ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್ ನಂತರ ಸೆಕ್ಸ್ ಶಿಕ್ಷಣದ ಬಗ್ಗೆ ಡಾ. ಹರ್ಷ

By Mahesh
|
Google Oneindia Kannada News

ನವದೆಹಲಿ, ಜೂ.27: 'ಎಚ್‌ಐವಿ ಸೋಂಕು ತಡೆಯಲು ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್‌ ಬಳಸುವಂತೆ ಒತ್ತು ನೀಡಿ ಪ್ರಚಾರ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಈಗ ಶಾಲೆಗಳಲ್ಲಿ ಸೆಕ್ಸ್ ಶಿಕ್ಷಣ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.

'ನೀವು ಯಾವುದೇ ಅಕ್ರಮ ಲೈಂಗಿಕ ಸಂಬಂಧ ಹೊಂದಬಹುದು. ಆದರೆ, ಎಲ್ಲಿಯವರೆಗೆ ಕಾಂಡೋಮ್‌ ಬಳಸುತ್ತೀರೋ ಅಲ್ಲಿಯವರೆಗೆ ಯಾವ ಸಮಸ್ಯೆಯೂ ಇಲ್ಲ' ಎಂಬ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ'ಎಂಬ ಹೇಳಿಕೆಯನ್ನು ಹರ್ಷವರ್ಧನ್‌ ನೀಡಿದ್ದರು. ಈಗ ತಮ್ಮ ವೆಬ್ ತಾಣದಲ್ಲಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವೇನಿದೆ ಇದಕ್ಕೆ ನಿಷೇಧ ಹೇರುವುದು ಒಳ್ಳೆಯದು ಎಂದಿದ್ದಾರೆ.

ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೋಧನೆಗಿಂತ ಮೌಲ್ಯ ಶಿಕ್ಷಣ ಕೋರ್ಸ್ ಪಠ್ಯದಲ್ಲಿ ಅಳವಡಿಸುವುದು ಸೂಕ್ತ. ಲೈಂಗಿಕ ಶಿಕ್ಷಣ ನಿಷೇಧಿಸುವುದೇ ಒಳ್ಳೆಯದು. ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಯೋಗ ಮುಂತಾದ ಕೋರ್ಸ್ ಗಳನ್ನು ಕಡ್ಡಾಯಗೊಳಿಸಬೇಕು ಎಂದಿದ್ದಾರೆ. [ವಿವಾದ : ಕಾಂಡೋಮ್ ಬದಲು ನೈತಿಕ ಮೌಲ್ಯ ಧರಿಸಿ]

ಚಿಕ್ಕಮಕ್ಕಳಿಗೂ ಲೈಂಗಿಕ ಶಿಕ್ಷಣದ ಅರಿವಿರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರೂ ಆರೋಗ್ಯ ಸಚಿವರ ಹೇಳಿಕೆ ಅನೇಕರ ಹುಬ್ಬೇರಿಸಿದೆ. ತಮ್ಮ ಹೇಳಿಕೆ ಗುಲ್ಲೆಬ್ಬಿಸುತ್ತಿರುವ ಸೂಚನೆ ಪಡೆದುಕೊಂಡ ಹರ್ಷವರ್ಧನ್ ಅವರು ಪ್ರತಿಕ್ರಿಯೆ ನೀಡಿದ್ದು, 'ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸುರಕ್ಷಿತ ಲೈಂಗಿಕತೆ, ಲೈಂಗಿಕ ಶಿಕ್ಷಣದ ಮಹತ್ವ ಯಾವ ವಯೋಮಿತಿಯವರಿಗೆ ಸಿಗಬೇಕು ಎಂಬುದರ ಬಗ್ಗೆ ನಾನು ಹೇಳಿದ್ದು ಸರಿಯಿದೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹರ್ಷವರ್ಧನ್ ವಿರುದ್ಧ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಯೋಗ ಶಿಕ್ಷಣ ಕಡ್ಡಾಯಗೊಳಿಸಬೇಕು

ಯೋಗ ಶಿಕ್ಷಣ ಕಡ್ಡಾಯಗೊಳಿಸಬೇಕು

ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೋಧನೆಗಿಂತ ಮೌಲ್ಯ ಶಿಕ್ಷಣ ಕೋರ್ಸ್ ಪಠ್ಯದಲ್ಲಿ ಅಳವಡಿಸುವುದು ಸೂಕ್ತ. ಲೈಂಗಿಕ ಶಿಕ್ಷಣ ನಿಷೇಧಿಸುವುದೇ ಒಳ್ಳೆಯದು. ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಯೋಗ ಮುಂತಾದ ಕೋರ್ಸ್ ಗಳನ್ನು ಕಡ್ಡಾಯಗೊಳಿಸಬೇಕು ಎಂದಿದ್ದಾರೆ.

ಪುಣ್ಯಕ್ಕೆ ದೆಹಲಿ ಸಿಎಂ ಆಗಲಿಲ್ಲ

ಪುಣ್ಯಕ್ಕೆ ದೆಹಲಿ ಸಿಎಂ ಆಗಲಿಲ್ಲ ಆಗಿದ್ದರೆ ಕಾರ್ಯನಿರ್ವಹಣೆ ಹೇಗಿರುತ್ತಿತ್ತೋ

ನಾನ್ಸೆನ್ ಮಾತನಾಡಿದ್ರೆ ಫೇಮಸ್

ನಾನ್ಸೆನ್ ಮಾತನಾಡಿದ್ರೆ ಫೇಮಸ್ ಆಗಬಹುದು ಎಂಬುದಕ್ಕೆ ಇದೇ ನಿರ್ದಶನ ಸಾಕು.

ನಿಷೇಧ ಯಾವುದಕ್ಕೆ. ಯಾವ ಕಾರಣಕ್ಕೆ

ನಿಷೇಧ ಯಾವುದಕ್ಕೆ. ಯಾವ ಕಾರಣಕ್ಕೆ ಶಾಲೆಗಳಲ್ಲಿ ಚಾಲ್ತಿ ಇಲ್ಲದನ್ನು ನಿಷೇಧಿಸುವುದೆ?

ಭಾರತೀಯ ಸಂಸ್ಕೃತಿ ಏಡ್ಸ್ ಉಳಿಸಬಲ್ಲದೆ?

ಭಾರತೀಯ ಸಂಸ್ಕೃತಿ ಏಡ್ಸ್ ಉಳಿಸಬಲ್ಲದೆ? ಡಾ. ಹರ್ಷವರ್ಧನ್ ಅವರನ್ನು ಕೇಳಿ

English summary
Days after Health Minister Harsh Vardhan made a statement about 'highlighting Indian morals to curb AIDS' comes another surprising statement saying that 'sex education in schools should be banned.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X