ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್ ಆರೋಪಿತ ರಾಯಭಾರಿ ಭಾರತದಿಂದ ಪರಾರಿ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆ. 10: ಇಬ್ಬರು ನೇಪಾಳಿ ಮಹಿಳೆ ಹಾಗೂ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿರುವ ಭಾರತದಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿ ಅಧಿಕಾರಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ನೇಪಾಳ ಮೂಲದ ತಾಯಿ ಮಗಳನ್ನು ನಾಲ್ಕು ತಿಂಗಳುಗಳ ಕೂಡಿ ಹಾಕಿ, ಅತ್ಯಾಚಾರ ಮಾಡಿದ ಆರೋಪದಲ್ಲಿ ಅಧಿಕಾರಿಯ ವಿರುದ್ಧ ಕೇಸು ದಾಖಲಾಗುತ್ತಿದ್ದಂತೆ ತನ್ನ ಪತ್ನಿಯನ್ನು ಇಲ್ಲೇ ಬಿಟ್ಟು ಸೌದಿ ಅರೇಬಿಯಾಕ್ಕೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಘಟನೆ ಬಗ್ಗೆ ಗುರ್ ಗಾಂವ್ ಪೊಲೀಸರಿಂದ ಭಾರತದ ವಿದೇಶಾಂಗ ಸಚಿವಾಲಯ (ಎಂಇಎ) ವಿಸ್ತೃತ ವರದಿಯನ್ನು ಪಡೆದುಕೊಂಡಿದ್ದು, ರಾಯಭಾರಿ ಕಚೇರಿ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

Has Saudi diplomat accused of rape left India?

ಪ್ರಕರಣದ ತನಿಖೆ ಕೈಗೊಳ್ಳಲು ಗುರ್ ಗಾಂವ್ ಪೊಲೀಸರಿಗೆ ರಾಜತಾಂತ್ರಿಕ ತೊಂದರೆಗಳು ಎದುರಾಗಿರುವುದರಿಂದ ತನಿಖೆ ಇನ್ನೂ ಆರಂಭವಾಗಿಲ್ಲ. ವಿದೇಶಾಂಗ ಸಚಿವಾಲಯದಿಂದ ಸೂಚನೆ ಸಿಕ್ಕ ಕೂಡಲೇ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಗುರ್ ಗಾಂವ್ ಪೊಲೀಸರು ಹೇಳಿದ್ದಾರೆ.

ಗುರ್ ಗಾಂವ್ ನ ಮನೆ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಅಪಾರ್ಟ್ಮೆಂಟ್ ನಿಂದ ರಾಯಭಾರಿ ಕಚೇರಿಗೆ ಅಧಿಕಾರಿ ತಪ್ಪಿಸಿಕೊಂಡು ಹೋಗಿದ್ದಾರೆ. ಸಂತಸ್ತ ಮಹಿಳೆಯರನ್ನು ರಕ್ಷಿಸಿದ ಪೊಲೀಸರು ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ವರದಿ ಪ್ರಕಾರ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳವಾಗಿದ್ದು ದೃಢಪಟ್ಟಿದೆ. ನಂತರ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಅದರೆ, ಸೌದಿ ಅರೇಬಿಯಾ ರಾಯಭಾರಿ ಕಚೇರಿ ಮಾತ್ರ ತನ್ನ ಅಧಿಕಾರಿ ನಿರ್ದೋಷಿ ಎಂದು ಪ್ರತಿಕ್ರಿಯೆ ನೀಡಿದೆ.

English summary
Has the Saudi diplomat, who is accused of raping two Nepalese women, left India? Sources say that the diplomat has left India for Saudi Arabia with his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X