ್ಯಕೀಯ ತಪಾಸಣೆಯಲ್ಲಿ ಯೋಗ್ಯ

ಟರ್ಕಿಯಲ್ಲಿ ವಾಸಿಸುವ ಮಹಿಳೆ ಕ್ಯಾನಿಸ್ ಡೋಸೆಮೆಸಿ ಅವರು ಈ ಬೆಕ್ಕನ್ನು ದತ್ತು ತೆಗೆದುಕೊಂಡಿದ್ದಾರೆ. ಕ್ಯಾನಿಸ್ ಅವರು ಬೆಕ್ಕನ್ನು ಪ್ರಾಣಿಗಳ ವೈದ್ಯರಿಂದ ಪರೀಕ್ಷಿಸಿದ್ದಾರೆ. ವೈದ್ಯರು ಮಿಡಾಸ್ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಬೆಕ್ಕಿನ ತಪಾಸಣೆಯನ್ನು ಕೆಲವು ತಿಂಗಳುಗಳವರೆಗೆ ಮುಂದುವರಿಸಿದ್ದಾರೆ.

ಮಿಡಾಸ್ ತುಂಬಾ ಚಂಚಲ

ಮಿಡಾಸ್ ತುಂಬಾ ಚಂಚಲ

ಕ್ಯಾನಿಸ್ ಮಿಡಾಸ್ (ಬೆಕ್ಕಿನ ಹೆಸರು) ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಿಡಾಸ್ ತನ್ನ ಹೊಸ ಮನೆಯಲ್ಲಿ ತುಂಬಾ ಚೆನ್ನಾಗಿ ವಾಸಿಸುತ್ತಿದೆ ಎಂದು ಅವರು ಹೇಳಿದರು. 'ಮಿಡಾಸ್ ತನ್ನ ಹಾಸಿಗೆಯಲ್ಲಿ ಚಿಕ್ಕನಿದ್ರೆ ತೆಗೆದುಕೊಂಡು ತನ್ನ ಆಟಿಕೆಗಳೊಂದಿಗೆ ಆಡುತ್ತದೆ. ಮಿಡಾಸ್ ತುಂಬಾ ತಮಾಷೆಯ ಬೆಕ್ಕು" ಎಂದು ಅವರು ಹೊಗಳಿದ್ದಾರೆ. ಮಿಡಾಸ್ ನನ್ನನ್ನು ಭೇಟಿಯಾದಾಗ ಅತ್ಯಂತ ಪ್ರೀತಿಯಿಂದ ವರ್ತಿಸುತ್ತದೆ. ಇದಲ್ಲದೆ, ಅವಳು ಇಡೀ ದಿನ ಮಲಗುತ್ತಾಳೆ ಮತ್ತು ರಾತ್ರಿಯಿಡೀ ಎಚ್ಚರವಾಗಿರುತ್ತಾಳೆ ಎಂದು ಕ್ಯಾನಿಸ್ ಹೇಳುತ್ತಾರೆ.

ನಾಯಿಗಳೊಂದಿಗೆ ಸ್ನೇಹ

ಮಿಡಾಸ್ ಸ್ನೇಹ ಜೀವ. ಯಾವಾಗಲೂ ತೊಡೆಯ ಮೇಲೆ ಮಲಗಲುಇಷ್ಟ ಪಡುತ್ತದೆ ಎಂದು ಕ್ಯಾನಿಸ್ ಹೇಳುತ್ತಾರೆ. ಇದಲ್ಲದೇ ಮನೆಯಲ್ಲಿ ಸಾಕಿರುವ ಶ್ವಾನಗಳೊಂದಿಗೆ ಮಿಡಾಸ್ ಗೆಳೆತನ ಬೆಳೆಸಿದ್ದು, ಅವುಗಳ ಜೊತೆ ಸುತ್ತಾಡಲು ಇಷ್ಟಪಡುತ್ತದೆಯಂತೆ. ಮಿಡಾಸ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜನರು ಸಹ ಬೆಕ್ಕುಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ.

 ವಾಸಿಸಲು ಸುರಕ್ಷಿತ ಸ್ಥಳ

ವಾಸಿಸಲು ಸುರಕ್ಷಿತ ಸ್ಥಳ

ಬೆಕ್ಕುಗಳ ಬಗ್ಗೆ ಜಾಗೃತಿ ಮತ್ತು ಅವುಗಳಿಗೆ ವಾಸಿಸಲು ಸುರಕ್ಷಿತ ಸ್ಥಳವನ್ನು ನೀಡುವುದು ವಿದೇಶಿ ಕಲ್ಪನೆಯಲ್ಲ. ಆದರೆ ಭಾರತದಲ್ಲಿ ಜನರು ಈ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕಚ್ ಮೂಲದ ವ್ಯಕ್ತಿಯೊಬ್ಬರು 2017 ರಲ್ಲಿ ಕ್ಯಾಟ್ ಗಾರ್ಡನ್ ಅನ್ನು ಸ್ಥಾಪಿಸಿದರು. ನಾಲ್ಕು ವರ್ಷಗಳ ಕೆಳಗೆ, ಈ ಜಾಗದಲ್ಲಿ 200 ಕ್ಕೂ ಹೆಚ್ಚು ಬೆಕ್ಕುಗಳಿದ್ದವು. ಈ ಬೆಕ್ಕಿನ ಮನೆಯ ಸ್ಥಾಪಕ ಅದನ್ನು ತನ್ನ ದಿವಂಗತ ಸಹೋದರಿಗಾಗಿ ನಿರ್ಮಿಸಿದ್ದಾನೆ. ಪ್ರಸ್ತುತ, ಮಾಲೀಕರು ಮತ್ತು ಅವರ ಪತ್ನಿ ಬೆಕ್ಕಿನ ಮನೆಯ ನಿರ್ವಹಣೆಗಾಗಿ ತಿಂಗಳಿಗೆ ₹ 1.5 ಲಕ್ಷ ಮೊತ್ತದ 90 ಪ್ರತಿಶತ ವೆಚ್ಚವನ್ನು ಭರಿಸುತ್ತಾರೆ.

English summary
Many things are very rare in this world, seeing which one is surprised. One such unique cat is in a lot of discussion on social media these days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X