ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ತಾಯಂದಿರ ದಿನಕ್ಕೆ ಡೂಡಲ್‌ ಮೂಲಕ ಶುಭ ಕೋರಿದ ಗೂಗಲ್‌

By Nayana
|
Google Oneindia Kannada News

ನವದೆಹಲಿ, ಮೇ 13: ವಿಶ್ವ ತಾಯಂದಿರ ದಿನಾಚಣೆಯನ್ನು ಧೈತ್ಯ ಸರ್ಚಿಂಗ್ ಎಂಜಿನ್‌ ಗೂಗಲ್‌ ವಿಶೇಷವಾಗಿ ಆಚರಿಸಿದ್ದು, ವಿಶೇಷ ಡೂಡಲ್‌ ರಚಿಸುವ ಮೂಲಕ ವಿಶ್ವದಲ್ಲಿರುವ ಎಲ್ಲ ಅಮ್ಮಂದಿರಿಗೆ ಗೌರವ ಸಲ್ಲಿಸಿದೆ.

ಇಂದು ವಿಶ್ವ ತಾಯಂದಿರ ದಿನಾಚರಣೆಯ ಹಿನ್ನಲೆಯಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡುಗಡೆ ಮಾಡಿದೆ. ಕೈಯಲ್ಲಿ ಬಿಡಿಸಿದ ಪುಟಾಣಿ ಡೈನಾಸರ್‌ ಹಾಗೂ ತಾಯಿ ಡೈನಾಸರ್‌ ಜತೆಯಲ್ಲಿರುವ ಚಿತ್ರವನ್ನು ಡೂಡಲ್‌ನಲ್ಲಿ ಚಿತ್ರಿಸಲಾಗಿದ್ದು, ಯಾವುದೇ ಫಾಲಾಪೇಕ್ಷೆ ಇಲ್ಲದೇ ತನ್ನ ಮಗುವನ್ನು ಲಾಲಿಸಿ, ಪಾಲಿಸಿ ಬೆಳೆಸುವ ತಾಯಿಯ ನಿಸ್ವಾರ್ಥ ಮನಸ್ಸಿಗೆ ಡೂಡಲ್‌ ಮೂಲಕ ಗೂಗಲ್ ಗೌರವ ಸೂಚಿಸಿದೆ.

ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!

ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನಾಚರಣೆ ಎಂದು ಆಚರಿಸುವ ಸಂಪ್ರದಾಯವನ್ನು ಅಮೆರಿಕದಲ್ಲಿ ಆರಂಭಿಸಲಾಯಿತು. ಇದನ್ನೇ ಮಿಕ್ಕೆಲ್ಲ ದೇಶಗಳು ಮುಂದಿನ ದಿನಗಳಲ್ಲಿ ಆರಂಭಿಸಿದವು.

Happy Mother’s Day 2018: Google celebrates day with colourful doodle

ಜಗತ್ತಿನ ವಿವಿಧ ಭಾಗಗಳಲ್ಲಿ ತಾಯಂದಿರ ದಿನಾಚರಣೆಯನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತಿದೆ. ಅದರಲ್ಲೂ ಮಾರ್ಚ್‌ ಹಾಗು ಮೇ ತಿಂಗಳುಗಳಲ್ಲಿ ಸಾಮಾನ್ಯವಾಗಿದೆ. 40ಕ್ಕೂ ಹೆಚ್ಚು ದೇಶಗಳಲ್ಲಿ ಇದೇ ದಿನವನ್ನು ಆಚರಿಸಲಾಗುವುದು. ಇಂದು ವಿಶ್ವ ಅಮ್ಮಂದಿರ ದಿ‌ನ. 1908 ರಲ್ಲಿ ಸಮುದಾಯ ಆರೋಗ್ಯಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದ ಅನ್ನಾ ಜಾರ್ವಿಸ್ ಅವರ ಸ್ಮರಣಾರ್ಥ ಈ ದಿನ ಆಚರಿಸಲಾಗುತ್ತಿದೆ.

English summary
The Google Doodle today (May 13) features a dinosaur walking with a baby dinosaur. The colourful doodle speaks of the love, compassion, protection and care a mother harbours for her child. It also has colourful palm imprints which makes it a heartwarming picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X