ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್ ಘರ್ಷಣೆ ಕುರಿತು ರಾಹುಲ್ ಗಾಂಧಿ ಮತ್ತೊಂದು ಟೀಕೆ

|
Google Oneindia Kannada News

ದೆಹಲಿ, ಜೂನ್ 23: ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದ ಗಡಿಯಲ್ಲಿ ಭಾರತದ 20 ಸೈನಿಕರು ಸಾವನ್ನಪ್ಪಿದ ಕ್ಷಣದಿಂದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕೆಗಳ ಬ್ರಹ್ಮಾಸ್ತ್ರವನ್ನು ಬಳಸುತ್ತಲೇ ಇದ್ದಾರೆ.

Recommended Video

ಮೋದಿ ವಿರುದ್ಧ ಮತ್ತೊಂದು ಟೀಕೆ ಮಾಡಿದ ರಾಹುಲ್ ಗಾಂಧಿ | Rahul Gandhi on Galwan valley

ದಿನಕ್ಕೊಂದು ವಿಷಯ ಬಗ್ಗೆ ಟ್ವೀಟ್ ಮಾಡುತ್ತಾ, ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ಕ್ರಮಗಳನ್ನು ಟೀಕಿಸುತ್ತಿದ್ದಾರೆ. ಇದೀಗ, ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಸರ್ಕಾರವನ್ನು ಕುಟುಕಿದ್ದಾರೆ.

ಗಡಿ ಸಂಘರ್ಷದ ನಡುವೆಯೂ ಪ್ರಧಾನಿ ಮೋದಿಯನ್ನು ಹೊಗಳಿತೇ ಚೀನಾ?ಗಡಿ ಸಂಘರ್ಷದ ನಡುವೆಯೂ ಪ್ರಧಾನಿ ಮೋದಿಯನ್ನು ಹೊಗಳಿತೇ ಚೀನಾ?

''ಚೀನಾ ಆಕ್ರಮಣದ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಹಾಗಾದರೆ, ಚೀನಾ ಭಾರತೀಯ ಭೂಮಿಯನ್ನು ಆಕ್ರಮಿಸಿಕೊಂಡಿದೆಯೇ?'' ಎಂದು ಪ್ರಶ್ನಿಸಿದ್ದಾರೆ. ಅಂದ್ಹಾಗೆ, ಭಾರತದ ಗಡಿಯೊಳಗಿರುವ ಪಾಂಗೊಂಗ್ ತ್ಸೋ ಸರೋವರವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ.

ನಿನ್ನೆಯಷ್ಟೇ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ ಮಾಡಿದ್ದರು. ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆಯನ್ನು ಚೀನಾ ಮಾಧ್ಯಮಗಳು ಸ್ವಾಗತಿಸಿದ್ದು, ಮೋದಿ ಅವರನ್ನು ಹೊಗಳಿದೆ ಎನ್ನಲಾದ ವರದಿಯನ್ನು ಉಲ್ಲೇಖಿಸಿ ರಾಹುಲ್ ''ಚೀನಾ ಮೋದಿಯನ್ನು ಹೊಗಳಿದ್ದೇಕೆ? ಎಂದು ಪ್ರಶ್ನಿಸಿದ್ದರು.

Has China Occupied Indian Land? Rahul Gandhi Again Attack Central Govt

ಅದಕ್ಕೂ ಮುಂದೆ ಟ್ವೀಟ್ ಮಾಡಿದ್ದ ರಾಹುಲ್ ಗಾಂದಿ, ''ಚೀನಾಗೆ ಭಾರತದ ಲಡಾಖ್ ಗಡಿಯನ್ನು ಮೋದಿ ಬಿಟ್ಟುಕೊಟ್ಟಿದ್ದಾರೆ, ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ'' ಎಂದು ಆರೋಪಿಸಿದ್ದರು.

English summary
“We stand united against the Chinese invasion. Has China occupied Indian land?” rahul gandhi again attack central govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X